ತುಮಕೂರು: ಹಿಂದೂ ಧರ್ಮದಲ್ಲಿ ಮಾತ್ರ ಜಾತಿ ಪದ್ಧತಿ ಎನ್ನಲಾಗುತ್ತಿದ್ದರೂ, ಅದೇ ರೀತಿ ಇಸ್ಲಾಂ ಧರ್ಮದಲ್ಲೂ ಜಾತಿ- ಉಪಜಾತಿಗಳು ಇವೆ. ಇದಕ್ಕೆ ಪುಷ್ಠಿ ನೀಡುವಂತೆ ಮುಸ್ಲಿಂ ಸಮುದಾಯದಲ್ಲಿನ ಪಿಂಜಾರ ಮತ್ತು ನದಾಫ್ ಉಪಜಾತಿಗಳು ವಿಶೇಷ ಮೀಸಲಾತಿಗಾಗಿ (Reservation) ಸರ್ಕಾರಕ್ಕೆ ಆಗ್ರಹಿಸಿದೆ.
ಇಸ್ಲಾಂ ಧರ್ಮದಲ್ಲಿನ ಉಪಜಾತಿಗಳಾದ ಪಿಂಜಾರ ಮತ್ತು ನದಾಫ್ ಪಂಗಡಗಳಿಗೆ ಪ್ರವರ್ಗ 1ರ ಮೀಸಲಾತಿ ಕೊಡಬೇಕು ಎಂಬ ಒತ್ತಾಯ ಕೇಳಿ ಬಂದಿದೆ. ಮುಸ್ಲಿಂ ಸಮುದಾಯದಲ್ಲಿರುವ ಪಿಂಜಾರ, ನದಾಫ್ ಉಪಜಾತಿಯವರಿಗೆ ಪ್ರವರ್ಗ 1ರ ಜಾತಿ ಪ್ರಮಾಣ ಪತ್ರ ನೀಡಬೇಕು ಎಂದು ಒತ್ತಾಯಿಸಿ ಕೊರಟಗೆರೆ ತಹಸೀಲ್ದಾರ್ ನಹಿದ ಜಂಜಂ ಅವರಿಗೆ ಜಿಲ್ಲಾ ಪಿಂಜಾರ, ನದಾಫ್ ಸಂಘದ ಸದಸ್ಯರು ಮನವಿ ಸಲ್ಲಿಸಿದರು.
Advertisement
Advertisement
ನಂತರ ಮಾತನಾಡಿದ ಸಂಘದ ಸದಸ್ಯರು, ಧಾರ್ಮಿಕವಾಗಿ ಇಸ್ಲಾಂ ಧರ್ಮದ ಅನುಯಾಯಿಗಳಾಗಿರುವ ಪಿಂಜಾರ, ನದಾಫ್ ಸಮುದಾಯದವರು ಶಾಲಾ ದಾಖಲಾತಿ ಪಡೆಯುವಾಗ ಮುಸ್ಲಿಂ ಎಂದಷ್ಟೇ ನಮೂದಿಸಲಾಗಿದೆ. ಉಪ ಜಾತಿ ನಮೂದಿಸಲಾಗಿಲ್ಲ. ಇದಕ್ಕೆ ಸಂಬಧಿಸಿದಂತೆ ರಾಜ್ಯ ಸರ್ಕಾರದ ಆದೇಶದಂತೆ ಪಿಂಜಾರ ಪಂಗಡದರು ಪ್ರವರ್ಗ 1ರ ಜಾತಿ ಪ್ರಮಾಣ ಪತ್ರ ಪಡೆಯಲು ಅರ್ಹರಾಗಿರುತ್ತಾರೆ ಎಂದರು. ಇದನ್ನೂ ಓದಿ: ಕಲ್ಯಾಣ ರಾವ್ ಮುಚಳಂಬಿ ಪ್ರಥಮ ಪುಣ್ಯ ಸ್ಮರಣೆ – ಐವರಿಗೆ ಕಲ್ಯಾಣಶ್ರೀ ಪ್ರಶಸ್ತಿ ಪ್ರದಾನ
Advertisement
Advertisement
ತುಮಕೂರು (Tumkur) ಜಿಲ್ಲಾಧಿಕಾರಿಗಳ (DC) ಆದೇಶದ ಪ್ರಕಾರ ಅಲ್ಪಸಂಖ್ಯಾತರ ಆಯೋಗ ನೀಡಿರುವ ಆದೇಶದಲ್ಲಿ ಸ್ಪಷ್ಟವಾಗಿ ತಿಳಿದಿರುವಂತೆ ನಮ್ಮ ಸಂಘದ ಪ್ರಮಾಣ ಪತ್ರವನ್ನೇ ದಾಖಲೆಯನ್ನಾಗಿ ಪರಿಗಣಿಸಿ ಅಫಿಡೆವಿಟ್ ಪಡೆದುಕೊಂಡು ಜನಾಂಗಕ್ಕೆ ಜಾತಿ ಪ್ರಮಾಣ ಪತ್ರ ನೀಡಬೇಕು ಎಂದು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಭಾರೀ ಮಳೆ- KRS ಡ್ಯಾಂನ ಒಳ, ಹೊರ ಹರಿವು ಹೆಚ್ಚಳ