ನವದೆಹಲಿ: ಯುಎಸ್ ವೀಸಾ (US Visa) ಪಡೆಯಲು ಪರದಾಡುತ್ತಿದ್ದ ಭಾರತೀಯರಿಗೆ ಅಮೆರಿಕ (America) ರಾಯಭಾರ ಕಚೇರಿ ಗುಡ್ ನ್ಯೂಸ್ ನೀಡಿದೆ. ಅಮೆರಿಕ ವೀಸಾ ಪಡೆಯಲು ಇನ್ಮುಂದೆ ಭಾರತೀಯರು (Indians) ಸುದೀರ್ಘ ಅವಧಿವರೆಗೆ ಕಾಯುವ ಪರಿಸ್ಥಿತಿ ಇರಲ್ಲ ಎಂದು ತಿಳಿಸಿದೆ.
ಅಮೆರಿಕ ವೀಸಾ ಪಡೆಯಲು ಭಾರತೀಯರು 500 ದಿನಗಳಿಗೂ ಹೆಚ್ಚು ಕಾಲ ಕಾಯುವಂತಿತ್ತು. ಈ ದೀರ್ಘಾವಧಿ ಕಾಯುವಿಕೆಗೆ ಕಡಿವಾಣ ಹಾಕಲು ಅಮೆರಿಕ ಹೊಸ ನಿಯಮಗಳನ್ನು ಜಾರಿಗೊಳಿಸಿದೆ. ಈ ಕುರಿತು ಅಮೆರಿಕ ರಾಯಭಾರ ಕಚೇರಿ ಟ್ವೀಟ್ ಮಾಡಿ ಮಾಹಿತಿ ಹಂಚಿಕೊಂಡಿದೆ. ಇದನ್ನೂ ಓದಿ: ಟಿಎಂಸಿ ಕಾರ್ಯಕರ್ತರ 2 ಗುಂಪಿನ ನಡುವೆ ಗಲಾಟೆ, ಗುಂಡಿನ ದಾಳಿ – ಹಲವರಿಗೆ ಗಾಯ
Advertisement
Advertisement
“ನೀವು ಮುಂದೆ ಅಂತಾರಾಷ್ಟ್ರೀಯ ಪ್ರಯಾಣ ಮಾಡುವವರಿದ್ದೀರಾ? ಹಾಗಿದ್ರೆ ನೀವು ನಿಮ್ಮ ಸ್ಥಳದಲ್ಲಿನ ಅಮೆರಿಕದ ಎಂಬೆಸಿ ಅಥವಾ ಕಾನ್ಸುಲೇಟ್‌ನಲ್ಲಿ ವೀಸಾ ಅಪಾಯಿಟ್‌ಮೆಂಟ್ ಪಡೆಯಲು ಸಾಧ್ಯವಾಗಲಿದೆ. ಉದಾಹರಣೆಗೆ, ಬ್ಯಾಂಕಾಕ್‌ನಲ್ಲಿನ ಅಮೆರಿಕದ ಎಂಬೆಸಿಯು ಮುಂಬರುವ ತಿಂಗಳುಗಳಲ್ಲಿ ಥೈಲ್ಯಾಂಡ್‌ನಲ್ಲಿರುವ ಭಾರತೀಯರಿಗೆ B1, B2 ಅಪಾಯಿಂಟ್‌ಮೆಂಟ್ ಅವಕಾಶವನ್ನು ತೆರೆಯಲಿದೆ” ಎಂದು ರಾಯಭಾರ ಕಚೇರಿ ಟ್ವೀಟ್ ಮಾಡಿ ತಿಳಿಸಿದೆ.
Advertisement
ಭಾರತದಲ್ಲಿ ವೀಸಾ ನೀಡುವ ಪ್ರಕ್ರಿಯೆಗೆ ಚುರುಕು ನೀಡುವ ಸಂಬಂಧ ಇತ್ತೀಚೆಗೆ ಅಮೆರಿಕ ಕೆಲ ನೂತನ ಕ್ರಮಗಳಿಗೆ ಚಾಲನೆ ನೀಡಿದೆ. ವೀಸಾ ಕೋರಿ ಮೊದಲ ಬಾರಿಗೆ ಅರ್ಜಿ ಸಲ್ಲಿಸುವವರಿಗೆ ವಿಶೇಷ ಸಂದರ್ಶನ ಆಯೋಜನೆ, ಕಾನ್ಸುಲೇಟ್ ಕಚೇರಿಗಳಲ್ಲಿ ಸಿಬ್ಬಂದಿ ಸಂಖ್ಯೆಯಲ್ಲಿ ಹೆಚ್ಚಳ ಸೇರಿದಂತೆ ಅನೇಕ ಕ್ರಮಗಳಿಗೆ ಚಾಲನೆ ಕೊಟ್ಟಿದೆ. ಇದನ್ನೂ ಓದಿ: ಸೋಮವಾರ ಮೋದಿ ಒನ್ ಡೇ ರಾಜ್ಯ ಪ್ರವಾಸ – ಬೆಂಗಳೂರು, ತುಮಕೂರು ಸರ್ಕಾರಿ ಕಾರ್ಯಕ್ರಮಗಳಲ್ಲಿ ಭಾಗಿ
Advertisement
Do you have upcoming international travel? If so, you may be able to get a visa appointment at the U.S. Embassy or Consulate in your destination. For example, @USEmbassyBKK has opened B1/B2 appointment capacity for Indians who will be in Thailand in the coming months. pic.twitter.com/tjunlBqeYu
— U.S. Embassy India (@USAndIndia) February 3, 2023
ಜ.21ರಂದು ಈ ಕ್ರಮಗಳಿಗೆ ಚಾಲನೆ ನೀಡಿದ್ದು, ಇದರ ಭಾಗವಾಗಿ ದೆಹಲಿಯಲ್ಲಿರುವ ರಾಯಭಾರ ಕಚೇರಿ, ಮುಂಬೈ, ಚೆನ್ನೈ, ಕೋಲ್ಕತ್ತಾ ಹಾಗೂ ಹೈದರಾಬಾದ್‌ನಲ್ಲಿರುವ ಕಾನ್ಸುಲೇಟ್ ಕಚೇರಿಗಳಲ್ಲಿ ವೀಸಾ ನೀಡುವ ಸಂದರ್ಶನ ನಡೆಸಲಾಯಿತು.
ಭಾರತದಲ್ಲಿ ಅಮೆರಿಕ ಮಿಷನ್, ಕಳೆದ ಎರಡು ವಾರಗಳ ಹಿಂದೆ 2,50,000ಕ್ಕೂ ಅಧಿಕ ಹೆಚ್ಚುವರಿ ಬಿ1/ ಬಿ2 ಅಪಾಯಿಂಟ್‌ಮೆಂಟ್‌ಗಳನ್ನು ಬಿಡುಗಡೆ ಮಾಡಿತ್ತು.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k