ಮುಂಬೈ: ಜಿಯೋ ಧನ್ ಧನಾ ಧನ್ ಯೋಜನೆಗೆ ಪ್ರತಿಯಾಗಿ ಏರ್‍ಟೆಲ್ ಈಗ ಕಡಿಮೆ ಬೆಲೆಯಲ್ಲಿ ಡೇಟಾ ನೀಡುವ ಆಫರ್‍ಗಳನ್ನು ಪರಿಚಯಿಸಿದೆ.
399ರೂ. ರಿಚಾರ್ಜ್:
70 ದಿನಗಳ ವ್ಯಾಲಿಡಿಟಿ ಹೊಂದಿರುವ ಈ ಪ್ಯಾಕ್‍ನಲ್ಲಿ ಗ್ರಾಹಕರಿಗೆ ಪ್ರತಿದಿನ ಗರಿಷ್ಠ 1 ಜಿಬಿ 4ಜಿ ಡೇಟಾ ಮತ್ತು ಉಚಿತ ಕರೆಗಳು ಸಿಗುತ್ತದೆ. ಆದರೆ ಇಲ್ಲಿ ಕೆಲ ನಿಬಂಧನೆ ಇದ್ದು ಒಂದು ದಿನದಲ್ಲಿ ಗರಿಷ್ಠ 300 ನಿಮಿಷಗಳ ಕಾಲ ಹೊರ ಹೋಗುವ ಕರೆಗಳಿಗೆ ಯಾವುದೇ ಶುಲ್ಕ ಇಲ್ಲ. ಒಟ್ಟು 70 ದಿನಗಳಲ್ಲಿ 3 ಸಾವಿರ ನಿಮಿಷ ಸ್ಥಳೀಯ ಮತ್ತು ಎಸ್‍ಟಿಡಿ ಕರೆಗಳು ಉಚಿತವಾಗಿದ್ದು, ಈ ಮಿತಿಯನ್ನು ದಾಟಿದ ಬಳಿಕ ಪ್ರತಿ ಕರೆಯ 1 ನಿಮಿಷಕ್ಕೆ 10 ಪೈಸೆ ಶುಲ್ಕ ವಿಧಿಸುತ್ತದೆ.
Advertisement
345 ರೂ. ರಿಚಾರ್ಜ್:
28 ದಿನಗಳ ಕಾಲ ವ್ಯಾಲಿಡಿಟಿ ಹೊಂದಿರುವ ಈ ಆಫರ್‍ನಲ್ಲಿ ಪ್ರತಿ ದಿನ 2ಜಿಬಿ 4ಜಿ ಡೇಟಾ ಸಿಗುತ್ತದೆ ಅಷ್ಟೇ ಅಲ್ಲದೇ ಡೇಟಾ ಬಳಕೆಗೆ ಯಾವುದೇ ನಿಬಂಧನೆ ಇಲ್ಲ. ಈ ಹಿಂದೆ 500 ಎಂಬಿ ಡೇಟಾ ಬೆಳಗ್ಗೆ 6 ಗಂಟೆ ರಾತ್ರಿ 12 ಗಂಟೆಯವರೆಗೆ, ನಂತರ 500 ಎಂಬಿ ಡೇಟಾ ಮಧ್ಯರಾತ್ರಿ 12 ಗಂಟೆಯಿಂದ ಬಳಗ್ಗೆ 6 ಗಂಟೆಯವರೆಗೆ ಬಳಸಬೇಕಿತ್ತು.
Advertisement
244 ರಿಚಾರ್ಜ್:
70 ದಿನಗಳ ವ್ಯಾಲಿಡಿಟಿ ಹೊಂದಿರುವ ಈ ಆಫರ್‍ನಲ್ಲಿ ಗ್ರಾಹಕರಿಗೆ ಪ್ರತಿದಿನ 1 ಜಿಬಿ 4ಜಿ ಡೇಟಾ ಸಿಗುತ್ತದೆ. ಡೇಟಾ ಬಳಕೆಗೆ ಯಾವುದೇ ನಿಬಂಧನೆ ಇಲ್ಲ. ಆದರೆ ಈ ಆಫರ್‍ನಲ್ಲಿ ಏರ್‍ಟೆಲ್‍ನಿಂದ ಏರ್‍ಟೆಲ್‍ಗೆ ಹೋಗುವ ಕರೆಗಳು ಮಾತ್ರ ಉಚಿತವಾಗಿದೆ. ಪ್ರತಿದಿನ 300 ನಿಮಿಷದ ಕರೆಗಳು ಉಚಿತ ಎಂದು ಏರ್‍ಟೆಲ್ ತಿಳಿಸಿದೆ.
Advertisement
ಆದರೆ ಈ ಆಫರ್ ಲಾಭವನ್ನು ಪಡೆಯಬೇಕಾದರೆ ಪ್ರಿ ಪೇಯ್ಡ್ ಗ್ರಾಹಕರು ಆನ್‍ಲೈನ್ ಮೂಲಕ ಹಣವನ್ನು ಪಾವತಿ ಮಾಡಿ ರಿಚಾರ್ಜ್ ಮಾಡಬೇಕಾಗುತ್ತದೆ.
Advertisement
ಇದನ್ನೂ ಓದಿ: ಜಿಯೋ ಬಳಕೆದಾರರಿಗೆ ಮತ್ತೊಂದು ಗುಡ್‍ನ್ಯೂಸ್
ಇದನ್ನೂ ಓದಿ: ಜಿಯೋ ಎಫೆಕ್ಟ್: 7 ವರ್ಷದಲ್ಲಿ ಮೊದಲ ಬಾರಿಗೆ ಟೆಲಿಕಾಂ ಕಂಪೆನಿಗಳ ಆದಾಯ ಭಾರೀ ಇಳಿಕೆ
ಇದನ್ನೂ ಓದಿ:ಸಿಮ್ ಆಯ್ತು ಜಿಯೋ ಸೆಟ್‍ಟಾಪ್ ಬಾಕ್ಸ್: ವಿಶೇಷತೆ ಏನು? ಬೆಲೆ ಎಷ್ಟು? ಆರಂಭ ಯಾವಾಗ?