ರಾಜಕಾರಣದಲ್ಲಿ ಯಶಸ್ವಿಯಾಗಬೇಕಾದರೆ, ಕಬಡ್ಡಿನೂ ಗೊತ್ತಿರಬೇಕು, ಚದುರಂಗದಾಟನೂ ಗೊತ್ತಿರಬೇಕು: ಬಿ.ವೈ.ವಿಜಯೇಂದ್ರ

Public TV
3 Min Read
B. Y. Vijayendra

ಬಾಗಲಕೋಟೆ: ರಾಜಕಾರಣದಲ್ಲಿ ಯಶಸ್ವಿಯಾಗಬೇಕಾದರೆ, ಕಬಡ್ಡಿನೂ ಗೊತ್ತಿರಬೇಕು, ಚದುರಂಗದಾಟನೂ ಗೊತ್ತಿರಬೇಕು ಎಂದು ಬಿ.ವೈ.ವಿಜಯೇಂದ್ರ ಅವರು ಹೇಳಿದ್ದಾರೆ.

ಬಾಗಲಕೋಟೆ ಜಿಲ್ಲೆ ಇಳಕಲ್ ನಗರದಲ್ಲಿ ಯಡಿಯೂರಪ್ಪ ಚುನಾವಣಾ ರಾಜಕಾರಣದಿಂದ ಹಿಂದೆ ಸರಿದ ವಿಚಾರವಾಗಿ ಮಾಧ್ಯಮದವರೊಂದಿಗೆ ಪ್ರತಿಕ್ರಿಯಿಸಿದ ಅವರು, ನಿಕಟಪೂರ್ವ ಸಿಎಂ, ನಮ್ಮ ತಂದೆ ಸ್ಪಷ್ಟವಾಗಿ ಹೇಳಿದ್ದಾರೆ. ನಾನು ಚುನಾವಣಾ ರಾಜಕಾರಣದಿಂದ ಹಿಂದೆ ಸರಿಯುತ್ತೇನೆ. ನೀವು ಯಾರಾದರೂ ಶಿಕಾರಿಪುರದಲ್ಲಿ ಸ್ಪರ್ಧಿಸುತ್ತೀರಾ ಎಂದು ಕ್ಷೇತ್ರದ ಮುಖಂಡರನ್ನು ಕೇಳಿದರು. ಕ್ಷೇತ್ರದ ಜನತೆ ಮುಂದೆ ಹೇಳಿದಾಗ ಜನತೆ. ತಾವೇ ನಿಲ್ಲಬೇಕು ಇಲ್ಲ. ನಿಮ್ಮ ಮಗನನ್ನು ನಿಲ್ಲಿಸಿ ಅಂತ ಕ್ಷೇತ್ರದ ಮುಖಂಡರು, ಕಾರ್ಯಕರ್ತರು ಹೇಳಿದರು. ಆ ಹಿನ್ನೆಲೆ ಪೂಜ್ಯ ತಂದೆಯವರು ನನ್ನ ಬಗ್ಗೆ ಹೇಳಿಕೆ ಕೊಟ್ಟಿದ್ದಾರೆ. ಆದರೆ ಬಿಜೆಪಿ ಒಂದು ರಾಷ್ಟ್ರೀಯ ಪಕ್ಷ. ಯಾವುದೇ ಕ್ಷೇತ್ರದಲ್ಲಿ ಅಭ್ಯರ್ಥಿ ಆಯ್ಕೆಯಾಗಬೇಕಾದರೂ, ಅಂತಿಮವಾಗಿ ನಮ್ಮ ರಾಜ್ಯ ಹಾಗೂ ರಾಷ್ಟ್ರೀಯ ನಾಯಕರು ತೀರ್ಮಾನ ಮಾಡಬೇಕು. ಮಾನ್ಯ ಯಡಿಯೂರಪ್ಪ ಕೂಡ ಇದನ್ನು ಸ್ಪಷ್ಟವಾಗಿ ಹೇಳಿದ್ದಾರೆ. ಹಾಗಾಗಿ ಮುಂದಿನ ದಿನಗಳಲ್ಲಿ ಪಕ್ಷ ತೀರ್ಮಾನ ಮಾಡುತ್ತದೆ ಎಂದಿದ್ದಾರೆ. ಇದನ್ನೂ ಓದಿ: ಕಳ್ಳನಾಯಕಿಯ ವಿಚಾರಣೆ ವಿರೋಧಿಸಿ ಕಾಂಗ್ರೆಸ್ ಮೌನ ಪ್ರತಿಭಟನೆ ನಡೆಸುತ್ತಿದೆ – ಕಾಂಗ್ರೆಸ್ ಕಾಲೆಳೆದ ಬಿಜೆಪಿ

bsy 123

ಮರಿ ಯಡಿಯೂರಪ್ಪ ಎಂಬ ತಮ್ಮ ಹೇಳಿಕೆ ಬಗ್ಗೆ ಮಾತನಾಡಿದ ಅವರು, ರಾಜಕಾರಣ ಅಂದರೆ ತಂತಿ ಮೇಲೆ ನಡೆದ ಹಾಗೆ. ಮುಂದೆ ಬರುವ ದಿನದಲ್ಲಿ ರಾಜಕಾರಣದಲ್ಲಿ ಯಶಸ್ವಿಯಾಗಬೇಕಾದರೆ, ಕಬಡ್ಡಿನೂ ಗೊತ್ತಿರಬೇಕು ಚದುರಂಗದಾಟ ಕೂಡ ಗೊತ್ತಿರಬೇಕು. ಈ ಹಿನ್ನೆಲೆಯಲ್ಲಿ ಆ ಮಾತನ್ನು ಹೇಳಿದ್ದೇನೆ. ಇಂದು ಕರ್ನಾಟಕದಲ್ಲಿ ವಿರೋಧ ಪಕ್ಷದವರು ಮುಖ್ಯಮಂತ್ರಿ ಸ್ಥಾನಕ್ಕೆ ಕಿತ್ತಾಡುತ್ತಿದ್ದಾರೆ. ವಿರೋಧ ಪಕ್ಷದ ನಡುವಳಿಕೆಗಳು ಬೀದಿನಾಟಕ ಆಗಿ ಪರಿವರ್ತನೆಯಾಗಿದೆ. ಅದರಲ್ಲೂ ಕಾಂಗ್ರೆಸ್ ಪಕ್ಷದ ಕಿತ್ತಾಟ ರಾಜ್ಯದ ಜನ ಇಂದು ಕಾಂಗ್ರೆಸ್ ಸ್ಥಿತಿ ನೋಡಿ ನಗುತ್ತಿದ್ದಾರೆ. ಯಡಿಯೂರಪ್ಪ ಅವರು ತುಳಿತಕ್ಕೊಳಗಾದ ಬಡವರು ಹಾಗೂ ರೈತರನ್ನು ಹೇಗೆ ಸಮನಾಗಿ ತೆಗೆದುಕೊಂಡು ಹೋಗಿದ್ದರೋ, ಅದೇ ರೀತಿ ಬೊಮ್ಮಾಯಿ ಕೆಲಸ ಮಾಡುತ್ತಿದ್ದಾರೆ. ಮುಂಬರುವ ಚುನಾವಣೆಯಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುತ್ತದೆ ಎಂಬ ವಿಶ್ವಾಸವಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

HDK 2

ಕುಮಾರಸ್ವಾಮಿ ಪಂಚರತ್ನ ಯೋಜನೆ ಯಾತ್ರೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಚುನಾವಣೆ ಬಂದಾಗ ಎಲ್ಲ ರಾಜಕೀಯ ಪಕ್ಷದವರು ಅವರದ್ದೇ ಆದ ತಂತ್ರಗಳನ್ನು ಮಾಡುತ್ತಾರೆ. ರಾಜ್ಯದ ಜನರಂತೂ ಬಹಳ ಪ್ರಜ್ಞಾವಂತರಿದ್ದಾರೆ. ಯಾರನ್ನು ಆಯ್ಕೆ ಮಾಡಿದರೆ ರಾಜ್ಯದ ಅಭಿವೃದ್ಧಿ ಆಗುತ್ತದೆ. ದೇಶದ ಜನ ನರೇಂದ್ರ ಮೋದಿಯಂತಹ ದೃಢ ನಾಯಕತ್ವದ ಬಗ್ಗೆ ವಿಶ್ವಾಸವಿಟ್ಟುಕೊಂಡಿದ್ದಾರೆ. ಕರ್ನಾಟಕದಲ್ಲೂ ಬಿಜೆಪಿ ಸಂಪೂರ್ಣ ಬಹುಮತದಿಂದ ಅಧಿಕಾರದಲ್ಲಿರಬೇಕು ಎಂಬುದು ಜನರ ಆಸೆ. ಚುನಾವಣೆ ಬಂದಂತಹ ಸಂದರ್ಭದಲ್ಲಿ ತಂತ್ರ ಕುತಂತ್ರ ಸಹಜ. ಆದರೆ ಬಿಜೆಪಿ ಆಯ್ಕೆ ಖಚಿತ ಎಂದಿದ್ದಾರೆ. ಇದನ್ನೂ ಓದಿ: ಆಂಜನೇಯ ದೇವಸ್ಥಾನದ ಗೋಡೆಗೆ ಮೂತ್ರ ವಿಸರ್ಜನೆ ಮಾಡಿದ್ದ ವ್ಯಕ್ತಿ ಅರೆಸ್ಟ್

ರಾಜ್ಯದಲ್ಲಿ ಜಾತಿ ರಾಜಕಾರಣ ವಿಚಾರ: ಇದು ದುರಾದೃಷ್ಟ. ಅಣ್ಣ ಬಸವಣ್ಣನವರ ನಾಡಾದ ಕರ್ನಾಟಕದಲ್ಲಿ ಜಾತಿ ರಾಜಕಾರಣ ಸರಿಯಲ್ಲ. ಸರ್ವರಿಗೂ ಸಮಪಾಲು, ಸಮಬಾಳು, ಸಾಮಾಜಿಕ ನ್ಯಾಯ ಎಂದವರು ಬಸವಣ್ಣ. ರಾಜ್ಯದಲ್ಲಿ ಆ ರೀತಿ ಆಡಳಿತ ಕೊಟ್ಟವರು ದೇವರಾಜ ಅರಸು. ಅರಸು ನಂತರ ತುಳಿತಕ್ಕೆ ಒಳಗಾದ ಸಮಾಜಗಳಿಗೆ, ರೈತರು, ದಲಿತರು, ಹಿಂದುಳಿದವರ ಪರ ಆಡಳಿತ ನೀಡಿದ್ದು ಯಡಿಯೂರಪ್ಪ ಅವರು. ಆ ಕಾರಣಕ್ಕಾಗಿ ಯಡಿಯೂರಪ್ಪ ಅಧಿಕಾರದಲ್ಲಿ ಇರಲಿ, ಇಲ್ಲದೇ ಇರಲಿ ಅವರನ್ನು ಜನನಾಯಕ ಎಂದು ಜನರು ಒಪ್ಪಿದ್ದಾರೆ. ಹೀಗಾಗಿ ಜಾತಿ ಆಧಾರಿತವಾಗಿ ಚುನಾವಣೆ ಗೆಲ್ಲುತ್ತೇವೆ, ಅಧಿಕಾರ ಹಿಡಿಯುತ್ತೇವೆ ಎನ್ನುವುದು ಭ್ರಮೆ. ಬಿಜೆಪಿ ಎಲ್ಲ ಜಾತಿ, ಎಲ್ಲ ವರ್ಗ, ಎಲ್ಲ ಜಾತಿ, ಧರ್ಮಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅಧಿಕಾರಕ್ಕೆ ಬರುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *