ನವದೆಹಲಿ: ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Mamata Banerjee) ನೇತೃತ್ವದ ಟಿಎಂಸಿ (TMC) ಸರ್ಕಾರ ಪಂಚಾಯತ್ ಚುನಾವಣೆಯ ಸಮಯದಲ್ಲಿ ರಕ್ತದೊಂದಿಗೆ ಆಟವಾಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಆರೋಪಿಸಿದ್ದಾರೆ.
ಪಶ್ಚಿಮ ಬಂಗಾಳದ (West Bengal) ಕ್ಷೇತ್ರೀಯ ಪಂಚಾಯತ್ ರಾಜ್ ಪರಿಷತ್‌ನಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಭಾಗಿಯಾಗಿ ಮಾತನಾಡಿದ ಅವರು, ಪಕ್ಷವು ಮತದಾರರಿಗೆ ಬೆದರಿಕೆ ಹಾಕುತ್ತಿದೆ ಮತ್ತು ಅವರ ಜೀವನವನ್ನು ನರಕವಾಗಿಸಿದೆ. ಪ್ರಜಾಪ್ರಭುತ್ವದ ಚಾಂಪಿಯನ್ ಎಂದು ತಮ್ಮನ್ನು ತಾವು ಬಿಂಬಿಸಿಕೊಳ್ಳುವವರು ಇವಿಎಂ ತೊಡೆದುಹಾಕಲು ಪಿತೂರಿ ನಡೆಸುವವರು ಎಂದು ಹೇಳಿದರು. ಇದನ್ನೂ ಓದಿ: ಸಂಸತ್ತಿನಲ್ಲಿ ಅಂಗೀಕಾರವಾಗಿದ್ದ 4 ಮಸೂದೆಗಳಿಗೆ ರಾಷ್ಟ್ರಪತಿ ಸಹಿ
ಟಿಎಂಸಿ ಗೂಂಡಾಗಳಿಗೆ ಗುತ್ತಿಗೆ ನೀಡಿ ಮತ ಎಣಿಕೆ ದಿನದಂದು ಬೂತ್ ವಶಪಡಿಸಿಕೊಳ್ಳುವಂತೆ ಹೇಳಿದೆ. ಪಕ್ಷ ಕೆಲಸ ಮಾಡಲು ಮಾರಣಾಂತಿಕ ದಾಳಿಗಳನ್ನು ತನ್ನ ಸಾಧನವನ್ನಾಗಿ ಬಳಸುತ್ತಿದೆ. ಜುಲೈ 8ರಂದು ನಡೆದ ಚುನಾವಣೆಯಲ್ಲಿ ಹಿಂಸಾಚಾರದ ಭೀತಿಯ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಟಿಎಂಸಿ ಎರಡು ವರ್ಷಗಳ ಹಿಂದೆ ವಿಧಾನಸಭಾ ಚುನಾವಣೆಯ ಸಮಯದಲ್ಲಿ ಗೆದ್ದ ಜನಾದೇಶವನ್ನು ಹಾಗೆಯೇ ಉಳಿಸಿಕೊಂಡಿದೆ ಎಂದರು. ಇದನ್ನೂ ಓದಿ: ನನಗೆ ಸದ್ಯ ಮುಸ್ಲಿಂ ಮತಗಳು ಬೇಡ: 15 ವರ್ಷದ ನಂತ್ರ ಬೇಕು ಎಂದು ಅಸ್ಸಾಂ ಸಿಎಂ ಹೇಳಿದ್ಯಾಕೆ?
ವರದಿಗಳ ಪ್ರಕಾರ ಪಶ್ಚಿಮ ಬಂಗಾಳದಲ್ಲಿ ಪಂಚಾಯತ್ ಚುನಾವಣೆಗೆ (Panchayat Election) ಮುನ್ನಾ ತಿಂಗಳಿನಲ್ಲಿ ಚುನಾವಣಾ ಸಂಬಂಧಿತ ಹಿಂಸಾಚಾರದಲ್ಲಿ ಒಟ್ಟು 40 ಜನರು ಸಾವನ್ನಪ್ಪಿದ್ದಾರೆ. ಮತದಾನದ ದಿನವೇ 21 ಮಂದಿ ಸಾವನ್ನಪ್ಪಿದ್ದಾರೆ. ಇದೇ ವೇಳೆ ವಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ ಅವರು, ನಾವು ಸಂಸತ್ತಿನಲ್ಲಿ ಪ್ರತಿಪಕ್ಷಗಳ ಅವಿಶ್ವಾಸ ನಿರ್ಣಯವನ್ನು ಸೋಲಿಸಿದ್ದೇವೆ. ಇಡೀ ರಾಷ್ಟ್ರದಲ್ಲಿ ನಕಾರಾತ್ಮಕತೆಯನ್ನು ಹರಡುವವರಿಗೆ ತಕ್ಕ ಉತ್ತರವನ್ನು ನೀಡಿದ್ದೇವೆ. ವಿರೋಧ ಪಕ್ಷದ ಸದಸ್ಯರು ಸಂಸತ್ ಚರ್ಚೆ ನಡುವೆ ತೊರೆದರು. ಅವರು ಅವಿಶ್ವಾಸ ನಿರ್ಣಯದ ಮೇಲೆ ಮತ ಚಲಾಯಿಸಲು ಹೆದರುತ್ತಿದ್ದರು ಎಂಬುದು ಸತ್ಯ. ವಿರೋಧ ಪಕ್ಷಗಳಿಗೆ ಮಣಿಪುರದ (Manipur) ಬಗ್ಗೆ ಚರ್ಚೆ ಬೇಕಾಗಿಲ್ಲ. ದೇಶಕ್ಕಿಂತ ಅವರಿಗೆ ಪಕ್ಷವೇ ಮುಖ್ಯವಾಗಿದೆ ಎಂದು ಹರಿಹಾಯ್ದರು. ಇದನ್ನೂ ಓದಿ: ಭಾರತದಲ್ಲಿ ಏಕೆ ಮುಸ್ಲಿಮರನ್ನ ಕಂಡ್ರೆ ಇಷ್ಟೊಂದು ದ್ವೇಷ, ನಮ್ಮ ಮನದ ಮಾತನ್ನೂ ಕೇಳಿ – ಮೋದಿಗೆ ಮೌಲ್ವಿ ಮನವಿ
Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]