ನವದೆಹಲಿ: ಮೊದಲ ಬಾರಿಗೆ ಸಂಸದೆ ಆಗಿ ಆಯ್ಕೆಯಾಗಿರುವ ತೃಣಮೂಲ ಕಾಂಗ್ರೆಸ್ ಸಂಸದೆ(ಟಿಎಂಸಿ) ನುಸ್ರತ್ ಜಹಾನ್ ಅವರು ಸದಾ ಸುದ್ದಿಯಲ್ಲಿರುತ್ತಾರೆ. ಹಾಗೆಯೇ ಈ ಬಾರಿ ಅವರು ರೊಮ್ಯಾಂಟಿಕ್ ಲುಕ್‍ನಲ್ಲಿ ಪತಿ ಜೊತೆ ಕಾಣಿಸಿಕೊಂಡಿರುವ ಫೋಟೋಗಳ ಮೂಲಕ ಸುದ್ದಿಯಾಗಿದ್ದಾರೆ.
ಬಂಗಾಳಿ ನಟಿ ಹಾಗೂ ಸಂಸದೆ ನುಸ್ರತ್ ಅವರು ರಾಜಕೀಯಕ್ಕೆ ಪ್ರವೇಶ ಮಾಡಿದ ಬಳಿಕ ನಿರಂತರ ಚರ್ಚೆಯಲ್ಲಿದ್ದಾರೆ. ಮೊದಲು ಡ್ರೆಸ್ ವಿಚಾರಕ್ಕೆ ನುಸ್ರತ್ ಚರ್ಚೆಗೆ ಬಂದಿದ್ದರು. ನಂತರ ಹಣೆಗೆ ಸಿಂಧೂರ, ಕೈಗೆ ಬಳೆ ತೊಟ್ಟು ಕಲಾಪಕ್ಕೆ ಬಂದಿದ್ದು ಭಾರೀ ಚರ್ಚೆಗೆ ಕಾರಣವಾಗಿತ್ತು. ಇತ್ತೀಚಿಗಷ್ಟೆ ನುಸ್ರತ್ ಅವರು ತಮ್ಮ ಬಹುಕಾಲದ ಗೆಳೆಯ ನಿಖಿಲ್ ಜೈನ್ ಅವರನ್ನು ವರಿಸಿದ್ದರು. ಆದರೆ ರಾಜಕೀಯದಲ್ಲಿ ಬ್ಯುಸಿಯಿದ್ದ ಕಾರಣಕ್ಕೆ ಮದುವೆಯಾದ ಎರಡು ತಿಂಗಳ ಬಳಿಕ ಬ್ರೆಕ್ ತೆಗೆದುಕೊಂಡು ನುಸ್ರತ್ ಪತಿಯೊಂದಿಗೆ ಹನಿಮೂನ್‍ಗೆ ಹೋಗಿದ್ದಾರೆ. ಅಲ್ಲಿ ನುಸ್ರತ್ ಅವರು ಪತಿಯೊಂದಿಗೆ ತೆಗೆಸಿಕೊಂಡಿರುವ ರೊಮ್ಯಾಂಟಿಕ್ ಫೋಟೋಗಳು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
https://www.instagram.com/p/B0nSOhnHZ_-/?utm_source=ig_embed
ಪತಿಯೊಂದಿಗೆ ನುಸ್ರತ್ ಕಳೆದಿರುವ ಮಧುರ ಕ್ಷಣಗಳ ಫೋಟೋವನ್ನು ತಮ್ಮ ಇನ್‍ಸ್ಟಾಗ್ರಾಮ್ ಹಾಗೂ ಇತರೇ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ ಅವರ ಪತಿ ನಿಖಿಲ್ ಅವರು ಕೂಡ ಕೆಲ ಫೋಟೋಗಳನ್ನು ತಮ್ಮ ಇನ್‍ಸ್ಟಾ ಹಾಗೂ ಫೇಸ್‍ಬುಕ್‍ನಲ್ಲಿ ಪೋಸ್ಟ್ ಮಾಡಿದ್ದಾರೆ. ನುಸ್ರತ್ ಅವರು ಪೋಸ್ಟ್ ಮಾಡಿರುವ ಫೋಟೋದಲ್ಲಿ ಅವರು ಕಪ್ಪು ಹಾಗೂ ಬಿಳಿ ಬಣ್ಣದ ಸ್ಟ್ರೈಪ್ಸ್ ಇರುವ ಟಾಪ್ ಹಾಗೂ ಬಿಳಿ ಶಾಟ್ಸ್‍ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಫೋಟೋ ಲುಕ್‍ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.
ನುಸ್ರತ್ ಜಹಾನ್ ಅವರು ಅಂತರ ಧರ್ಮ ವಿವಾಹವಾಗಿರುವುದು ಈ ಹಿಂದೆ ಭಾರಿ ಚರ್ಚೆಗೆ ಕಾರಣವಾಗಿತ್ತು. ಆಗ ಧೈರ್ಯದಿಂದ ನುಸ್ರತ್ ಅವರು ಇದು ನನ್ನ ವೈಯಕ್ತಿಕ ವಿಚಾರ, ಬೇರೆಯವರು ತಲೆಹಾಕುವುದು ಸರಿಯಲ್ಲ. ನನ್ನ ಜೀವನದ ನಿರ್ಧಾರವನ್ನು ಯಾರು ತೆಗೆದುಕೊಳ್ಳಲು ಆಗುವುದಿಲ್ಲ. ನಾನು ಜನರನ್ನು ಮನುಷ್ಯತ್ವದಿಂದ ಅಳಿಯುತ್ತೇನೆ. ನಿಖಿಲ್ ಅವರು ಒಳ್ಳೆಯ ಮನುಷ್ಯ, ಆದ್ದರಿಂದ ನಾನು ಈ ನಿರ್ಧಾರಕ್ಕೆ ಬಂದೆ. ಈಗಿನ ಕಾಲದಲ್ಲೂ ಜನ ಧರ್ಮದ ಚೌಕಟ್ಟಿನಲ್ಲಿ ಬದುಕುತ್ತಿದ್ದಾರೆ ಎಂದರೆ ಅಚ್ಚರಿಯಾಗುತ್ತೆ ಎಂದು ತಿರುಗೇಟು ನೀಡಿದ್ದರು.
ನುಸ್ರತ್ ಅವರು ಸಂಸದೆಯಾದ ಬಳಿಕ ಹಲವು ವಿವಾದಗಳನ್ನು ಮಾಡಿಕೊಂಡಿದ್ದಾರೆ. ಅವರ ಉಡುಗೆ, ತೊಡುಗೆ, ಮದುವೆಯಾದ ಬಳಿಕ ಪತಿಯ ಜೈನ್ ಕುಟುಂಬಕ್ಕೆ ಸೇರಿದ್ದು ಹಾಗೂ ಹಿಂದೂ ಸಂಪ್ರದಾಯಗಳಲ್ಲಿ ಭಾಗಿಯಾಗಿರುವುದು ಸಖತ್ ಸುದ್ದಿಯಾಗಿತ್ತು. ಹಲವು ಟೀಕೆ ಟಿಪ್ಪಣಿಗಳ ನಡುವೆಯೂ ನುಸ್ರತ್ ಜಹಾನ ಇಸ್ಕಾನ್ ಮಂದಿರದ ಜಗನ್ನಾಥ ಯಾತ್ರೆಯಲ್ಲಿ ಭಾಗಿಯಾಗಿದ್ದರು. ಈ ಮೂಲಕ ತಮ್ಮ ವಿರುದ್ಧ ಫತ್ವಾ ಹೊರಡಿಸಿದ ಮುಸ್ಲಿಂ ಧರ್ಮಗುರುಗಳು ಮತ್ತು ಟೀಕಾಕಾರರಿಗೆ ಖಡಕ್ ಉತ್ತರ ನೀಡಿದ್ದರು.