ಕೋಲ್ಕತ್ತಾ: ತೃಣ ಮೂಲಕ ಕಾಂಗ್ರೆಸ್ ನಾಯಕ ಮತ್ತು ಲೋಕಸಭಾ ಮಾಜಿ ಸದಸ್ಯ ಬಾಬುಲ್ ಸುಪ್ರಿಯೊ ತಮಗೆ, ತಮ್ಮ ಪತ್ನಿ, ತಂದೆ ಮತ್ತು ಇಬ್ಬರು ಸಿಬ್ಬಂದಿ ಇಬ್ಬರಿಗೆ ಕೊರೊನಾ ವೈರಸ್ ದೃಢಪಟ್ಟಿರುವುದಾಗಿ ತಿಳಿಸಿದ್ದಾರೆ.
ಭಾರತೀಯ ಹಿನ್ನೆಲೆ ಗಾಯಕ ಮತ್ತು ಟೆಲಿವಿಷನ್ ಹೋಸ್ಟ್ ಆಗಿರುವ ಬಾಬುಲ್ ಸುಪ್ರಿಯೋ ಅವರು ಈ ಕುರಿತಂತೆ ತಮ್ಮ ಟ್ವಿಟ್ಟರ್ ಮೂಲಕ ಮಾಹಿತಿ ನೀಡಿದ್ದಾರೆ. ನನಗೆ, ನನ್ನ ಪತ್ನಿ, ಕೆಲ ಸಿಬ್ಬಂದಿಗೆ ಕೊರೊನಾ ಟೆಸ್ಟ್ ಮಾಡಿಸಿದಾಗ ಪಾಸಿಟಿವ್ ಬಂದಿದೆ. ಒಂದು ಕಾಕ್ಟೈಲ್ ಜಬ್ನ ಬೆಲೆ ರೂ.61,000ದಷ್ಟು ದುಬಾರಿಯಾಗಿದೆ. ಇದನ್ನು ಗಂಭೀರವಾಗಿ ಅಸ್ವಸ್ಥರಾಗಿರುವ ಕೊರೊನಾ ಸೋಂಕಿತರಿಗೆ ನೀಡಬೇಕಾಗಿದೆ. ನನ್ನ ತಂದೆ 84 ವರ್ಷದವರಾಗಿದ್ದು, ಅವರಿಗೆ ಕಾಕ್ಟೈಲ್ ಜಬ್ನ ಅಗತ್ಯವಿತ್ತು. ಹಾಗಾಗಿ ಅದನ್ನು ನಾನು ಕೂಡಲೇ ಖರೀದಿಸಿದೆ. ಆದರೆ ಬಡವರು ಖರೀದಿಸಲು ಹೇಗೆ ಸಾಧ್ಯ ಎಂದು ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ಬಿಜೆಪಿ ನಾಯಕ ಮನೋಜ್ ತಿವಾರಿಗೆ ಕೊರೊನಾ ಪಾಸಿಟಿವ್
Advertisement
Me, my wife, Dad, multiple staff, hv all tested positive, but my concern is the superhigh Rs.61000/- price of the Cocktail jab that needs to be given SOS to seriously ill #COVID19 patients•Dad who is 84, needed the jab SOS & I hv to buy it on-the-spot• Hw can the EWS afford it?
— Babul Supriyo (@SuPriyoBabul) January 4, 2022
Advertisement
ಅಂದರೆ ಗಂಭೀರವಾಗಿ ಅಸ್ವಸ್ಥರಾಗಿರುವ ಕೊರೊನಾ ಸೋಂಕಿತರಿಗೆ ನೀಡಬೇಕಾದ ಕಾಕ್ಟೈಲ್ ಲಸಿಕೆಯ ಬೆಲೆ 61,000 ರೂ. ಆಗಿದ್ದು, ನನ್ನ 84 ವರ್ಷದ ತಂದೆಗೆ ಅಗತ್ಯ ಇರುವುದರಿಂದ ಅದನ್ನು ತಕ್ಷಣ ಖರೀದಿಸಿದೆ. ಆದರೆ ಈ ಲಸಿಕೆಯನ್ನು ಆರ್ಥಿಕವಾಗಿ ದುರ್ಬಲಗೊಂಡಿರುವ ಜನರಿಗೆ ಖರೀದಿಸಲು ಹೇಗೆ ಸಾಧ್ಯವಾಗುತ್ತದೆ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ಗೆ ಕೊರೊನಾ
Advertisement
Advertisement
ಮತ್ತೊಂದೆಡೆ ಇಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಬಿಜೆಪಿ ನಾಯಕ ಮನೋಜ್ ತಿವಾರಿ ಅವರಿಗೆ ಕೊರೊನಾ ಪಾಸಿಟಿವ್ ಬಂದಿದ್ದು, ಈ ಬಗ್ಗೆ ಟ್ವೀಟ್ ಮಾಡುವ ಮೂಲಕ ಮಾಹಿತಿ ನೀಡಿದ್ದಾರೆ.