ರಕ್ಷಿತಾ ಪ್ರೇಮ್ ಸಹೋದರ ರಾಣಾ ನಟನೆಯ ಚಿತ್ರದ ಟೈಟಲ್ ಟೀಸರ್ ರಿಲೀಸ್

Public TV
2 Min Read
Elumale Rana Movie

ರುಣ್ ಕಿಶೋರ್ ಸುಧೀರ್ ನಿರ್ಮಾಣ ಮಾಡುತ್ತಿರುವ ಪುನೀತ್ ರಂಗಸ್ವಾಮಿ ನಿರ್ದೇಶನದ ಚೊಚ್ಚಲ ಸಿನಿಮಾದ ಟೈಟಲ್ ಟೀಸರ್ ರಿಲೀಸ್ ಆಗಿದೆ. ಬೆಂಗಳೂರಿನ ಒರಿಯನ್ ಮಾಲ್‌ನಲ್ಲಿ ನಿನ್ನೆ ಟೈಟಲ್ ಲಾಂಚ್ ಕಾರ್ಯಕ್ರಮ ನಡೆಯಿತು. ಕರುನಾಡ ಚಕ್ರವರ್ತಿ ಶಿವಣ್ಣ ಟೈಟಲ್ ಟೀಸರ್ ಮಾಡಿ ಇಡೀ ತಂಡಕ್ಕೆ ಶುಭ ಹಾರೈಸಿದರು. ಜೋಗಿ ಪ್ರೇಮ್ ಕೂಡ ಕಾರ್ಯಕ್ರಮಕ್ಕೆ ವಿಶೇಷ ಅಥಿಯಾಗಿ ಆಗಮಿಸಿ ಚಿತ್ರತಂಡಕ್ಕೆ ಬೆಸ್ಟ್ ವಿಷಸ್ ತಿಳಿಸಿದರು. ಸ್ಟಾರ್ ಡೈರೆಕ್ಟರ್ ತರುಣ್ ಸುಧೀರ್ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಏಳುಮಲೆ ಎಂಬ ಟೈಟಲ್ ಇಡಲಾಗಿದೆ. ರಕ್ಷಿತಾ ಸಹೋದರ ರಾಣಾ ಹಾಗೂ ಮಹಾನಟಿ ಖ್ಯಾತಿಯ ಪ್ರಿಯಾಂಕಾ ಜೋಡಿಯಾಗಿ ಅಭಿನಯಿಸುತ್ತಿದ್ದಾರೆ.

ಟೈಟಲ್ ಟೀಸರ್ ರಿಲೀಸ್ ಬಳಿಕ ಮಾತನಾಡಿದ ಶಿವಣ್ಣ , ಟೈಟಲ್ ಟೀಸರ್ ತುಂಬಾ ಚೆನ್ನಾಗಿದೆ. ಒಳ್ಳೆಯವರಿಗೆ ಒಳ್ಳೆದಾಗುತ್ತದೆ ಎನ್ನುವುದಕ್ಕೆ ಟೈಟಲ್ ಟೀಸರ್ ಸಾಕ್ಷಿ. ರಾಣಾ ತುಂಬಾ ಹ್ಯಾಂಡ್ಸಮ್ ಇದ್ದಾನೆ. ವಿಲನ್ ಸಮಯದಲ್ಲಿ ಅವನಿಗೆ ಹೇಳಿದ್ದೇ ಹೀರೋ ಆಗ್ತಾನೆ ಎಂದು. ಏಳುಮಲೆ ಪ್ರಾಮಿಸಿಂಗ್ ಆಗಿದೆ. ಪ್ರಿಯಾಂಕಾ ಫಸ್ಟ್ ಟೈಮ್ ಅನಿಸುವುದಿಲ್ಲ. ಹೊಸಬರು ಬರಬೇಕು ಸಿನಿಮಾ ಮಾಡಬೇಕು. ಮೆಚ್ಚುಗೆ ಬಂದ ಮೇಲೆ ಹಣ ಮಾಡೋದು ಹೆಚ್ಚಿಗೆ ಆಮೇಲೆ ಇದ್ದೇ ಇದೆ. ಅದು ತಾನಾಗಿಯೇ ಆಗಲಿದೆ. ಮೊದಲು ಮೆಚ್ಚಿಗೆ ಆಮೇಲೆ ಹೆಚ್ಚಿಗೆ ಎಂದು ಹೇಳಿದರು.

Elumale Rana Movie 1

ಜೋಗಿ ಪ್ರೇಮ್ ಮಾತನಾಡಿ, ಜೋಗಿ ಸಿನಿಮಾ ಮಾಡುವಾಗ ಅಪ್ಪಾಜಿ ಜೊತೆಯಲ್ಲಿ ಕಾಲ ಕಳೆದಿದ್ದೆ. ನಮ್ಮ ಕಾಡಿನವರು ಎಂದು ಹೇಳುತ್ತಿದ್ದರು. ನಮ್ಮ ಯಜಮಾನ್ರು ಶಿವಣ್ಣ ಲಾಂಚ್ ಮಾಡಿದ್ದಾರೆ. ನೂರಷ್ಟು ಸಿನಿಮಾ ಸಕ್ಸಸ್ ಆಗಲಿದೆ ಎಂದು ಶುಭ ಹಾರೈಸಿದರು.

ಚಿತ್ರದ ನಿರ್ಮಾಪಕ ತರುಣ್ ಸುಧೀರ್ ಮಾತನಾಡಿ, ಕರ್ನಾಟಕದ ಎಲ್ಲಾ ಭಾಗದಲ್ಲಿಯೂ ಏಳುಮಲೆ ಊರು ಹಾಗೂ ಮಲೆಮಹದೇಶ್ವರ ದೇವಸ್ಥಾನ, ಅದರ ಐತಿಹಾಸ ಸಿನಿಮಾ ಮೂಲಕ ಹೇಳುವುದರಲ್ಲಿ ನಿಸ್ಸಾಮರು ಅಂದರೆ ಶಿವಣ್ಣ ಹಾಗೂ ಪ್ರೇಮ್ ಸರ್. ಶಿವಣ್ಣ ಅವರಿಂದ ಟೈಟಲ್ ಲಾಂಚ್ ಆಗುತ್ತಿರುವುದು ಬ್ಲೆಸ್ಸಿಂಗ್. ಚಿತ್ರರಂಗ ಅನ್ನೋದು ಗೋಲ್ಡ್ ಮೈನಿಂಗ್. ಕೆಲವೊಮ್ಮೆ ಬೇಗ ಚಿನ್ನ ಸಿಗುತ್ತದೆ. ಮತ್ತೆ ಕೆಲವೊಮ್ಮೆ ಲೇಟ್ ಆಗಿ ಚಿನ್ನ ಸಿಗುತ್ತದೆ. ಚಿನ್ನಕ್ಕೆ ಬರ ಸಿಗುತ್ತದೆ. ಚಿನ್ನ ಕನ್ನಡ ಚಿತ್ರರಂಗದಲ್ಲಿದೆ. ಇವತ್ತು ಟೈಟಲ್ ಟೀಸರ್ ಲಾಂಚ್ ಮಾಡುತ್ತಿದ್ದೇವೆ. ಒಂದೊಳ್ಳೆ ಮೊತ್ತಕ್ಕೆ ಆನಂದ್ ಆಡಿಯೋ ಆಗಿದೆ. ಟೈಟಲ್ ರಿಲೀಸ್ ಗೂ ಮೊದ್ಲೇ ಸಿನಿಮಾ ಮಾರಾಟವಾಗಿದೆ. ಒಂದೊಳ್ಳೆ ಪ್ರಾಡೆಕ್ಟ್ ಹಾಗೂ ಕಂಟೆಂಟ್ ಇರುವ ಸಿನಿಮಾ ಬಂದರೆ ಅದಕ್ಕೆ ಬೆಲೆ ಇದೆ ಎಂದರು.

ನಿರ್ದೇಶಕ ಪುನೀತ್ ರಂಗಸ್ವಾಮಿ, ಇದು ಸಂಘರ್ಷದ ಕಥೆಯಲ್ಲ. ಇದೊಂದು ಪ್ರೇಮಕಥೆ. ಜೊತೆಗೆ ನಾವೇನು ತೆಗೆದುಕೊಂಡಿದ್ದೇವೆ ಆ ಕಾಲಘಟ್ಟದಲ್ಲಿ ನಡೆದ ಕಥೆ ಯಾವ ರೀತಿ ಪರಿಣಾಮ ಬೀರುತ್ತದೆ ಎಂಬುದನ್ನು ಚಿತ್ರದಲ್ಲಿ ಹೇಳಿದ್ದೇವೆ ಎಂದು ತಿಳಿಸಿದರು.

Elumale Rana Movie 2

ಚೌಕ ಮತ್ತು ಕಾಟೇರ ಚಿತ್ರಗಳ ನಿರ್ದೇಶಕ ತರುಣ್ ಕಿಶೋರ್ ಸುಧೀರ ಅವರು ಈ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಅಟ್ಲಾಂಟಾ ನಾಗೇಂದ್ರ ಅವರು ಚಿತ್ರಕ್ಕೆ ಸಹ-ನಿರ್ಮಾಪಕರಾಗಿದ್ದಾರೆ. ಈ ಚಿತ್ರವು ನೈಜ ಘಟನೆಯನ್ನು ಆಧರಿಸಿದೆ. ಭಾವನಾತ್ಮಕವಾದ ಕಥೆಯನ್ನು ಒಳಗೊಂಡಿರುವಂತಿದೆ ಟೀಸರ್. ಚಾಮರಾಜನಗರ, ಸೇಲಂ, ಈರೋಡ್ ಸೇರಿದಂತೆ ಕರ್ನಾಟಕ-ತಮಿಳುನಾಡು ಗಡಿ ಭಾಗದ ಸ್ಥಳಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ.

ಚಿತ್ರದಲ್ಲಿ ಯಾರಿದ್ದಾರೆ?
ಈ ಸಿನಿಮಾದಲ್ಲಿ ರಾಣಾ, ಪ್ರಿಯಾಂಕಾ ಆಚಾರ್ ಜೊತೆಗೆ ಜಗಪತಿ ಬಾಬು, ನಾಗಾಭರಣ, ಕಿಶೋರ್ ಕುಮಾರ್, ಸರ್ದಾರ್ ಸತ್ಯ, ಜಗಪ್ಪ ಇದ್ದಾರೆ. ಅದ್ವಿತ್ ಗುರುಮೂರ್ತಿ ಛಾಯಾಗ್ರಹಣ, ಕೆಎಂ ಪ್ರಕಾಶ್ ಸಂಕಲನ, ನಾಗಾರ್ಜುನ ಶರ್ಮಾ ಹಾಗೂ ಪುನೀತ್ ರಂಗಸ್ವಾಮಿ ಸಂಭಾಷಣೆ, ಡಿ ಇಮ್ಮನ್ ಸಂಗೀತ ಚಿತ್ರಕ್ಕಿದೆ. ಈ ಸಿನಿಮಾ ತಮಿಳು, ತೆಲುಗು, ಕನ್ನಡದಲ್ಲಿ ರಿಲೀಸ್ ಆಗುತ್ತಿದೆ.

Share This Article