ರಜನಿಕಾಂತ್ ನಟನೆಯ 170ನೇ ಸಿನಿಮಾದ ಟೈಟಲ್ ಟೀಸರ್ ರಿಲೀಸ್ ಆಗಿದೆ. ಜ್ಞಾನವೆಲ್ ನಿರ್ದೇಶನದಲ್ಲಿ ಮೂಡಿ ಬರಲಿರುವ ಈ ಚಿತ್ರಕ್ಕೆ ವೆಟ್ಟೈಯನ್ (Vettaiyan) ಎಂದು ಹೆಸರಿಡಲಾಗಿದೆ. ರಿಲೀಸ್ ಆಗಿರುವ ಟೀಸರ್ (Teaser) ನಲ್ಲಿ ರಜನಿಕಾಂತ್ ಪೊಲೀಸ್ ಅಧಿಕಾರಿಯ ಪಾತ್ರ ಮಾಡಿರುವುದು ಸ್ಪಷ್ಟವಾಗಿದೆ. ಮೇಲ್ನೋಟಕ್ಕೆ ಇದೊಂದು ಮರ್ಡರ್ ಮಿಸ್ಟರಿ ಆಧರಿಸಿದ ಸಿನಿಮಾ ಎಂದು ಗೊತ್ತಾಗುತ್ತಿದ್ದು, ಸಸ್ಪೆನ್ಸ್ ಮತ್ತು ಥ್ರಿಲ್ಲರ್ ಅಂಶಗಳನ್ನೂ ಒಳಗೊಂಡಿರೋದು ಪಕ್ಕಾ.
ಹಲವು ದಿನಗಳಿಂದ ರಜನಿ ನಟನೆಯ 170ನೇ ಸಿನಿಮಾ ಬಗ್ಗೆ ಸಾಕಷ್ಟು ಮಾಹಿತಿಗಳು ಹೊರ ಬೀಳುತ್ತಿವೆ. ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿರುವ ಲೈಕಾ ಸಂಸ್ಥೆಯು ಒಂದೊಂದು ಮಾಹಿತಿಯನ್ನು ಹೊರ ಹಾಕುತ್ತಿದೆ. ಜೊತೆಗೆ ಕೆಲ ದಿನಗಳ ಹಿಂದೆ ರಜನಿಕಾಂತ್ ಮತ್ತು ಅಮಿತಾಭ್ ಬಚ್ಚನ್ ಅವರ ಫಸ್ಟ್ ಲುಕ್ ಕೂಡ ರಿಲೀಸ್ ಮಾಡಿದೆ. ಜೊತೆಗೆ ಈ ಚಿತ್ರಕ್ಕೆ ಇಬ್ಬರು ನಾಯಕಿಯರು ಎನ್ನುವ ವಿಷಯವನ್ನು ಸಂಸ್ಥೆ ಹೇಳಿಕೊಂಡಿದೆ.
ಹೌದು, ರಜನಿಕಾಂತ್ ಮತ್ತು ಅಮಿತಾಭ್ ಕಾಂಬಿನೇಷನ್ ನ ಈ ಚಿತ್ರದಲ್ಲಿ ದುಶಾರ ವಿಜಯನ್ (Dushara Vijayan) ಮತ್ತು ಮಂಜು ವಾರಿಯರ್ (Manju Warrier) ನಾಯಕಿಯರಾಗಿ ಕಾಣಿಸಿಕೊಳ್ಳಲಿದ್ದಾರೆ. ದುಶಾರ ಈಗಾಗಲೇ ಬೋಧೈ ಯೇರಿ ಬುಧಿ ಮಾರಿ, ಅನೀತಿ ಸೇರಿದಂತೆ ಹಲವಾರು ಸಿನಿಮಾಗಳಲ್ಲಿ ನಟಿಸಿದ್ದಾರೆ. ಮಂಜು ವಾರಿಯರ್ ಲೂಸಿಫರ್, ಅಸುರನ್ ಸೇರಿದಂತೆ ಸಾಕಷ್ಟು ಸಿನಿಮಾಗಳಲ್ಲಿ ನಾಯಕಿಯರಾಗಿ ನಟಿಸಿದ್ದಾರೆ.
ಬರೋಬ್ಬರಿ 32 ವರ್ಷಗಳ ಬಳಿಕ ಭಾರತೀಯ ಸಿನಿಮಾ ರಂಗದ ಇಬ್ಬರು ದಿಗ್ಗಜರು ಒಂದಾಗಲಿದ್ದಾರೆ ಎನ್ನುವ ಸುದ್ದಿ ಹಲವು ತಿಂಗಳಿಂದ ಹರಿದಾಡುತ್ತಿತ್ತು. ಇದು ನಿಜನಾ ಎನ್ನುವ ಪ್ರಶ್ನೆ ಅವರ ಅಭಿಮಾನಿಗಳಲ್ಲಿ ಮೂಡಿತ್ತು. ಕೊನೆಗೂ ಅದು ನಿಜವಾಗಿತ್ತು. ಮೂರು ದಶಕದ ಬಳಿಕ ರಜನಿಕಾಂತ್ ಮತ್ತು ಅಮಿತಾಭ್ ಬಚ್ಚನ್ ಒಟ್ಟಾಗಿ ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.
ಚಿತ್ರರಂಗದ ದಂತಕಥೆ ಎಂದರೆ ಒಬ್ಬರು ರಜನಿಕಾಂತ್(Rajanikanth), ಮತ್ತೊಬ್ಬರು ಅಮಿತಾಭ್ ಬಚ್ಚನ್. ಈ ಜೋಡಿ ಒಟ್ಟಾಗಿ ಕೆಲವು ಸಿನಿಮಾಗಳಲ್ಲಿ ನಟಿಸಿದ್ದರು.ಬಳಿಕ ತಲೈವಾ- ಬಿಗ್ ಬಿ ಜೋಡಿ ತೆರೆಯ ಮೇಲೆ ಕಾಣಿಸಿಕೊಳ್ಳಲೇಯಿಲ್ಲ. ಈ ಸ್ಟಾರ್ ಕಿಲಾಡಿ ಜೋಡಿ, ಇದೀಗ ತಮ್ಮ ಫ್ಯಾನ್ಸ್‌ಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ತಲೈವಾ-ಬಿಗ್ ಬಿ (Bigg B) ಇಬ್ಬರು ಒಟ್ಟಾಗಿ ಕಾಣಿಸಿಕೊಳ್ಳಲು ಕೌಂಟ್‌ಡೌನ್ ಶುರುವಾಗಿದೆ.