ಮಂಡ್ಯ: ರೆಬೆಲ್ ಸ್ಟಾರ್ ಹುಟ್ಟೂರು ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ದೊಡ್ಡರಸಿನಕೆರೆಯಲ್ಲಿ ಕಲಿಯುಗದ ಕರ್ಣನ ತಿಥಿ ಕಾರ್ಯ ನಡೆಯುತ್ತಿದೆ.
ಅಂಬಿ ನೆನೆಪಲ್ಲಿ ಬೆಳಗ್ಗೆಯಿಂದಲೇ ಹೋಮ ಹವನ ಪೂಜೆ ನಡೆಯುತ್ತಿದ್ದು, ಅಭಿಮಾನಿಗಳು ಕೇಶಮುಂಡನ ಮಾಡಿಸಿಕೊಂಡು ತಿಥಿ ಕಾರ್ಯದಲ್ಲಿ ಪಾಲ್ಗೊಂಡಿದ್ದಾರೆ. ಕಾರ್ಯ ಮುಗಿದ ಬಳಿಕ ಅಂಬಿ ಹೆಸರಲ್ಲಿ ಎರಡು ಗುಂಟೆ ಜಾಗದಲ್ಲಿ ಪಾರ್ಕ್ ನಿರ್ಮಾಣ ಮಾಡಲಾಗುತ್ತದೆ. ಬಳಿಕ ಪಾರ್ಕ್ ಒಳಗೆ ಅಂಬರೀಶ್ ಸ್ಮಾರಕ ನಿರ್ಮಾಣಕ್ಕೆ ಸಿದ್ಧತೆ ಮಾಡಲಾಗುತ್ತದೆ.
ಅನ್ನ ಸಾಂಬರ್, ಬಿಸಿಬೇಳೆ ಬಾತ್, 5 ಸಾವಿರ ಲಾಡು, 5 ಕ್ವಿಂಟಾಲ್ ಅಕ್ಕಿ, 2 ಕ್ವಿಂಟಾಲ್ ಅವರೇ ಕಾಳು ಕೂಟು, ಕೀರು, ಹಪ್ಪಳ, ಸೊಪ್ಪಿನ ಪಲ್ಯ ರೆಡಿ ಮಾಡಲಾಗುತ್ತಿದೆ. ಈ ಮೂಲಕ ಅಂಬಿ ಹುಟ್ಟೂರು ದೊಡ್ಡರಸಿನ ಕೆರೆ ಗ್ರಾಮದಲ್ಲಿ ಗ್ರಾಮಸ್ಥರು ಶುದ್ಧ ಸಸ್ಯಹಾರಿ ಅಡುಗೆ ತಯಾರಿಸಿದ್ದು, ಅಂಬಿಗೆ ಇಷ್ಟವಾದ ಎಲ್ಲಾ ರೀತಿಯ ಸಿಹಿ ತಿನಿಸುಗಳು ತಯಾರಿಸಿ ಸಮಾಧಿ ಬಳಿ ಎಡೆ ಹಾಕುವುದಾಗಿ ಅಭಿಮಾನಿಗಳು ತಿಳಿಸಿದ್ದಾರೆ.
ಮಂಡ್ಯ ಜಿಲ್ಲೆಯ ದೊಡ್ಡರಸಿನಕೆರೆ, ಗೆಜ್ಜಲಗೆರೆ, ಬಿದಿರಹಳ್ಳಿ, ರುದ್ರಾಕ್ಷಿಪುರ, ಮಾರಗೌಡನಹಳ್ಳಿ, ಬಿ.ಹೊಸೂರು, ಬೂತನಹೊಸೂರು ಸೇರಿದಂತೆ ಹಲವು ಗ್ರಾಮದಲ್ಲಿ ಅಂಬಿ ತಿಥಿ ಕಾರ್ಯ ನಡೆಯಲಿದೆ. ಅಂಬಿಗೆ ಪ್ರಿಯವಾದ ವೆಜ್ ಮತ್ತು ನಾನ್‍ವೆಜ್ ಊಟ ತಯಾರಿ ಮಾಡಲಾಗುತ್ತಿದೆ. ಅಲ್ಲದೇ ಅಭಿಮಾನಿಗಳು ರಕ್ತದಾನ, ಗೀತಗಾಯನ ಸೇರಿದಂತೆ ಹಲವು ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv