BollywoodLatestMain Post

‘ಟೈಟಾನಿಕ್’ ನಟಿ ಕೇಟ್ ವಿನ್ಸ್ ಲೆಟ್ ಆಸ್ಪತ್ರೆ ದಾಖಲು: ಶೂಟಿಂಗ್ ಸೆಟ್ ನಲ್ಲಿ ನಡೆಯಿತು ಅವಘಡ

ಟೈಟಾನಿಕ್ (Titanic) ಸಿನಿಮಾದ ಮೂಲಕ ರಾತ್ರೋರಾತ್ರಿ ಫೇಮಸ್ ಆದ ನಟಿ ಕೇಟ್ ವಿನ್ಸ್ ಲೆಟ್ (Kate Winslet). ಈ ಸಿನಿಮಾದಲ್ಲಿ ನಾಯಕಿಯಾಗುವ ಮೂಲಕ ಜಗತ್ತಿನ ಅತ್ಯಂತ ಪ್ರಭಾವಿ ನಟಿಯರ ಪಟ್ಟಿಯಲ್ಲೂ ಇವರು ಸೇರ್ಪಡೆಯಾದರು. ಶೂಟಿಂಗ್ ಸೆಟ್ ನಲ್ಲಿ ನಡೆದ ಅವಘಡದಿಂದಾಗಿ ಅವರು ಆಸ್ಪತ್ರೆ (Hospital) ಸೇರಿಕೊಂಡಿದ್ದಾರೆ. ಇದೀಗ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಚಕಿತ್ಸೆಗೂ ಅವರು ಸ್ಪಂದಿಸಿದ್ದಾರೆ ಎಂದು ವರದಿ ಆಗಿದೆ.

ಸದ್ಯ ಕೇಟ್ ಹೊಸ ಸಿನಿಮಾದ ಶೂಟಿಂಗ್(Shooting) ನಲ್ಲಿ ತೊಡಗಿದ್ದರು. ಲೀ ಹೆಸರಿನಲ್ಲಿ ತಯಾರಾಗುತ್ತಿರುವ ಸಿನಿಮಾದಲ್ಲಿ ಅವರು ಸತತ ನಾಲ್ಕೈದು ವರ್ಷಗಳಿಂದಲೂ ನಟಿಸುತ್ತಿದ್ದಾರೆ.  ಈ ಸಿನಿಮಾಗಾಗಿ ಬೃಹತ್ ಸೆಟ್ ಗಳನ್ನು ಹಾಕಿದ್ದು, ಈ ಸೆಟ್ ನಿಂದ ಆಯಾ ತಪ್ಪಿ ಕೆಳಗೆ ಬಿದ್ದಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಎತ್ತರದ ಪ್ರದೇಶದಿಂದ ಕೆಳಗೆ ಬಿದ್ದಿದ್ದರಿಂದ ಬಲವಾದ ಪೆಟ್ಟು ಬಿದ್ದಿವೆ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ:`ಗಿಚ್ಚಿ ಗಿಲಿಗಿಲಿ’ ವಿನ್ನರ್ ಆದ ವನ್ಷಿಕಾ, ರನ್ನರ್ ಅಪ್ ಆಗಿ ನಿವೇದಿತಾ ಗೌಡ

ಸೆಟ್ ಮೇಲಿಂದ ಕೇಟ್ ಬೀಳುತ್ತಿದ್ದಂತೆ ಅವರನ್ನು ಆಸ್ಪತ್ರೆಗೆ ದಾಖಲಿಸಿ, ಶೂಟಿಂಗ್ ನಿಲ್ಲಿಸಲಾಗಿದೆ. ಅವರು ಹೇಗೆ ಬಿದ್ದರು, ತಪ್ಪಾಗಿದ್ದು ಹೇಗೆ ಅನ್ನುವ ಕುರಿತು ಚರ್ಚೆ ಶುರುವಾಗಿದೆ. ಕೇಟ್ ಪ್ರಾಣಾಪಾಯದಿಂದ ಪಾರಾಗಿದ್ದು, ಕೆಲವೇ ದಿನಗಳಲ್ಲಿ ಮತ್ತೆ ಅವರು ಶೂಟಿಂಗ್ ನಲ್ಲಿ ಪಾಲ್ಗೊಳ್ಳಲಿದ್ದಾರಂತೆ. ಲೀ ಹೆಸರಿನಲ್ಲಿ ಮೂಡಿ ಬರುತ್ತಿರುವ ಈ ಸಿನಿಮಾ ಅಮೆರಿಕಾದ ಖ್ಯಾತ ಮಹಿಳಾ ಫೋಟೋ ಜರ್ನಲಿಸ್ಟ್ ಎಲಿಜಬೆತ್ ಲೀ (Lee) ಮಿಲ್ಲರ್ ಬಯೋಪಿಕ್ ಆಗಿದ್ದು, ಕೇಟ್ ಫೋಟೋಗ್ರಾಫರ್ ಆಗಿ ಕಾಣಿಸಿಕೊಂಡಿದ್ದಾರೆ.

1997ರಲ್ಲಿ ತೆರೆಕಂಡ ಟೈಟಾನಿಕ್ ಸಿನಿಮಾ ಮೂಲಕ ಜಗತ್ತಿನ ಸಿನಿಮಾ ಪ್ರೇಮಿಗಳಿಗೆ ಪರಿಚಯವಾದ ಕೇಟ್, ಆನಂತರ ಸಾಕಷ್ಟು ಚಿತ್ರಗಳಲ್ಲಿ ನಟಿಸಿದ್ದಾರೆ. ಇಂಗ್ಲೆಂಡ್ ನಲ್ಲಿ ಜನಿಸಿರುವ ಇವರು, ಕಷ್ಟದ ಜೀವನದಲ್ಲೇ ನಡೆದು ಬಂದವರ. ಇವರ ತಂದೆ ಕೂಡ ಸಿನಿಮಾದಲ್ಲಿ ಚಿಕ್ಕ ಪುಟ್ಟ ಪಾತ್ರಗಳನ್ನು ಮಾಡುತ್ತಾ ಬಂದವರು. ಟೈಟಾನಿಕ್ ಸಿನಿಮಾ ಕೇಟ್ ಅದೃಷ್ಟವನ್ನೇ ಬದಲಿಸಿ ಬಿಟ್ಟಿತು.

Live Tv

Leave a Reply

Your email address will not be published.

Back to top button