ಸಮುದ್ರದ (Sea) ಆಳ, ಭೂಮಿಯ ಅಜ್ಞಾತ ಪ್ರದೇಶವಾಗಿಯೇ ಉಳಿದಿದೆ. ಇಂದಿಗೂ ಪ್ರಕೃತಿ ಇಲ್ಲಿನ ಆನೇಕ ರಹಸ್ಯಗಳನ್ನು ತನ್ನಲ್ಲಿಯೇ ಇಟ್ಟುಕೊಂಡಿದೆ. ಆಳವಾದ ಸಮುದ್ರದಲ್ಲಿರುವ ನೀರಿನ ಒತ್ತಡ. ಸಮುದ್ರದ ಆಳದಲ್ಲಿ ಮೇಲ್ಮಟ್ಟಕ್ಕಿಂತ 1,000 ಪಟ್ಟು ಹೆಚ್ಚಿನ ಒತ್ತಡ ಹೊಂದಿರುತ್ತದೆ. ಈ ಒತ್ತಡವೂ ಸದೃಢವಾದ ಹಡಗನ್ನು ಸಹ ಪುಡಿ ಮಾಡಬಲ್ಲಷ್ಟು ಪ್ರಬಲವಾಗಿರುತ್ತದೆ.
ಇದೇ ಕಾರಣಕ್ಕೆ, ಆಳವಾದ ಸಮುದ್ರದ ತೀವ್ರ ಒತ್ತಡ, ಕಡಿಮೆ ತಾಪಮಾನ ಮತ್ತು ಕತ್ತಲೆಯ ನಡುವೆಯೂ ಕಾರ್ಯ ನಿರ್ವಹಿಸುವಂತೆ ನಿರ್ಮಾಣ ಮಾಡಲಾಗಿಯೂ ಸಹ ಟೈಟಾನಿಕ್ ಹಡಗಿನ ಅವಶೇಷಗಳನ್ನು ನೋಡಲು ತೆರಳಿದ್ದ ಸಬ್‌ಮರ್ಸಿಬಲ್ (Submersible) ಪತನವಾಯಿತು. ಇದನ್ನೂ ಓದಿ: ಟೈಟಾನಿಕ್ ಹಡಗಿನ ಅವಶೇಷ ನೋಡಲು ತೆರಳಿದ್ದ ವಿಶ್ವದ ಐವರು ಶ್ರೀಮಂತರ ದಾರುಣ ಸಾವು
Advertisement
ಜೂನ್ 18 ರಂದು ದುರಂತ ಅಂತ್ಯ ಕಂಡ ಜಲಾಂತರ್ಗಾಮಿ (Titan Tragedy) ಸಮುದ್ರದ ಆಳದ ಒತ್ತಡವನ್ನು ತಡೆದುಕೊಳ್ಳುವಂತೆ ಮೇಲ್ನೋಟಕ್ಕೆ ವಿನ್ಯಾಸಗೊಳಿಸಲಾಗಿತ್ತು. ಇದು ಕಾರ್ಯಾಚರಣೆಯ ದುರಂತಕ್ಕೆ ಕಾರಣವಾಯಿತು. ಒಂದು ವಾರದ ತೀವ್ರ ಶೋಧದ ಬಳಿಕ ಅಮೆರಿಕಾ ಕೋಸ್ಟ್ ಗಾರ್ಡ್ ಸಬ್‌ಮರ್ಸಿಬಲ್‌ನಲ್ಲಿ ತೆರಳಿದ್ದ ಎಲ್ಲರೂ ಸಾವಿಗೀಡಾಗಿದ್ದಾರೆ ಎಂದು ಘೋಷಿಸಿತ್ತು.
Advertisement
Advertisement
ಸಮುದ್ರದ ಮೇಲ್ಮೈಯಿಂದ 12,000 ಅಡಿಗಳಿಗಿಂತ ಹೆಚ್ಚು ಆಳದಲ್ಲಿದ್ದ ಟೈಟಾನಿಕ್ (Titanic) ಅವಶೇಷಗಳಿರುವ ಜಾಗಕ್ಕೆ ತೆರಳುವುದು ಅಪಾಯಕಾರಿಯಾಗಿತ್ತು. ಈ ಶೋಧನೆಯ ಪ್ರಯಾಸಗಳು ತಿಳಿದಿದ್ದರೂ ಸಹ ಯತ್ನಕ್ಕೆ ಕೈ ಹಾಕಿರುವುದು ಒಂದು ಬಗೆಯಲ್ಲಿ ದುರಂತಕ್ಕೆ ಆಹ್ವಾನ ಕೊಟ್ಟಂತೆಯೇ ಇತ್ತು. ಆದರೆ ದುರಂತದ ಸಮಯದಲ್ಲಿ ನಿಖರವಾಗಿ ಏನು ತಪ್ಪಾಗಿದೆ ಎಂಬುದು ನಿಗೂಢವಾಗಿಯೇ ಉಳಿದಿದೆ. ಸದ್ಯಕ್ಕೆ ತಿಳಿದಿರುವ ಸಂಗತಿ ಅಂದರೆ, ಸಬ್‌ಮರ್ಸಿಬಲ್ ಸ್ಫೋಟಕ್ಕೆ ಒಳಗಾಯಿತು ಎಂಬುದಷ್ಟೇ ಆಗಿದೆ.
Advertisement
ಸಾಗರದ ಆಳ ಮತ್ತು ನೀರಿನ ಒತ್ತಡ
ಸಾಗರವನ್ನು ಹಲವಾರು ಪದರಗಳಾಗಿ ವಿಂಗಡಿಸಲಾಗಿದೆ. ಪ್ರತಿಯೊಂದೂ ತನ್ನದೇ ಆದ ವಿಶಿಷ್ಟ ಲಕ್ಷಣಗಳನ್ನು ಹೊಂದಿದೆ. ಪದರಗಳು ಸೂರ್ಯನ ಬೆಳಕಿನ ವಲಯ, ಟ್ವಿಲೈಟ್ ವಲಯ, ಮಧ್ಯರಾತ್ರಿ ವಲಯ, ಪ್ರಪಾತ ವಲಯ ಮತ್ತು ಹಡಲ್ ವಲಯವಾಗಿ (ಕೊನೆಯದು ಆಳವಾದದ್ದು) ವಿಂಗಡಿಸಲಾಗಿದೆ.
ಸೂರ್ಯನ ಬೆಳಕಿನ ವಲಯವು ಮೇಲ್ಮೈಯಿಂದ ಸುಮಾರು 200 ಮೀಟರ್ ಆಳದವರೆಗಿನ ಹೆಚ್ಚಿನ ಸಮುದ್ರ ಜೀವಿಗಳು ಮತ್ತು ಮಾನವ ಚಟುವಟಿಕೆಗಳಿಗೆ ಯೋಗ್ಯವಾದದ್ದು. ಟ್ವಿಲೈಟ್ ವಲಯಕ್ಕೆ (200 ರಿಂದ 1,000 ಮೀಟರ್) ಇಳಿಯುತ್ತಿದ್ದಂತೆ, ಸೂರ್ಯನ ಬೆಳಕು ಕಡಿಮೆಯಾಗುತ್ತದೆ. ತಾಪಮಾನ ಇಳಿಯುತ್ತದೆ ಮತ್ತು ಒತ್ತಡ ಹೆಚ್ಚಾಗುತ್ತದೆ. ಮಧ್ಯರಾತ್ರಿ ವಲಯದಲ್ಲಿ (1,000 ರಿಂದ 4,000 ಮೀಟರ್‌ಗಳು), ಸಂಪೂರ್ಣ ಕತ್ತಲೆಯೇ ಆ ಸಾಮ್ರಾಜ್ಯವನ್ನು ಆಳುತ್ತದೆ.
ಇನ್ನೂ ಪ್ರಪಾತ ವಲಯ (4,000 ರಿಂದ 6,000 ಮೀಟರ್) ವಿಶಾಲವಾದ ಸಾಗರ ತಳವನ್ನು ಆವರಿಸಿದೆ. ಇಲ್ಲಿ ತಾಪಮಾನವು ಘನೀಕರಣಕ್ಕಿಂತ ಸ್ವಲ್ಪ ಮೇಲಿರುತ್ತದೆ ಮತ್ತು ಒತ್ತಡವು ಅಗಾಧವಾಗಿರುತ್ತದೆ. ಹಡಲ್ ವಲಯ (6,000 ರಿಂದ 11,000 ಮೀಟರ್), ಕಂದಕಗಳು ಮತ್ತು ಕಣಿವೆಗಳನ್ನು ಒಳಗೊಂಡಿದೆ. ಸಾಗರದ ಆಳವಾದ ಭಾಗವಾದ ಮರಿಯಾನಾ ಕಂದಕವು ಮೌಂಟ್ ಎವರೆಸ್ಟ್ನ ಎತ್ತರಕ್ಕಿಂತ 11,034 ಮೀಟರ್ ಆಳಕ್ಕಿದೆ. ಸಮುದ್ರದ ಪ್ರತಿ 10 ಮೀಟರ್ ಆಳದಲ್ಲಿ ಒತ್ತಡದಲ್ಲಿ ಭಾರೀ ಪ್ರಮಾಣದ ಬದಲಾವಣೆಯಾಗುತ್ತಿರುತ್ತದೆ. ಸಮುದ್ರದ ಆಳವಾದ ಭಾಗದಲ್ಲಿ ಸುಮಾರು 50 ಜಂಬೋ ಜೆಟ್‌ಗಳನ್ನು ಒಬ್ಬನ ಮೇಲೆ ಜೋಡಿಸಿದಷ್ಟು ಪರಿಣಾಮ ಬೀರುತ್ತದೆ.
ಸಬ್‌ಮರ್ಸಿಬಲ್‌ಗೆ ಏನಾಗಿರಬಹುದು?
ಸಮುದ್ರದ ಆಳದ ತೀವ್ರ ಒತ್ತಡವು ಅನ್ವೇಷಣೆಗೆ ದೊಡ್ಡ ಸವಾಲುಗಳಲ್ಲಿ ಒಂದಾಗಿದೆ. ಟೈಟಾನ್‌ನಂತಹ ಸಬ್‌ಮರ್ಸಿಬಲ್ ಕೆಳಗಿಳಿದಾಗ ಅದು ನೀರಿನ ಹೆಚ್ಚು ಭಾರವನ್ನು ತಡೆದುಕೊಳ್ಳಬೇಕಾಗುತ್ತದೆ. ಅದರ ಹೊರಗಿನ ಒತ್ತಡವು ಒಳಗಿನ ಒತ್ತಡಕ್ಕಿಂತ ಗಮನಾರ್ಹವಾಗಿ ಹೆಚ್ಚಾದರೆ ಅದು ಸ್ಫೋಟಕ್ಕೆ ಕಾರಣವಾಗಬಹುದು.
ಆದರೆ ಟೈಟಾನಿಕ್ ಹಡಗು ಮುಳುಗಿದ್ದಾಗ ಅದು ಸ್ಫೋಟಗೊಂಡಿರಲಿಲ್ಲ. ಯಾಕೆಂದರೆ, ಟೈಟಾನಿಕ್ ಕ್ರಮೇಣ ಕೆಳಗಿಳಿದಂತೆ ಗಾಳಿ ತುಂಬಿದ್ದ ಭಾಗಗಳು ನೀರಿನಿಂದ ತುಂಬಿರಬಹುದು. ಹಡಗಿನ ಒಳಗೆ ಮತ್ತು ಹೊರಗಿನ ಒತ್ತಡ ಸಮವಾಗಿ ಸ್ಫೋಟ ಆಗದೆ ಉಳಿದಿದೆ. ಇದಕ್ಕೆ ವ್ಯತಿರಿಕ್ತವಾಗಿ ಸಬ್‌ಮರ್ಸಿಬಲ್ ಗಾಳಿಯಿಂದ ತುಂಬಿತ್ತು. ಅಲ್ಲದೇ ನೀರಿನ ಆಳಕ್ಕೆ ವೇಗವಾಗಿ ಇಳಿಯಿತು. ಇದು ಅಪಾಯಕಾರಿ ಒತ್ತಡದ ವ್ಯತ್ಯಾಸವನ್ನು ಎದುರಿಸಲು ಕಾರಣವಾಗಿರಬಹುದು. ಈ ವ್ಯತ್ಯಾಸವು ಸಬ್‌ಮರ್ಸಿಬಲ್‌ನ ರಚನಾತ್ಮಕ ಮಿತಿಗಳನ್ನು ಮೀರಿ ಸ್ಫೋಟವನ್ನು ಅದು ಪ್ರಚೋದಿಸಬಹುದು.
ಸಮುದ್ರದಲ್ಲಿಯೇ ವಾಸಿಸುವ ಜೀವಿಗಳಿಗೆ ಈ ಪರಿಸ್ಥಿತಿಗಳನ್ನು ಎದುರಿಸುವ ಶಕ್ತಿಯನ್ನು ಪ್ರಕೃತಿಯೇ ನೀಡಿರುತ್ತದೆ. ಬದುಕಲು ವಿಶಿಷ್ಟವಾದ ದೇಹ ರಚನೆಯನ್ನು ಸಮುದ್ರದಾಳದ ಜೀವಿಗಳು ಹೊಂದಿರುತ್ತವೆ. ಆದರೆ ಮನುಷ್ಯನಿಗಾಗಲಿ ಮುನುಷ್ಯ ನಿರ್ಮಾಣ ಮಾಡಿರುವ ಸಾಧನಗಳಿಗೆ ಈ ಗ್ಯಾರಂಟಿ ಕೊಡಲು ಸಾಧ್ಯವಿಲ್ಲ.
ಆ ಕಾರಣಕ್ಕಾಗಿ ಹೆಚ್ಚಿನ ನೀರೊಳಗಿನ ಆಳ-ಸಮುದ್ರದ ಅನ್ವೇಷಣೆಯನ್ನು ಮಾನವರಹಿತ ಸಾಧನಗಳಿಂದ ನಡೆಸಲಾಗುತ್ತದೆ. ಹೆಚ್ಚು ವ್ಯಾಪಕವಾಗಿ ಬಳಸಲಾಗುವ ಆಳ ಸಮುದ್ರದ ವಾಹನಗಳ ಪೈಕಿ ರಿಮೋಟ್ ಆಪರೇಟೆಡ್ ವೆಹಿಕಲ್ಸ್, ಆಟೋಮೆಟಿಕ್ ವಾಹನಗಳನ್ನು ಬಳಸಲಾಗುತ್ತದೆ. ಆದರೆ ಸಬ್‌ಮರ್ಸಿಬಲ್ ಹೆಚ್ಚಿನ ಆಳದ ಅಧ್ಯಯನಕ್ಕೆ ಯೋಗ್ಯವಲ್ಲ ಎನ್ನುವುದು ಈ ದುರಂತ ಸಾಬೀತು ಪಡಿಸಿದಂತಿದೆ. ಇದನ್ನೂ ಓದಿ: ಲೋಕಸಭೆಯಲ್ಲಿ ಸ್ಪರ್ಧಿಸಲು ಪಕ್ಷ ಸೂಚನೆ ನೀಡಿದ್ರೆ ಆದೇಶ ಪಾಲಿಸಲು ಸಿದ್ಧ: ಯತೀಂದ್ರ ಸಿದ್ದರಾಮಯ್ಯ
Web Stories