ಚಿಕ್ಕಬಳ್ಳಾಪುರದ ಬಿಜೆಪಿ ಮುಖಂಡರು‌, ಕಾರ್ಯಕರ್ತರಿಗೆ ತಿರುಪತಿ ಯಾತ್ರೆ ಭಾಗ್ಯ

Public TV
1 Min Read
CHIKKABALLAPUR TIRUPATI

ಚಿಕ್ಕಬಳ್ಳಾಪುರ: ಇಲ್ಲಿನ ಲೋಕಸಭಾ (Loksabha Election) ಕ್ಷೇತ್ರದ ಟಿಕೆಟ್ ಗಾಗಿ ಮಾಜಿ ಸಚಿವ ಡಾ.ಕೆ.ಸುಧಾಕರ್ ಹಾಗೂ ಯಲಹಂಕ ಶಾಸಕ ಎಸ್.ಆರ್ ವಿಶ್ವನಾಥ್ ಪುತ್ರ ಅಲೋಕ್ ನಡುವೆ ತೀವ್ರ ಪೈಪೋಟಿ ನಡೆಯುತ್ತಿದೆ. ಈ ಮಧ್ಯೆ ಬಿಜೆಪಿ ಮುಖಂಡರ ಹಾಗೂ ಕಾರ್ಯಕರ್ತರ ಮನಗೆಲ್ಲೋಕೆ ಯಲಹಂಕ ಶಾಸಕ ಹಾಗೂ ತಿರುಮಲ‌ ತಿರುಪತಿ ದೇವಾಲಯದ ಆಡಳಿತ ಮಂಡಳಿ ಸದಸ್ಯರಾಗಿರುವ ಎಸ್ ಆರ್ ವಿಶ್ವನಾಥ್ ತಿಮ್ಮಪ್ಪನ ದರ್ಶನಕ್ಕೆ ಸಕಲ ವ್ಯವಸ್ಥೆ ಮಾಡುತ್ತಿದ್ದಾರೆ.

CHIKKABALLAPUR TIRUPATI 1

ಮಾಜಿ ಸಚಿವ ಡಾ.ಕೆ.ಸುಧಾಕರ್ ರನ್ನೇ ಟಾರ್ಗೆಟ್ ಮಾಡಿ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ (Chikkaballapur Vidhanasabha Constituency) ಮೂಲ ಹಾಗೂ ವಲಸಿಗ ಬಿಜೆಪಿಗರಿಗೆ ತಿಮ್ಮಪ್ಪನ ದರ್ಶನದ ವ್ಯವಸ್ಥೆಯನ್ನ ಖುದ್ದು ಅವರೇ ಮುಂದೆ ನಿಂತು ಮಾಡಿಸುತ್ತಿದ್ದಾರೆ. ಹಂತ ಹಂತವಾಗಿ ತಂಡೋಪತಂಡಗಳಾಗಿ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಎಸ್ ಆರ್ ವಿಶ್ವನಾಥ್ ಅವರ ಜೊತೆಯಲ್ಲಿ ತಿಮ್ಮಪ್ಪನ ದರ್ಶನ ಪಡೆಯುತ್ತಿದ್ದಾರೆ. ಇಂದು ಸಹ 20 ಕ್ಕೂ ಹೆಚ್ಚು ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ದೇವರ ದರ್ಶನ ಪಡೆದು ವಾಪಸ್ ಆಗಮಿಸುತ್ತಿದ್ದಾರೆ.

ಇದರ ನಡುವೆ ಎಸ್ ಆರ್ ವಿಶ್ವನಾಥ್ (SR Vishwanath) ರವರ ನಡೆ ಬಗ್ಗೆ ತೀರ್ಥಯಾತ್ರೆ ಮಾಡಿಸಿ ನಾನು ಟಿಕೆಟ್ ಗೆ ಲಾಬಿ ಮಾಡಲ್ಲ ಅಂತ ಸ್ವತಃ ಮಾಜಿ ಸಚಿವ ಸುಧಾಕರ್ ಎಸ್ ಆರ್ ವಿಶ್ವನಾಥ್ ವಿರುದ್ಧ ವಾಗ್ದಾಳಿ ಸಹ ನಡೆಸಿದ್ರು. ವಿಶ್ವನಾಥ್ ಜೊತೆ ತಿರುಪತಿಗೆ ಹೋಗಿ ಬಂದಿದ್ದ ತಮ್ಮ ಕೆಲ ಬೆಂಬಲಿಗರಿಗೆ ಕ್ಲಾಸ್ ಸಹ ತಗೊಂಡಿದ್ರು. ಆದರೂ ಈಗ ಮತ್ತೆ ಕೆಲ ಬಿಜೆಪಿ ಮುಖಂಡರು ತಿರುಪತಿ ದೇವಸ್ಥಾನಕ್ಕೆ ತೆರಳಿದ್ದಾರೆ. ಮುಂದಿನ‌ ದಿನಗಳಲ್ಲಿ ಜೆಡಿಎಸ್ ಮುಖಂಡರು ಕಾರ್ಯಕರ್ತರಿಗೂ ತಿಮ್ಮಪ್ಪನ ದರ್ಶನ ಭಾಗ್ಯಕ್ಕೆ ಪ್ಲಾನ್ ಮಾಡಲಾಗುತ್ತಿದೆ ಎನ್ನಲಾಗಿದೆ.

Share This Article