ತಿರುಪತಿ ತಿಮ್ಮಪ್ಪನ ನಕಲಿ ಟಿಕೆಟ್ ನೀಡಿ 2 ಲಕ್ಷ ವಂಚನೆ

Public TV
2 Min Read
chikkaballapura cheating

ಚಿಕ್ಕಬಳ್ಳಾಪುರ: ತಿರುಪತಿ ತಿಮ್ಮಪ್ಪ, ಏಡುಕೊಂಡಲವಾಡ, ಆಪತ್ಭಾಂದವ ಅನಾಥ ರಕ್ಷಕ ಅಂತಲೇ ಕರೆಸಿಕೊಳ್ಳುವ ತಿರುಪತಿ ತಿಮ್ಮಪ್ಪನ ಹೆಸರಿನಲ್ಲಿಯೇ ವಂಚಕನೊರ್ವ ಲಕ್ಷಾಂತರ ರೂಪಾಯಿ ದೋಖಾ ಮಾಡಿರುವ ಘಟನೆ ಚಿಕ್ಕಬಳ್ಳಾಪುರ ನಗರದಲ್ಲಿ ನಡೆದಿದೆ.

tirupati temple medium

ನಗರದ ಅಮೇಜಿಂಗ್ ಡ್ರೀಮ್ ಹೆಸರಿನ ಟ್ರಾವೆಲ್ ಏಜೆನ್ಸಿ ಮಾಲೀಕೆ ಪ್ರಿಯದರ್ಶಿನಿ ವಂಚನೆಗೊಳಗಾಗಿದ್ದು, ಆಂಧ್ರಪ್ರದೇಶ ವೆಸ್ಟ್ ಗೋದಾವರಿ ಜಿಲ್ಲೆಯ ಪಂಜಾ ವೇಮವರಂನ ಪಂಜಾ ರಮಣ ಪ್ರಸಾದ್ ತಿರುಪತಿ ವೆಂಕಟೇಶ್ವರನ ದರ್ಶನಕ್ಕೆ ಟಿಕೆಟ್ ಬುಕ್ ಮಾಡಿಕೊಡುವುದಾಗಿ ಹೇಳಿ ನಂಬಿಸಿ ನೂರಾರು ಟಿಕೆಟ್‍ಗಳನ್ನು ಕೊಟ್ಟಿದ್ದಾನೆ. ಆದರೆ ಕೊಟ್ಟ ಟಿಕೆಟ್‍ಗಳನ್ನು ಪಡೆದು ತಿಮ್ಮಪ್ಪನ ದರ್ಶನಕ್ಕೆ ತೆರಳಿದಾಗ ಆತ ನೀಡಿದ್ದ ಟಿಕೆಟ್‍ಗಳು ನಕಲಿ ಎಂಬುದು ತಿಳಿದುಬಂದಿದೆ. ಇದನ್ನೂ ಓದಿ:  ಸಾಲಬಾಧೆ ತಾಳದೆ ರೈತ ನೇಣು ಬಿಗಿದುಕೊಂಡು ಆತ್ಮಹತ್ಯೆ

Tirupati Balaji Temple

ತಮ್ಮ ಬಳಿ ಇರುವ ಟಿಕೆಟ್ ನಕಲಿ ಅಂತ ತಿಳಿದು ದರ್ಶನಕ್ಕೆ ಹೋದವರಿಗೆ ಶಾಕ್ ಆಗಿದೆ. ಇಷ್ಟರಲ್ಲಾಗಲೇ ಪ್ರಿಯದರ್ಶಿನಿ 143 ಜನರಿಂದ ತಲಾ 900 ರೂಪಾಯಿಯಂತೆ 1,28,700 ರೂಪಾಯಿ ಹಣವನ್ನು ಪಡೆದು, ವಂಚಕ ಪಂಜಾ ರಮಣ ಪ್ರಸಾದ್ ಖಾತೆಗೆ ಜಮಾ ಮಾಡಿದ್ದಾರೆ. ವಂಚನೆಯಾಗಿರುವ ಬಗ್ಗೆ ತಿಳಿಯುತ್ತಿದ್ದಂತೆ ಪ್ರಸಾದ್‍ಗೆ ಕರೆ ಮಾಡಿ ವಂಚನೆ ಮಾಡಿರುವ ಬಗ್ಗೆ ಕೇಳುತ್ತಿದ್ದಂತೆ, ಆತ ತನ್ನ ಮೊಬೈಲ್ ಫೋನ್ ಸ್ವಿಚ್ ಆಫ್ ಮಾಡಿಕೊಂಡಿದ್ದಾನೆ. ಇನ್ನೂ ಪ್ರಸಾದ್ ಇವರಿಗೆ ಅಲ್ಲದೆ ಇನ್ನೂ ಹಲವರಿಂದ 10 ಲಕ್ಷಕ್ಕೂ ಹೆಚ್ಚು ರೂಪಾಯಿ ವಂಚಿಸಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಇದನ್ನೂ ಓದಿ: ಪ್ಯಾರಾಲಂಪಿಕ್ಸ್ ಕ್ರೀಡಾಪಟುಗಳನ್ನು ಭೇಟಿ ಮಾಡಿ ಅಭಿನಂದಿಸಿದ ಪ್ರಧಾನಿ

FotoJet 14

ವಂಚಕ ರಮಣ ಪ್ರಸಾದ್ ಪಂಜಾಬ್ ನ್ಯಾಷನಲ್ ಬ್ಯಾಂಕ್ ತಿರುಪತಿ ಶಾಖೆಯಲ್ಲಿ ಅಕೌಂಟ್ ಹೊಂದಿದ್ದು, ಅದೇ ಖಾತೆಯಿಂದಲೇ ಹಣ ಪಡೆದು ವಂಚಿಸಿದ್ದಾನೆ. ಈಗಾಗಲೇ ಆತನ ವಿರುದ್ಧ ತಿರುಪತಿಯಲ್ಲಿ ಹಲವು ವಂಚನೆ ಪ್ರಕರಣಗಳು ದಾಖಲಾಗಿವೆ ಎನ್ನಲಾಗುತ್ತಿದೆ. ಇದನ್ನೂ ಓದಿ: ಮುಂಬೈನಿಂದಲೇ ವಕೀಲರಿಗೆ ಕರೆ ಮಾಡಿ ಅನುಶ್ರೀ ಮಾತುಕತೆ!

ಸದ್ಯ ವಂಚಕ ರಮಣ ಪ್ರಸಾದ್‍ನನ್ನು ಬಂಧಿಸಿ ನ್ಯಾಯ ಕೊಡಿಸುವಂತೆ ವಂಚನೆಗೊಳಗಾದ ಪ್ರಿಯದರ್ಶಿನಿ ಚಿಕ್ಕಬಳ್ಳಾಪುರ ನಗರದ ಸೈಬರ್ ಕ್ರೈಂ ಬ್ರಾಂಚ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಏನೇ ಆಗಲಿ ಕೋಟ್ಯಾಂತರ ಜನ ಭಕ್ತರನ್ನು ಹೊಂದಿರುವ ತಿರುಪತಿ ತಿಮ್ಮಪ್ಪನ ಹೆಸರಿನಲ್ಲಿ ವಂಚಕ ಭಕ್ತರಿಗೆ ವಂಚನೆ ಮಾಡಿ ಪಂಗನಾಮ ಹಾಕಿರುವುದನ್ನುವಿಪರ್ಯಾಸ ಎಂದೇ ಹೇಳಬಹುದಾಗಿದೆ.

Share This Article
Leave a Comment

Leave a Reply

Your email address will not be published. Required fields are marked *