LatestMain PostNational

ತಿರುಪತಿಗೆ 3 ಕೋಟಿ ರೂ. ಮೌಲ್ಯದ ವಜ್ರ ಖಚಿತ ಚಿನ್ನಾಭರಣ ಕಾಣಿಕೆ ನೀಡಿದ ಅನಾಮಧೇಯ ಭಕ್ತ

ಅಮರಾವತಿ: ತಿರುಪತಿ ತಿಮ್ಮಪ್ಪನಿಗೆ ಅನಾಮಧೇಯ ಭಕ್ತನೊಬ್ಬ 3 ಕೋಟಿ ರೂಪಾಯಿ ಮೌಲ್ಯದ ವಜ್ರ ಖಚಿತ ಚಿನ್ನಾಭರಣ ಕಾಣಿಕೆಯಾಗಿ ನೀಡುವ ಮೂಲಕ  ಸುದ್ದಿಯಾಗಿದ್ದಾರೆ.

ಕೆಲವು ದಿನಗಳ ಹಿಂದೆ ಅನಾಮಧೇಯ ಭಕ್ತರೊಬ್ಬರು ತಿರುಪತಿ ದೇವರಿಗೆ 3 ಕೋಟಿ ರೂ. ಬೆಲೆ ಬಾಳುವ ವಜ್ರ ಮತ್ತು ಚಿನ್ನದಿಂದ ಮಾಡಲಾದ ಹಸ್ತವನ್ನು ಕಾಣಿಕೆಯಾಗಿ ನೀಡಿದ್ದಾರೆ. ತನ್ನ ಹೆಸರನ್ನು ಹೇಳಲು ಅವರು ಇಚ್ಛಿಸಿಲ್ಲ. ವೆಂಕಟೇಶ್ವರನಿಗೆ ಕಾಣಿಕೆಯಾಗಿ ನೀಡಿರುವ ಈ ವಜ್ರ ಖಚಿತವಾದ ಚಿನ್ನದ ಹಸ್ತಗಳನ್ನು ನಾನು ಭಕ್ತಿಯಿಂದ ನೀಡುತ್ತಿದ್ದೇನೆ, ಅದಕ್ಕೆ ಪ್ರಚಾರ ಬೇಕಾಗಿಲ್ಲ ಎಂದು ಹೇಳಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಮಕ್ಕಳಿಗೂ ವಕ್ಕರಿಸಿತು ಹೊಸ ತಳಿ- ಮಹಾರಾಷ್ಟ್ರದಲ್ಲಿ 3 ವರ್ಷದ ಮಗುವಿನಲ್ಲಿ ಓಮಿಕ್ರಾನ್‌ ಪತ್ತೆ

ಈ ಚಿನ್ನದ ಆಭರಣ ಬರೋಬ್ಬರಿ 5.3 ಕೆಜಿ ಮೌಲ್ಯದ್ದಾಗಿದೆ. ಇದಕ್ಕೆ ಸುಮಾರು 3 ಕೋಟಿ ವೆಚ್ಚವಾಗಿದೆ. ಈ ಆಭರಣವನ್ನು ತಿರುಪತಿ ದೇಗುಲದ ಅಧಿಕಾರಿಗಳಿಗೆ ಆ ಭಕ್ತರು ನೀಡಿದ್ದಾರೆ. ತಿರುಪತಿ ವೆಂಕಟೇಶ್ವರ ದೇವಸ್ಥಾನಕ್ಕೆ ದಿನವೂ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಬರುತ್ತಿರುತ್ತಾರೆ. ದೇಶದ ಶ್ರೀಮಂತ ದೇವಸ್ಥಾನಗಳಲ್ಲಿ ತಿರುಮಲ ತಿರುಪತಿ ದೇವಸ್ಥಾನವು ಒಂದಾಗಿದೆ.

Leave a Reply

Your email address will not be published.

Back to top button