ಹೈದರಾಬಾದ್: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ 500 ಹಾಗೂ 1 ಸಾವಿರ ಮುಖಬೆಲೆಯ ನೋಟ್‍ಗಳು ಬ್ಯಾನ್ ಮಾಡಿದ ಬಳಿಕ ತಿರುಪತಿ ತಿಮ್ಮಪ್ಪನಿಗೆ ಒಂದಲ್ಲ ಒಂದು ಸಂಕಷ್ಟ ಎದುರಾಗ್ತಾನೆ ಇದೆ.
ಇತ್ತೀಚೆಗಷ್ಟೇ ದಿನಕ್ಕೆ 5 ಕೋಟಿಯಷ್ಟಿದ್ದ ಆದಾಯ 3ಕೋಟಿಗೆ ಇಳಿದಿತ್ತು. ಈಗ ಹಳೇ ನೋಟು ಸಂಪೂರ್ಣ ನಿಷೇಧವಾದ್ರೂ, ಕಳೆದ 2 ತಿಂಗಳಲ್ಲಿ 4 ಕೋಟಿಯಷ್ಟು 500 ಹಾಗೂ 1 ಸಾವಿರ ರೂಪಾಯಿ ನೋಟುಗಳು ತಿಮ್ಮಪ್ಪನಿಗೆ ಸಲ್ಲಿಕೆಯಾಗಿದೆ. ಇದಕ್ಕೆ ತಿರುಪತಿಯ ಆಡಳಿತ ಮಂಡಳಿ ಕಂಗಾಲಾಗಿದ್ದು, ಕಾನೂನು ಕ್ರಮದ ಭೀತಿ ಎದುರಿಸುತ್ತಿದ್ದಾರೆ.
Advertisement
Advertisement
ಆರ್‍ಬಿಐ ನಿಯಮದ ಪ್ರಕಾರ 10 ನೋಟಿಗಳಿಗಿಂತ ಹೆಚ್ಚು ಹಳೆಯ ನೋಟುಗಳಿದ್ರೆ ಅದು ಕಾನೂನು ರೀತಿಯಲ್ಲಿ ಅಪರಾಧ. ಅಂಥದ್ರಲ್ಲಿ 4 ಕೋಟಿಯಷ್ಟು ಹಳೆಯ ನೋಟುಗಳು ತಿರುಮಲ ಹುಂಡಿಯಲ್ಲಿ ಸಿಕ್ಕಿದೆ. ಈ ಸಮಸ್ಯೆ ಬಗ್ಗೆ ಟಿಟಿಡಿ ಆಡಳಿತ ಮಂಡಳಿ ಈಗಾಗ್ಲೆ ಆರ್‍ಬಿಐ ಹಾಗೂ ಸರ್ಕಾರಕ್ಕೆ ಪತ್ರ ಬರೆದಿದ್ದು ಕಾನೂನು ಕ್ರಮದ ವಿನಾಯಿತಿಗೆ ಮನವಿ ಮಾಡಿದೆ. ಆದ್ರೆ ಆರ್‍ಬಿಐ ಕಡೆಯಿಂದ ಇನ್ನೂ ಯಾವುದೇ ಉತ್ತರ ಬಂದಿಲ್ಲ. ಹೀಗಾಗಿ ತಿರುಮಲ ತಿಮ್ಮಪ್ಪ ಇಕ್ಕಟ್ಟಿಗೆ ಸಿಲುಕಿದ್ದು, ಕಾನೂನು ಕ್ರಮದ ಭೀತಿ ಎದುರಿಸುವಂತಾಗಿದೆ. ಅಧಿಕಾರಿಗಳು ಕೇಸ್ ಹಾಕಿದ್ರೆ ಯಾರ ಮೇಲೆ ಹಾಕಬೇಕು ತಿರುಪತಿ ತಿಮ್ಮಪ್ಪನ ಮೇಲೆ ಹಾಕುತ್ತಾರಾ ಅನ್ನೋ ಕುತೂಹಲ ಕೂಡ ಮೂಡಿದೆ.