– ವೈಕುಂಠ ದ್ವಾರ, ಲಕ್ಷಿ-ಶ್ರೀನಿವಾಸನ ತೂಗು-ಉಯ್ಯಾಲೆ…!
ಬೆಂಗಳೂರು: ಇಂದು ನಾಡಿನೆಲ್ಲೆಡೆ ವೈಕುಂಠ ಏಕಾದಶಿಯ ಸಂಭ್ರಮ ಮನೆಮಾಡಿದೆ. ತಿರುಪತಿ ತಿಮ್ಮಪ್ಪನ ದರ್ಶನ ಮಾಡಬೇಕು ಅನ್ನೋ ನಂಬಿಕೆ ಲಕ್ಷಾಂತರ ಭಕ್ತಾದಿಗಳಲ್ಲಿ ಇದ್ದೇ ಇರುತ್ತೆ. ಆದ್ರೆ ವೆಂಕಟೇಶ್ವರನ ಪಾಸ್ ಸಿಗದೇ ಇದ್ದಿದ್ದಕ್ಕೆ ಬೆಂಗಳೂರಿನ ಭಕ್ತನೊಬ್ಬ ತಿರುಪತಿ ತಿಮ್ಮಪ್ಪನನ್ನೇ ಮನೆಗೆ ಕರೆಸಿದ್ದಾನೆ.
ಧನುರ್ಮಾಸ ಶುಕ್ಲ ಪಕ್ಷದಲ್ಲಿ ಬರುವ ವೈಕುಂಠ ಏಕಾದಶಿಯಂದು ದೇವತೆಗಳು ಭೂ ಲೋಕಕ್ಕೆ ಬಂದು ಜಗದೊಡೆಯ ಶ್ರೀವಿಷ್ಣು ದೇವರನ್ನು ಪೂಜಿಸುತ್ತಾರೆ ಎಂದು ಪುರಾಣಗಳು ಹೇಳುತ್ತವೆ. ಆದ್ದರಿಂದಲೇ ಈ ದಿನದಂದು ದೇವಾಲಯದ ಉತ್ತರ ದ್ವಾರದ ಮೂಲಕ ವಿಷ್ಣುವಿನ ದರ್ಶನ ಮಾಡಿದರೆ ಸಕಲ ಪುಣ್ಯಗಳು ಪ್ರಾಪ್ತಿಯಾಗುತ್ತವೆ ಎಂಬುದು ನಂಬಿಕೆ. ಅದರಂತೆ ಇಂದು ನಾಡಿನೆಲ್ಲೆಡೆ ವೈಕುಂಠ ಏಕಾದಶಿ ಹಬ್ಬದ ಸಂಭ್ರಮ ಮನೆ ಮಾಡಿದೆ. ಇದನ್ನೂ ಓದಿ: Tirupati Stampede: ಗಾಯಗೊಂಡ ಗಾಯಾಳುಗಳಿಗೆ ವಿಶೇಷ ದರ್ಶನ, ಅಧಿಕಾರಿಗಳು ಅಮಾನತು
ಇಂದು ತಿರುಪತಿ ತಿಮ್ಮಪ್ಪನ ದರ್ಶನ ಮಾಡಬೇಕು ಅನ್ನೋ ನಂಬಿಕೆ ಲಕ್ಷಾಂತರ ಭಕ್ತಾದಿಗಳಲ್ಲಿ ಇರುತ್ತದೆ. ಆದ್ರೆ ಟಿಕೆಟ್ ಎಲ್ಲರಿಗೂ ಸಿಗಲ್ಲ. ಈ ಹಿನ್ನಲೆ, ಬೆಂಗಳೂರಿನ ತಿರುಪತಿ ತಿಮ್ಮಪ್ಪನ ಅಪ್ಪಟ್ಟ ಭಕ್ತನೊಬ್ಬ, ಟಿಕೆಟ್ ಸಿಗದೇ ಇದ್ದಿದ್ದಕ್ಕೆ ಬೆಂಗಳೂರಿನ ತನ್ನ ಮನೆಯಲ್ಲೇ ವೆಂಕಟೇಶ್ವರ ಮೂರ್ತಿಯನ್ನು ನಿರ್ಮಿಸಿದ್ದಾರೆ. ಸುಮಾರು 8 ಅಡಿ ಎತ್ತರದಲ್ಲಿ ಬಾಲಾಜಿ ಮೂರ್ತಿಯನ್ನು ನಿರ್ಮಾಣ ಮಾಡಿದ್ದಾರೆ. ಹತ್ತಿ, ಬಟ್ಟೆ, ಪೇಯಿಂಟ್ ಮೂಲಕ ಬಾಲಾಜಿಯನ್ನು ಅಲಂಕರಿಸಲಾಗಿದೆ.
ಜಯನಗರದ ಉಷಾ ಅಪಾರ್ಟ್ಮೆಂಟ್ ನಿವಾಸಿಯಾಗಿರೋ ದೀಪಕ್, ಕಳೆದ 9 ವರ್ಷದಿಂದ ಪ್ರತಿ ತಿಂಗಳು ತಿರುಪತಿ ಬೆಟ್ಟ ಹತ್ತಿಕೊಂಡು ದರ್ಶನ ಮಾಡುತ್ತಿದ್ದರು. ಆದ್ರೇ ಇಂದು ಬಾಲಾಜಿ ದರ್ಶನ ಸಿಗದ ಹಿನ್ನೆಲೆ ಮನೆಯಲ್ಲೇ ದೇಗುಲ ನಿರ್ಮಿಸಿದ್ದಾರೆ. ವೆಂಕಟೇಶ್ವರ ಮೂರ್ತಿ ಜೊತೆ ಲಕ್ಷ್ಮಿ, ವೆಂಕಟೇಶ್ವರ ತೂಗು ಉಯ್ಯಾಲೆ, ವೈಕುಂಠ ದ್ವಾರ ನಿರ್ಮಿಸಿದ್ದಾರೆ. ತಿರುಪತಿ ತಿಮ್ಮಪ್ಪನ ದರ್ಶನ ಪಡೆಯಲು ಸ್ಥಳೀಯ ಜನ ಬರುತ್ತಿದ್ದಾರೆ. ಇದನ್ನೂ ಓದಿ: ಬೆಂಗ್ಳೂರಿನಲ್ಲಿ ದೇವಸ್ಥಾನಗಳಲ್ಲಿ ಏಕಾದಶಿ ಸಂಭ್ರಮ – ರಾತ್ರಿ 11 ಗಂಟೆ ವರೆಗೆ ಇಸ್ಕಾನ್‌ನಲ್ಲಿ ದರ್ಶನಕ್ಕೆ ಅವಕಾಶ