ಹೈದರಾಬಾದ್: ತಿರುಪತಿ ತಿರುಮಲ ವೆಂಕಟೇಶ್ವರ ದೇವಸ್ಥಾನದಲ್ಲಿ ಭಕ್ತರಿಗೆ ಕೊಡುವ ಲಡ್ಡು ಕಲಬೆರಕೆ ವಿವಾದದಲ್ಲಿ ಸಿಬಿಐ ಬೆನ್ನಲ್ಲೇ ಇದೀಗ ಇ.ಡಿ. ಕೂಡ ಎಂಟ್ರಿಯಾಗಿದೆ.
235 ಕೋಟಿ ರೂ. ಮೌಲ್ಯದ ಹಗರಣದಲ್ಲಿ 20 ಕೋಟಿ ಹವಾಲಾ ಹಣ ಬಳಕೆಯಾಗಿದೆ. ಮೊಬೈಲ್ ಫೋನ್‌ಗಳು, ವಾಟ್ಸಾಪ್ ಚಾಟ್‌ಗಳು ಮತ್ತು ಎಕ್ಸೆಲ್ ಶೀಟ್‌ಗಳಲ್ಲಿ ಇತರ ಅಧಿಕಾರಿಗಳಿಗೆ ಸಣ್ಣ ಮೊತ್ತವನ್ನು ಪಾವತಿಸಲಾಗಿದೆ ಎಂದು ಸಿಬಿಐ ಹೇಳಿತ್ತು. ಇದೇ ಮಾಹಿತಿಯನ್ನು ಆಧರಿಸಿ ಇಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಶುರು ಮಾಡಿದೆ. ಇದನ್ನೂ ಓದಿ: ಬಿಕ್ಲುಶಿವ ಕೊಲೆ ಕೇಸ್ – ಬೈರತಿ ಬಸವರಾಜುಗೆ ಮತ್ತೆ ಸಂಕಷ್ಟ, ನಿರೀಕ್ಷಣಾ ಜಾಮೀನು ಅರ್ಜಿ ವಜಾ
ಈ ಹಿಂದೆ ಟಿಟಿಡಿ ಅಧ್ಯಕ್ಷರ ಪಿಎ, ಜನರಲ್ ಮ್ಯಾನೇಜರ್ ಸೇರಿದಂತೆ ಹಲವು ಮಂದಿಗೆ ನಗದು ಸಹಿತ ದುಬಾರಿ ಉಡುಗೊರೆ ನೀಡಿರುವುದು ಎಸ್‌ಐಟಿ ತನಿಖೆಯಲ್ಲಿ ದೃಢಪಟ್ಟಿದೆ. ಈ ಹಣವನ್ನು ಕಮಿಷನ್ ಏಜೆಂಟ್‌ಗಳ ಮೂಲಕ ರವಾನಿಸಲಾಗಿದೆ. ಈ ಎಲ್ಲ ಅಂಶಗಳನ್ನು ಇಟ್ಟುಕೊಂಡು ಇಡಿ ಈಗ ತನಿಖೆ ಶುರು ಮಾಡಿದೆ.

