ಮ್ಯಾಡ್ರಿಡ್: ಲ್ಯಾಂಡ್ ಆಗಿದ್ದ ವಿಮಾನದಿಂದ ಕೆಳಗಿಳಿಯಲು ಕಾದು ಕಾದು ಸುಸ್ತಾದ ಪ್ರಯಾಣಿಕನೊಬ್ಬ ಎಮರ್ಜೆನ್ಸಿ ಎಕ್ಸಿಟ್‍ನಿಂದ ಹೊರಹೋಗಲು ಯತ್ನಿಸಿ ವಿಮಾನದ ರೆಕ್ಕೆಯ ಮೇಲೆ ಕುಳಿತ ಘಟನೆ ಸ್ಪೇನ್‍ನಲ್ಲಿ ನಡೆದಿದೆ.
ಸೋಮವಾರದಂದು ಲಂಡನ್‍ನಿಂದ ದಕ್ಷಿಣ ಸ್ಪೇನ್‍ನ ಮಲಾಗಾ ವಿಮಾನ ನಿಲ್ದಾಣಕ್ಕೆ ಬಂದು ಲ್ಯಾಂಡ್ ಆಗಿದ್ದ ರ್ಯಾನೈರ್ ವಿಮಾದಲ್ಲಿ ಪ್ರಯಾಣಿಕರು ಕೆಳಗಿಳಿಯೋಕೆ ಸುಮಾರು ಹೊತ್ತಿನಿಂದ ಕಾಯುತ್ತಿದ್ರು. ಹೀಗೆ ಕಾದು ಕಾದು ಸುಸ್ತಾಗಿದ್ದ ಪ್ರಯಾಣಿಕನೊಬ್ಬ ಎಮರ್ಜೆನ್ಸಿ ಎಕ್ಟಿಟ್‍ನಿಂದ ಹೊರಗಡೆ ಹೋಗಿ ರೆಕ್ಕೆಯ ಮೇಲೆ ಕುಳಿತ ಎಂದು ಪ್ರತ್ಯಕ್ಷದರ್ಶಿಗಳು ಹಾಗೂ ಏರ್‍ಲೈನ್ಸ್ ನವರು ಹೇಳಿದ್ದಾರೆ.
Advertisement
Advertisement
ವಿಮಾನದಲ್ಲಿದ್ದ ಪ್ರಯಾಣಿಕ ಫೆರ್ನಾಂಡೋ ಡೆಲ್ ವೆಲ್ಲೇ ಈ ದೃಶ್ಯವನ್ನ ವಿಡಿಯೋ ಮಾಡಿ ಫೇಸ್‍ಬುಕ್‍ನಲ್ಲಿ ಹಂಚಿಕೊಂಡಿದ್ದಾರೆ. ವ್ಯಕ್ತಿ ವಿಮಾನದ ರೆಕ್ಕೆ ಮೇಲೆ ನಡೆದುಕೊಂಡು ಹೋಗಿ ಕೆಳಗೆ ಜಿಗಿಯಲು ಯತ್ನಿಸಿದ್ದಾನೆ. ಆದ್ರೆ ರೆಕ್ಕೆಯ ಮೇಲೆಯೇ ತನ್ನ ಬ್ಯಾಗ್ ಕೆಳಗೆ ಹಾಕಿ ಅದರ ಪಕ್ಕ ಕುಳಿತುಕೊಳ್ಳೋದನ್ನ ವಿಡಿಯೋದಲ್ಲಿ ಕಾಣಬಹುದು.
Advertisement
Advertisement
ವಿಮಾನದಿಂದ ಹೊರಗೆ ಹೋಗಲು ನಾವು ಸುಮಾರು ಅರ್ಧ ಗಂಟೆಯಿಂದ ಕಾಯುತ್ತಿದ್ದೆವು. ಆ ವ್ಯಕ್ತಿ ಕೂಲಾಗಿ ಎಮರ್ಜೆನ್ಸಿ ಎಕ್ಸಿಟ್ ಬಳಿ ಹೋದ್ರು. ಅಲ್ಲಿ ಬಾಗಿಲು ತೆರೆದು ಹೊರಗೆ ನೋಡಿದ್ರು. ನಂತರ ವಾಪಸ್ ಬಂದು ತನ್ನ ಬ್ಯಾಗ್ ತೆಗೆದುಕೊಂಡು ರೆಕ್ಕೆಯ ಮೇಲೆ ಹೋದ್ರು. ಕ್ಯಾಪ್ಟನ್ ಅಂತೂ ದಂಗಾಗಿ ಹೋದ್ರು. ರೆಕ್ಕೆಯ ಮೇಲೆ ಹೋಗಿರೋದು ಯಾರು ಅಂತ ಕೇಳಿದ್ರು ಎಂದು ಫೆರ್ನಾಂಡೋ ತಿಳಿಸಿದ್ದಾರೆ.
ಫೆರ್ನಾಂಡೋ ಸ್ಪೇನ್‍ನವರಾಗಿದ್ದು, ಲಂಡನ್‍ನಿಂದ ಹಿಂದಿರುಗಿದ್ದರು. ಲಂಡನ್‍ನಿಂದ 1 ಗಂಟೆ ತಡವಾಗಿ ಹೊರಟಿದ್ದ ವಿಮಾನ, ನಿಗದಿತ ಸಮಯಕ್ಕಿಂತ 20 ನಿಮಿಷ ತಡವಾಗಿ ಸ್ಪೇನ್‍ಗೆ ಆಗಮಿಸಿತ್ತು.
ವಿಮಾನದ ರೆಕ್ಕೆಯ ಮೇಲೆ ಕುಳಿತ ವ್ಯಕ್ತಿಯನ್ನ ಕೂಡಲೇ ಬಂಧಿಸಲಾಯಿತು ಎಂದು ರ್ಯಾಬೈರ್ ಏರ್‍ಲೈನ್ಸ್ ತಿಳಿಸಿದೆ.