– ಜೆಪಿಸಿ ಮುಂದೆ ನ್ಯಾಯಕ್ಕಾಗಿ ಮನವಿ
ಹಾವೇರಿ: ವಕ್ಫ್ ಬೋರ್ಡ್ (Waqf Board) ಆಸ್ತಿ ಕಿರಿಕಿರಿಗೆ ಬೇಸತ್ತು ಯುವ ರೈತನೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹಾವೇರಿ (Haveri) ಜಿಲ್ಲೆಯ ಹರನಗಿ ಗ್ರಾಮದಲ್ಲಿ ನಡೆದಿದೆ.
ಹರನಗಿ ಗ್ರಾಮದ ನಿವಾಸಿ ರುದ್ರಪ್ಪ 2022ರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದು, ಇಂದು (ನ.7) ಕೇಂದ್ರ ಸಂಸದೀಯ ಜಂಟಿ ಕಮಿಟಿಯ (Joint Parliamentary Committee) ಮುಂದೆ ಹಾವೇರಿ ರೈತರು ಪ್ರಸ್ತಾಪಿಸಿದ ಬಳಿಕ ಈ ವಿಚಾರ ಈಗ ಮುನ್ನೆಲೆಗೆ ಬಂದಿದೆ. ಇದನ್ನೂ ಓದಿ: ಜೆಪಿಸಿ ಸಮಿತಿಯಿಂದ ಭರವಸೆ – ಯತ್ನಾಳ್, ಕರಂದ್ಲಾಜೆ ಅಹೋರಾತ್ರಿ ಪ್ರತಿಭಟನೆ ಅಂತ್ಯ
ರುದ್ರಪ್ಪ ಅವರ ತಂದೆ ಚೆನ್ನಪ್ಪ ಹಾನಗಲ್ ತಾಲ್ಲೂಕಿನ ಅಲ್ಲಾಪುರ ಗ್ರಾಮದಲ್ಲಿ 1964ರಲ್ಲಿ 4 ಎಕರೆ 36 ಗುಂಟೆ ಜಮೀನು ಖರೀದಿ ಮಾಡಿದ್ದರು. 2015 ರವರೆಗೆ ಚೆನ್ನಪ್ಪ ಮತ್ತು ಮಗ ರುದ್ರಪ್ಪ ಉಳುಮೆ ಮಾಡಿಕೊಂಡು ಬರುತ್ತಿದ್ದರು. ಆದರೆ 2015ರಲ್ಲಿ ಏಕಾಏಕಿ ಜಮೀನು ವಕ್ಫ್ ಬೋರ್ಡ್ಗೆ ಸೇರ್ಪಡೆಯಾಗಿದೆ.
ಯಾವುದೇ ನೋಟಿಸ್ ನೀಡದೇ ರೈತರಿಂದ ಜಮೀನನ್ನು ವಕ್ಫ್ ಬೋರ್ಡ್ ವಶಪಡಿಸಿಕೊಂಡಿದೆ. ಈ ಬಗ್ಗೆ ಸಾಕಷ್ಟು ಹೋರಾಟ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಇದರಿಂದ ಚೆನ್ನಪ್ಪ , ಮಗ ರುದ್ರಪ್ಪ ಕಂಗಾಲಾಗಿದ್ದರು. ಇರುವ ಜಮೀನು ಕಳೆದುಕೊಂಡು ಮಾನಸಿಕ ನೋವಿನಿಂದ ಚೆನ್ನಪ್ಪನ ಮಗ ರುದ್ರಪ್ಪ 2022ರ ಜನವರಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.
ಜೆಪಿಸಿ ಸಮಿತಿಯ ಅಧ್ಯಕ್ಷ ಜಗದಾಂಬಿಕ ಪಾಲ್ (Jagdambika Pal) ಭೇಟಿ ನೀಡಿದ ಸಂದರ್ಭದಲ್ಲಿ ಮೃತ ರುದ್ರಪ್ಪನ ಕುಟುಂಬಸ್ಥರು ಹಾಗೂ ಸ್ನೇಹಿತರು ಎಲ್ಲ ವಿಚಾರವನ್ನು ವಿವರವಾಗಿ ತಿಳಿಸಿದ್ದಾರೆ.ಇದನ್ನೂ ಓದಿ: ಮಾಸ್ ಆಗಿ ಎಂಟ್ರಿ ಕೊಟ್ಟ ಕಮಲ್ ಹಾಸನ್- ‘ಥಗ್ ಲೈಫ್’ ಚಿತ್ರದ ಟೀಸರ್ ಔಟ್