ಧಾರವಾಡ: ದಾವಣಗೆರೆ (Davanagere) ಯ ಬೆನ್ನಲ್ಲೇ ಇದೀಗ ಧಾರವಾಡದಲ್ಲಿಯೂ ಸಲಿಂಗಕಾಮದ ಸುದ್ದಿಯೊಂದು ಹೊರಬಿದ್ದಿದೆ. ಸಲಿಂಗಕಾಮಿಯ ಕಾಟಕ್ಕೆ ಯುವಕನೋರ್ವ ತನ್ನ ಜೀವವನ್ನೇ ಕಳೆದುಕೊಂಡಿದ್ದಾನೆ.
ಯಾಸೀನ್ ರೋಟಿವಾಲೆ ಮೃತ ಯುವಕನಾಗಿದ್ದು, ಈತ ಧಾರವಾಡ ಅತ್ತಿಕೊಳ್ಳದ ನಿವಾಸಿ. ವೃತ್ತಿಯಲ್ಲಿ ಆಟೊ ಡ್ರೈವರ್ ಆಗಿದ್ದ ಇವನು, ಕಳೆದ ಅಕ್ಟೋಬರ್ 12 ರಂದು ತನ್ನ ಮನೆಯಿಂದ ಹೊರ ಹೋಗಿದ್ದ. ನಂತರ ಅಕ್ಟೋಬರ್ 15 ರಂದು ಧಾರವಾಡದ ಕೆಲಗೇರಿ ಕೆರೆಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ.
Advertisement
Advertisement
ಪವನ್ ಬ್ಯಾಳಿ ಎಂಬವನ ಜೊತೆ ಯಾಸೀನ್‍ಗೆ ಗೆಳೆತನವಿತ್ತು. ಆದರೆ ಪವನ್ ಸಲಿಂಗಕಾಮಿ (Homosexual). ಈತನ ಕಾಟಕ್ಕೆ ಯಾಸೀನ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂಬುದು ಯಾಸೀನ್ ತಂದೆ ರಫೀಕ್ ಆರೋಪ ಮಾಡುತ್ತಿದ್ದಾರೆ. ಯಾಸೀನ್ ಹಾಗೂ ಪವನ್ ಮಧ್ಯೆ ಏಳೆಂಟು ತಿಂಗಳಿನಿಂದ ಗೆಳೆತನ ಇತ್ತು. ಈ ಗೆಳೆತನ ಸಲಿಂಗಕಾಮಕ್ಕೂ ಕಾರಣವಾಗಿತ್ತು. ಅಲ್ಲದೇ ಪವನ್ ಎಲ್ಲರ ಮುಂದೆ ನಾನು ಯಾಸೀನ್‍ನ್ನು ಮದುವೆ (Same Sex Marriage) ಮಾಡಿಕೊಂಡಿದ್ದೇನೆ ಎಂದೂ ಹೇಳಿದ್ದ. ಈ ಗೆಳೆತನ (Friendship) ಮತ್ತೊಂದು ಸ್ವರೂಪ ಪಡೆದುಕೊಂಡಿತ್ತು.
Advertisement
Advertisement
ಪವನ್ ಯಾಸೀನ್‍ಗೆ ಪ್ರತಿನಿತ್ಯ ಫೋನ್ ಮಾಡಿ ತನ್ನ ಸಂಪರ್ಕಕ್ಕೆ ಬರುವಂತೆ ಕಿರುಕುಳ ನೀಡುತ್ತಿದ್ದನಂತೆ. ಅಲ್ಲದೇ ಅಕ್ಟೋಬರ್ 12 ರಂದು ಪವನ್, ಯಾಸೀನ್ ಜೊತೆಯೇ ಇದ್ದ ಎಂಬುದು ಯಾಸೀನ್ ಪೋಷಕರ ಆರೋಪವಾಗಿದೆ. ಪವನ್ ನೀಡುತ್ತಿದ್ದ ಈ ಕಿರುಕುಳದಿಂದಲೇ ಬೇಸತ್ತು ಯಾಸೀನ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಯಾಸೀನ್ ತಂದೆ ರಫೀಕ್ ವಿದ್ಯಾಗಿರಿ ಠಾಣೆ (Vidyagiri Police Station) ಯಲ್ಲಿ ದೂರು ನೀಡಿದ್ದು, ಸದ್ಯ ಪವನ್‍ನ್ನು ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: ಯುವತಿಯರಿಬ್ಬರ ನಡುವೆ ಪ್ರೇಮಾಂಕುರ- ಬೇರೆಯವಳೊಂದಿಗೆ ಮಾತಾಡಿದ್ದಕ್ಕೆ ರೇಡಿಯಂ ಕಟರ್‌ನಿಂದ ಹಲ್ಲೆಗೈದ್ಳು!
ಯಾಸೀನ್ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಪವನ್ ಹಾಗೂ ಈತನ ಮಧ್ಯೆ ಜಗಳ ಕೂಡ ಆಗಿತ್ತು. ಇದರಿಂದ ಬೇಸತ್ತ ಯಾಸೀನ್ ಆತ್ಮಹತ್ಯೆಗೆ ಶರಣಾಗಿದ್ದಾನೆ. ಅಲ್ಲದೇ ಸಾಯುವ ಮುನ್ನ ತನ್ನ ತಂದೆಗೂ ಕರೆ ಮಾಡಿ, ಪವನ್ ಕಿರುಕುಳದ ಬಗ್ಗೆ ಹೇಳಿದ್ದ. ತನ್ನ ಸ್ನೇಹಿತರಿಗೂ ಮೆಸೇಜ್ ಮಾಡಿದ್ದ ಯಾಸೀನ್, ತನ್ನ ತಂದೆ-ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳುವಂತೆ ಮನವಿ ಮಾಡಿದ್ದ.
ಸದ್ಯ ಸಲಿಂಗಕಾಮಿಯ ಕಾಟಕ್ಕೆ ಬೇಸತ್ತ ಯುವಕನೋರ್ವ ತನ್ನ ಜೀವವನ್ನೇ ಕಳೆದುಕೊಂಡಿದ್ದು ವಿಪರ್ಯಾಸವೇ ಸರಿ. ಈ ರೀತಿಯ ಕಾಟ ನೀಡಿದ ಸಲಿಂಗಕಾಮಿಯನ್ನು ಪೊಲೀಸರು ಕಂಬಿ ಹಿಂದೆ ತಳ್ಳಿದ್ದು, ಈ ಪ್ರಕರಣದ ಸಂಬಂಧ ಇನ್ನೂ ಹೆಚ್ಚಿನ ವಿಚಾರಣೆ ನಡೆಯುತ್ತಿದೆ.