ಬೆಂಗಳೂರು: ಪತ್ನಿ ಟಾರ್ಚರ್‍ನಿಂದ ಬೇಸತ್ತು ಇದೀಗ ಪತಿ ಪೊಲೀಸ್ ಠಾಣೆ ಮೆಟ್ಟಿಲೇರಿದ ಪ್ರಕರಣವೊಂದು ಬೆಳಕಿಗೆ ಬಂದಿದೆ.
ರಾಮನಗರ (Ramanagar) ಮೂಲದ ರಾಮಚಂದ್ರ (Ramachandra) ಬೆಂಗಳೂರಿನಲ್ಲಿ ಪೊಲೀಸ್ ಮಹಾನಿರ್ದೇಶಕರ ಕಚೇರಿ, ಮಾನವ ಹಕ್ಕುಗಳ ಆಯೋಗದ ಕದ ತಟ್ಟಿದ್ದಾರೆ. ಈ ಬಗ್ಗೆ ವಿಚಾರಿಸಿದರೆ ರಾಮಚಂದ್ರ ಅವರು ಕಣ್ಣಲ್ಲಿ ನೀರು ತುಂಬಿಕೊಂಡು ಹೆಂಡ್ತಿ ಹೊಡೆಯುತ್ತಾಳೆ ಅಂತಾ ಬೇಸರ ವ್ಯಕ್ತಪಡಿಸಿದ್ದಾರೆ.
ಐದು ಲಕ್ಷಕ್ಕಾಗಿ ಪತ್ನಿ ರಾಮಚಂದ್ರ ಅವರನ್ನು ಪೀಡಿಸುತ್ತಿದ್ದಾರಂತೆ. ದುಡ್ಡು ಕೊಡಲ್ಲ ಅಂತಾ ಹೇಳಿದ್ದಕ್ಕೆ ಸರಿಯಾಗಿ ಹೊಡೆಯುತ್ತಿದ್ದಾಳೆ, ಹೆಂಡ್ತಿ ಜೊತೆ ಮಗ ಹಾಗೂ ಹೆಂಡ್ತಿ ತಾಯಿ ಕೂಡ ಸಾಥ್ ಕೊಟ್ಟು ನನಗೆ ಹಲ್ಲೆ ಮಾಡುತ್ತಿದ್ದಾರೆ ಅಂತಾ ಆರೋಪಿಸಿದ್ದಾರೆ. ಇದನ್ನೂ ಓದಿ: ಉದ್ಯಮಿ ಪ್ರದೀಪ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್- ಮೂರು ಡೆತ್‍ನೋಟ್ ಪತ್ತೆ
ಡಿಜಿಗೆ ದೂರು ಕೊಟ್ಟಿರುವ ರಾಮಚಂದ್ರ, ಮಾನವ ಹಕ್ಕುಗಳ ಆಯೋಗಕ್ಕೂ ದೂರು ಕೊಟ್ಟಿದ್ದಾರೆ. ನ್ಯಾಯ ಸಿಗದೇ ಇದ್ದರೆ ಆತ್ಮಹತ್ಯೆ ಮಾಡಿಕೊಳ್ತೀನಿ ಅಂತಾ ರಾಮಚಂದ್ರ ನೋವು ತೋಡಿಕೊಂಡಿದ್ದಾರೆ. ಊಟ ಕೊಡ್ತಿಲ್ಲ, ನಾನೇ ಕಟ್ಟಿದ ಮನೆಯಲ್ಲಿ ಜಾಗ ಕೊಡ್ತಿಲ್ಲ ಅಂತಾ ರಾಮಚಂದ್ರಪ್ಪ ಅಳಲು ತೋಡಿಕೊಂಡಿದ್ದಾರೆ. ಇದೀಗ ರಾಮಚಂದ್ರ ಅವರಿಗೆ ನ್ಯಾಯ ಸಿಗುತ್ತಾ ಎಂಬುದನ್ನು ಕಾದುನೋಡಬೇಕಿದೆ.