ಬೆಂಗಳೂರು: ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತು ವಿವಾಹಿತೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ (Bengaluru) ಬನಶಂಕರಿ ನಗರದಲ್ಲಿ (Banashankari Nagar) ನಡೆದಿದೆ.
ಮೃತಳನ್ನು ಕೀರ್ತಿ ಎಂದು ಗುರುತಿಸಲಾಗಿದ್ದು, ಎರಡು ವರ್ಷಗಳ ಹಿಂದೆಯಷ್ಟೇ ಮೃತ ಕೀರ್ತಿ ಹಾಗೂ ಗುರುಪ್ರಸಾದ್ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು.ಇದನ್ನೂ ಓದಿ: ತಂದೆಯೇ ಮಗು ಕೊಂದ ಪ್ರಕರಣ – ಹಲವು ಸೆಕ್ಸ್ ಚಾಟ್ ಗ್ರೂಪಲ್ಲಿ ಆಕ್ಟೀವ್ ಆಗಿದ್ದ ಶಿಜಿಲ್
ಭಾನುವಾರ (ಜ.25) ಬೆಳಿಗ್ಗೆ ನೇಣು ಬಿಗಿದ ಸ್ಥಿತಿಯಲ್ಲಿ ಕೀರ್ತಿ ಶವ ಪತ್ತೆಯಾಗಿದೆ. ಈ ವೇಳೆ ಪತಿ ಗುರುಪ್ರಸಾದ್ ಹಾಗೂ ಪರಿಚಯಸ್ಥರು ಪೋಷಕರಿಗೆ ಮಾಹಿತಿ ನೀಡಿ, ತಲೆ ತಿರುಗಿ ಬಿದ್ದಿದ್ದಳು ಆಸ್ಪತ್ರೆಗೆ ಸೇರಿಸಿದ್ದೇವೆ ಎಂದು ತಿಳಿಸಿದ್ದರು.
ಮೃತಳ ಪೋಷಕರ ಮಾಹಿತಿ ಪ್ರಕಾರ, ಕೈತುಂಬ ವರದಕ್ಷಿಣೆ ಕೊಟ್ಟು ಮದುವೆ ಮಾಡಿಕೊಟ್ಟಿದ್ದರು. ಆದರೂ ಕೂಡ ಕಳೆದ ಎರಡು ತಿಂಗಳಿಂದ ಕಿರುಕುಳ ನೀಡುತ್ತಿದ್ದರು. ಇದೆಲ್ಲವನ್ನು ಕೀರ್ತಿ ತನ್ನ ತಾಯಿ ಬಳಿ ಹೇಳಿಕೊಂಡಿದ್ದು, ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸದ್ಯ ಕುಟುಂಬಸ್ಥರು ಪತಿ ಗುರುಪ್ರಸಾದ್ ವರದಕ್ಷಿಣೆ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ.
ಈ ಕುರಿತು ಬನಶಂಕರಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.ಇದನ್ನೂ ಓದಿ: ಸೆಕ್ಸ್ ಗೆ ಮಗು ಅಡ್ಡಿ – 1 ವರ್ಷದ ಮಗುವನ್ನ ಕೊಲೆಗೈದ ತಂದೆ; ಸಿಕ್ಕಿಬಿದ್ದಿದ್ದೇ ರೋಚಕ!

