ಕೊಪ್ಪಳ: ಕಿರುಕುಳಕ್ಕೆ (Harassment) ಬೇಸತ್ತು ಗುತ್ತಿಗೆದಾರ (Contractor), ಹಿಂದೂ ಪರ ಸಂಘಟನೆ ಕಾರ್ಯಕರ್ತ ಆತ್ಮಹತ್ಯೆ (Suicide) ಮಾಡಿಕೊಂಡಿರುವ ಘಟನೆ ಕೊಪ್ಪಳದಲ್ಲಿ (Koppal) ನಡೆದಿದೆ.
ಕೊಪ್ಪಳ ನಗರದ ಬಿ.ಟಿ. ಪಾಟೀಲ್ ನಗರದ ರಾಜೀವ ಬಗಾಡೆ (50) ಮೃತ ಗುತ್ತಿಗೆದಾರ. ಕಳೆದ ನಾಲ್ಕು ದಿನದ ಹಿಂದೆ ವಿಷ ಸೇವಿಸಿದ್ದ ರಾಜೀವ ಬಗಾಡೆಗೆ ಕೊಪ್ಪಳದಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲಾಗುತ್ತಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಇದನ್ನೂ ಓದಿ: ಸ್ನೇಹಿತನಿಂದಲೇ ವಿದ್ಯಾರ್ಥಿನಿಯ ಅತ್ಯಾಚಾರ – ಆರೋಪಿ ಅರೆಸ್ಟ್
Advertisement
Advertisement
ಮೃತ ಗುತ್ತಿಗೆದಾರ ತನ್ನ ಸಾವಿಗೆ ಯಾರೆಲ್ಲ ಕಾರಣ ಎಂಬುದನ್ನು ಡೆತ್ ನೋಟ್‌ನಲ್ಲಿ (Death Note) ಉಲ್ಲೇಖಿಸಿದ್ದಲ್ಲದೇ, ವಿಡಿಯೋ ದಾಖಲಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತಾನು ಕೆಲ ಸರ್ಕಾರಿ ಕಾಮಗಾರಿಗಳನ್ನು ಉಪ ಗುತ್ತಿಗೆ ಪಡೆದು ಕೆಲಸ ನಿರ್ವಹಿಸಿದ್ದು, ಕಾಮಗಾರಿ ಪೂರ್ಣಗೊಂಡರೂ ಹಣ ಪಾವತಿ ಮಾಡಿಲ್ಲ. ಕೆಲವರು ಹಣ ಪಡೆದು ವಾಪಸ್ ನೀಡಿಲ್ಲ. ಈ ಕಾರಣಕ್ಕೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾಗಿ, ಡೆತ್ ನೋಟ್‌ನಲ್ಲಿ ಉಲ್ಲೇಖಿಸಿದ್ದಾರೆ. ಇದನ್ನೂ ಓದಿ: ಹನಿಟ್ರ್ಯಾಪ್ ಆರೋಪ ಮಹಿಳೆಗೆ ಚಪ್ಪಲಿ ಹಾರ ಹಾಕಿ ಮೆರವಣಿಗೆ
Advertisement
ಕಾಂಗ್ರೆಸ್ ಮುಖಂಡರಾದ ಪ್ರಸನ್ನ ಗಡಾದ, ನಗರಸಭೆ ಸದಸ್ಯ ಚೆನ್ನಪ್ಪ ಕೋಟ್ಯಾಳ್ ಸೇರಿ 7 ಜನರ ಹೆಸರನ್ನು ಡೆತ್ ನೋಟ್‌ನಲ್ಲಿ ಉಲ್ಲೇಖಿಸಲಾಗಿದೆ. ಈ ಹಿನ್ನೆಲೆ ಡೆತ್ ನೋಟ್‌ನಲ್ಲಿ ಗುತ್ತಿಗೆದಾರ ದೊಡ್ಡಪ್ಪ ಹರಗುರಿ, ನಗರಸಭೆ ಸದಸ್ಯ ಚನ್ನಪ್ಪಕೋಟ್ಯಾಳ, ನಗರಸಭೆ ಮಾಜಿ ಸದಸ್ಯ ಡಾ.ಉಪೇಂದ್ರ ರಾಜು, ಮುನಿ ವಿಜಯಕುಮಾರ, ರಫಿ, ಮಲ್ಲಿಕಾರ್ಜುನ ವಿರುದ್ಧ ಕೊಪ್ಪಳ ನಗರ ಠಾಣೆಯಲ್ಲಿ ಐಪಿಸಿ ಸೆಕ್ಷನ್ 306 ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಕೊಡಲಿಯಿಂದ ಹಲ್ಲೆಗೈದು ಹೊರಹಾಕಿ ಮನೆಯೊಳಗೆ ಮಲಗಿದ- ಬೆಳಗೆದ್ದು ನೋಡಿದಾಗ ಪತ್ನಿ ಸಾವು
Advertisement
ಕೆಲಸ ಮಾಡಿದ ಹಣ ಬಂದಿಲ್ಲ. ಇದರಲ್ಲಿ ಕೆಲವರು ಹಣ ತೆಗೆದುಕೊಂಡು ವಾಪಸ್ ಕೊಡದೇ ಸತಾಯಿಸಿದ್ದಾರೆ. ಹಣ ಕೇಳಿದರೆ ಬೆದರಿಕೆ ಹಾಕಿದ್ದಾರೆ ಎಂದು ಬಗಾಡೆ ಪತ್ರದಲ್ಲಿ ಬರೆದಿದ್ದಾರೆ. ಜೊತೆಗೆ ಕಿರುಕುಳದ ಕುರಿತು ಆಸ್ಪತ್ರೆಯಲ್ಲಿ ಹೇಳಿಕೆ ನೀಡಿದ್ದು, ವಿಡಿಯೋ ಮಾಡಲಾಗಿದೆ. ಆರೋಪಿಗಳ ಪೈಕಿ ಸಾಕಷ್ಟು ಜನ ಕೈ ಶಾಸಕ ರಾಘವೇಂದ್ರ ಹಿಟ್ನಾಳ್ ಅವರ ಆಪ್ತರಾಗಿದ್ದಾರೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಬಗಾಡೆ ಕುಟುಂಬಸ್ಥರು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಪ್ರಿಯಕರನಿಂದ ವಂಚನೆ, ಕೊಲೆ ಬೆದರಿಕೆ ಆರೋಪ- ವಿಷ ಸೇವಿಸಿ ವಿದ್ಯಾರ್ಥಿನಿ ಆತ್ಮಹತ್ಯೆ
Web Stories