ಮಂಡ್ಯ: ಸಾವರ್ಕರ್ ಸ್ವಾತಂತ್ರ‍್ಯ ಹೋರಾಟಗಾರ ಅಲ್ಲ, ಆತ ಬ್ರಿಟಿಷರ (British) ಬಳಿ ಪಿಂಚಣಿ ತೆಗೆದುಕೊಳ್ಳುತ್ತಿದ್ದ ಎಂದು ಹೇಳುತ್ತಿದ್ದ ಕಾಂಗ್ರೆಸ್ (Congress) ನಾಯಕರಿಗೆ ಬಿಜೆಪಿಯು ಟಿಪ್ಪು (Tipu Sultan) ಮಕ್ಕಳ ಪಿಂಚಣಿ ಅಸ್ತ್ರ ಹೂಡಿದೆ.
ಇಷ್ಟು ದಿನಗಳ ಕಾಲ ಟಿಪ್ಪು ವಿರೋಧಿಸುವ ಮೂಲಕ ಬಿಜೆಪಿ (BJP) ಹಿಂದೂಗಳ ಮತಗಳನ್ನು ಉರಿಗೌಡ, ನಂಜೇಗೌಡರ ಟ್ಯಾಕಲ್ ಮಾಡಲು ಮುಂದಾಗಿತ್ತು. ಟಿಪ್ಪು ಒಬ್ಬ ದೇಶ ಪ್ರೇಮಿ ಎಂದು ಹೊಗಳುತ್ತಿದ್ದ ಕಾಂಗ್ರೆಸ್‌ಗೆ ಟಿಪ್ಪು ಹಾಗೂ ಆತನ ಮಕ್ಕಳು ದೇಶ ಪ್ರೇಮಿ ಅಲ್ಲ ಎಂದು ನಿರೂಪಿಸಲು ಬಿಜೆಪಿ ಮುಂದಾಗಿದೆ. ಇದನ್ನೂ ಓದಿ: ಲಕ್ಷ್ಮಿ ಹೆಬ್ಬಾಳ್ಕರ್ ಹೆಣ್ಣಿನ ರೂಪವಷ್ಟೇ, ಅವರ ಗುಣಗಳೇ ಬೇರೆ: ರಮೇಶ್ ಜಾರಕಿಹೊಳಿ
ಟಿಪ್ಪು ಮರಣದ ನಂತರ ಆತನ ಕುಟುಂಬಸ್ಥರನ್ನು ಗಡಿಪಾರು ಮಾಡಲಾಗುತ್ತದೆ. ಬಳಿಕ ಅವರು ಕೋಲ್ಕತ್ತಾಗೆ (Culcutta) ಹೋಗುತ್ತಾರೆ. ಈ ವೇಳೆ ಟಿಪ್ಪುವಿನ 12 ಮಕ್ಕಳ ಪೈಕಿ ಗುಲಾಮ್ ಮಹಮದ್ ಬ್ರಿಟನ್ನಿನ ರಾಜವಂಶಸ್ಥರ ಬಳಿ ಹೋಗುತ್ತಾನೆ. 6 ತಿಂಗಳ ಕಾಲ ಅಲ್ಲಿಯೇ ಇದ್ದು, ಕುಟುಂಬ ನಿರ್ವಹಣೆಗೆ ವಾರ್ಷಿಕ ಪಿಂಚಣಿಯನ್ನು (Annual Pension) ಪಡೆದಿದ್ದಾನೆ. ಇದನ್ನೂ ಓದಿ: ಭಾರತೀಯ ಸೇನೆಯ ಚೀತಾ ಹೆಲಿಕಾಪ್ಟರ್ ಪತನ
ಈ ಬಗ್ಗೆ ವಿಕ್ಟೋರಿಯಾ ಅಂಡ್ ಆಲ್ಬರ್ಟ್ ಮ್ಯೂಸಿಯಂನಲ್ಲಿರುವ ಈಸ್ಟ್ ಇಂಡಿಯಾ ಲೆಡ್ಜರ್‌ನಲ್ಲಿ ದಾಖಲೆ ಸಹಿತ ಉಲ್ಲೇಖವಾಗಿದೆ ಎನ್ನಲಾಗಿದೆ. ಈ ಉಲ್ಲೇಖವನ್ನು ಆಧಾರವಾಗಿ ಇಟ್ಟುಕೊಂಡು ಅಂತರಾಷ್ಟ್ರೀಯ ಇತಿಹಾಸ ಸಂಶೋಧಕ 2019ರಲ್ಲಿ ವಿಲಿಯಂ ಓವೆನ್ ( William Owen) ಲೇಖನ ಬರೆದಿದ್ದಾರೆ. ಬಿಜೆಪಿ ಪಕ್ಷವು ಈ ಲೇಖನವನ್ನು ಇಟ್ಟುಕೊಂಡು ಟಿಪ್ಪುವಿನ ಮಕ್ಕಳು ಪಿಂಚಣಿ ಪಡೆಯುತ್ತಿದ್ದರು ಎಂದು ಬಿಜೆಪಿ ಹೇಳುತ್ತಿದೆ. ಇದನ್ನೂ ಓದಿ: ಮಂಡ್ಯದಲ್ಲಿ ಡಿ.ಕೆ ಶಿವಕುಮಾರ್ ಸ್ಪರ್ಧಿಸಲಿ – ಸ್ಥಳೀಯ ಕಾಂಗ್ರೆಸ್ ನಾಯಕರ ಮನವಿ