ಚಿಕ್ಕಮಗಳೂರು: ನಾನು ಸಿದ್ದರಾಮಯ್ಯನವರಿಗೆ (Siddaramaiah) ಖುಷಿಯಾಗುವ ಸಂಗತಿಯನ್ನೇ ಹೇಳಿದ್ದೇನೆ. ಅವರಿಗೆ ಸಿದ್ರಾಮುಲ್ಲಾಖಾನ್ ಎಂದು ಹೆಸರಿಟ್ಟವರು ಮಡಿಕೇರಿ-ಮೈಸೂರಿನ ಜನ. ಅವರಿಗೆ ಪ್ರಿಯವಾಗಿರೋದು ಟಿಪ್ಪು ಟೋಪಿ. ಅದನ್ನೇ ಹೇಳಿದ್ದೇನೆ. ಟೋಪಿ ಅವರಿಗೆ ಆನಂದ ಕೊಡುವ ಸಂಗತಿ. ಅದನ್ನೇ ಹೇಳಿದ್ದೇನೆ ಎಂದು ತಮ್ಮ ಹೇಳಿಕೆ ಕುರಿತಾಗಿ ಶಾಸಕ ಸಿ.ಟಿ (C.T Ravi) ಸ್ಪಷ್ಟನೆ ನೀಡಿದ್ದಾರೆ.
ಸಿದ್ರಾಮುಲ್ಲಾಖಾನ್ ಹೇಳಿಕೆಯನ್ನು ಖಂಡಿಸಿ ಕಾಂಗ್ರೆಸ್ (Congress) ಕಾರ್ಯಕರ್ತರು ಸಿ.ಟಿ. ರವಿ ಮನೆಗೆ ಮುತ್ತಿಗೆ ಹಾಕುವ ಎಚ್ಚರಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಅವರಿಗೆ ಖುಷಿ ಆಗದಿರುವುದು ಯಾವುದು? ಕೇಸರಿ ಪೇಟ-ಕುಂಕುಮ ಅದರ ಬಗ್ಗೆ ಹೇಳಿದ್ರೆ ಬೇಜಾರು ಆಗ್ತಿತ್ತೋ ಏನೋ. ಆದ್ರೆ, ಅವರಿಗೆ ಟೋಪಿ ಇಷ್ಟ. ನಾನು ಅದನ್ನೇ ಹೇಳಿದ್ದೇನೆ. ನಾನು ಹೇಗಿದ್ದೀನಿ ಹಾಗೇ ಹೇಳಿದ್ದಾರೆ ಅಂತ ಅವರು ಖುಷಿ ಪಡುತ್ತಾರೆ. ಸಾಮಾಜಿಕ ಜಾಲತಾಣದಲ್ಲಿ ಅವರಿಗೆ ಕೊಟ್ಟಿರುವ ಬಿರುದುಗಳನ್ನು ಒಮ್ಮೆ ನೋಡಬೇಕು ಎಂದು ಅಭಿಪ್ರಾಯ ತಿಳಿಸಿದ್ದಾರೆ. ಇದನ್ನೂ ಓದಿ: ಹಳೆ ಮೈಸೂರು ಭಾಗದಲ್ಲಿ ಆಪರೇಷನ್ ಕಮಲ- ಬಿಜೆಪಿಗೆ ಸುಮಲತಾ ಆಪ್ತ ಸಚ್ಚಿದಾನಂದ ಸೇರ್ಪಡೆ
ನಾನು ಸಿದ್ದರಾಮಯ್ಯರಿಗೆ ಹೇಳಿದ್ದು, ಅಸಂಸದೀಯ ಪದವೂ ಅಲ್ಲ. ಬೈಗುಳವೂ ಅಲ್ಲ. ಕಾಂಗ್ರೆಸ್ ಕಾರ್ಯಕರ್ತರು ಸದ್ಭಾವನೆಯಿಂದ ಬಂದರೆ ಅತಿಥಿಗಳೆಂದು ಸತ್ಕಾರ. ದುರ್ಭಾವನೆಯಿಂದ ಬಂದರೆ ಅದೇ ರೀತಿ ಪ್ರತಿಕ್ರಿಯೆ ಇರುತ್ತೆ ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ರಾಜಕಾರಣಿಗಳ ಮಧ್ಯೆ ರೌಡಿಶೀಟರ್ ಸೈಲೆಂಟ್ ಸುನೀಲನ ದರ್ಬಾರ್ – ಪೊಲೀಸರು ಗಪ್‍ಚುಪ್