ಮಂಗಳೂರು: ಬಿಜೆಪಿ (BJP) ಸರ್ಕಾರ ಕೊನೆಯುಸಿರೆಳೆಯುತ್ತಿದೆ. ಆಕ್ಸಿಜನ್ ಆಗಿ ಟಿಪ್ಪು (Tippu), ಭಯೋತ್ಪಾದನೆ ಮತ್ತು ಎಸ್‍ಡಿಪಿಐ (SDPI) ವಿಚಾರಗಳನ್ನು ಬಳಕೆ ಮಾಡುತ್ತಿದೆ ಎಂದು ಮಂಗಳೂರಿನಲ್ಲಿ ಶಾಸಕ ಯುಟಿ ಖಾದರ್ ವಾಗ್ದಾಳಿ ನಡೆಸಿದ್ದಾರೆ.
Advertisement
ನಮ್ಮ ತೆರಿಗೆ ಹಣದಲ್ಲಿ ತಾಲಿಬಾನಿಗೆ ಸಾವಿರಾರು ಕೋಟಿ ರೂ.ಗಳನ್ನು ನೀಡಿದೆ. ಕಾಂಗ್ರೆಸ್ (Congress) ಆಡಳಿತದಲ್ಲಿ ಭಾರತ ಪಾಕಿಸ್ತಾನದ ಕ್ರಿಕೆಟ್ (Cricket) ಬೇಡ ಎಂದಿದ್ದೆವು. ಈಗಿನ ಸರ್ಕಾರ ಎರಡು ತಂಡಗಳನ್ನು ದುಬೈಗೆ ಕರೆದೊಯ್ದು ಪಂದ್ಯಗಳನ್ನಾಡಿಸುತ್ತಿದ್ದಾರೆ ಎಂದರು. ಇದನ್ನೂ ಓದಿ: ಬುದ್ಧ, ಅಂಬೇಡ್ಕರ್, ಸ್ವಾಮಿ ವಿವೇಕಾನಂದರ ಭಾವಚಿತ್ರದೊಂದಿಗೆ ಸೈಲೆಂಟ್ ಸುನಿ – ರಾರಾಜಿಸುತ್ತಿವೆ ಕಟೌಟ್
Advertisement
ಸಂಸದರ ಮೌನ, ರಾಜ್ಯ ಸರ್ಕಾರದ ಅಸಹಾಯಕತೆಯಿಂದ ಕೇಂದ್ರದ ಬಜೆಟ್‍ನಲ್ಲಿ ಮಲತಾಯಿ ಧೋರಣೆ ನಡೆದಿದೆ. ಇದರಿಂದ ರಾಜ್ಯ ಸಾಲದಿಂದ ಮುಳುಗಿದೆ ಎಂದಿದ್ದಾರೆ.
Advertisement
ರಾಜ್ಯ ಬಜೆಟ್ ಜನರನ್ನು ಸುಲಿಗೆ ಮಾಡುವ ಸಾಲದ ಬಜೆಟ್ ಆಗಿದೆ. ಕೊನೆಯುಸಿರೆಳೆಯುವ ಸರ್ಕಾರ ಯಾವುದೇ ಮಹತ್ವ ಇಲ್ಲದ ಬಜೆಟ್ ಮಂಡನೆ ಮಾಡಿದೆ ಎಂದು ವ್ಯಂಗ್ಯ ಮಾಡಿದ್ದಾರೆ.
Advertisement
1947 ರಿಂದ 2018ರ ತನಕ ರಾಜ್ಯದ ಸಾಲ 2,42,000 ಕೋಟಿ ರೂ.ಗಳಾಗಿತ್ತು. ಆದರೆ 2018-2023ರ ಅವಧಿಯಲ್ಲಿ 5,64,814 ಕೋಟಿ ರೂ. ಆಗಿದೆ. ಇದರಿಂದ ಜನ ಸಾಲದ ಭಾರವನ್ನು ಹೋರುವಂತಾಗಿದೆ. ಬಿಜೆಪಿ ನಾಲ್ಕು ವರ್ಷದಲ್ಲಿ 2,80,000 ಕೋಟಿ ರೂ.ಗಳನ್ನು ಸಾಲ ಪಡೆದುಕೊಂಡಿದೆ. ಮತ್ತು 78,000 ಕೋಟಿ ಸಾಲ ಮಾಡುವುದಾಗಿ ಹೇಳಿಕೊಂಡಿದೆ ಎಂದಿದ್ದಾರೆ.
3 ಲಕ್ಷ ಸಾವಿರ ಕೋಟಿಯ ಬಜೆಟ್‍ನಲ್ಲಿ ರಾಜ್ಯದ ಅಭಿವೃದ್ಧಿಗೆ ಪೂರಕ ಅಂಶಗಳು ಇಲ್ಲ. ಪ್ರತಿ ತಿಂಗಳು 14 ಸಾವಿರ ಕೋಟಿ ಅಸಲು ಮತ್ತು 34 ಸಾವಿರ ಕೋಟಿ ಬಡ್ಡಿಯನ್ನು ರಾಜ್ಯ ಕಟ್ಟ ಬೇಕಿದೆ. ಜಾತ್ರೆಯಲ್ಲಿ ಬ್ಯಾಂಡ್ ಬಾರಿಸುವಂತೆ ಸರ್ಕಾರ ಬಜೆಟ್ ಮಂಡನೆ ಮಾಡಿದೆ ಎಂದಿದ್ದಾರೆ.
ಮೀನುಗಾರರಿಗೆ ಈ ಹಿಂದಿನ ಬಜೆಟ್‍ನಲ್ಲಿ ಘೋಷಿಸಿದ ಯೋಜನೆಗಳನ್ನೇ ಜಾರಿಗೆ ತಂದಿಲ್ಲ. ಕಳೆದ ವರ್ಷ ಘೋಷಿಸಿದ್ದ ಮನೆಗಳು ಇನ್ನೂ ನಿರ್ಮಾಣ ಆಗಿಲ್ಲ. ಸಮುದ್ರ ತೀರದ ಕೊಂಡಿ ರಸ್ತೆ ಮತ್ತು ಕಡಲ್ಕೊರೆತಕ್ಕೆ ಇನ್ನೂ ಶಾಶ್ವತ ಪರಿಹಾರ ಕೊಟ್ಟಿಲ್ಲ. ಕರಾವಳಿ ಪ್ರದೇಶದ ಜನರಿಗೆ ಮೋಸ ಮಾಡಿದ್ದಾರೆ ಎಂದು ಅವರು ದೂರಿದ್ದಾರೆ.
ಸಬ್ಸಿಡಿ ಸೀಮೆಎಣ್ಣೆಯನ್ನೇ ಕೊಟ್ಟಿಲ್ಲ ಈಗ ಡೀಸೆಲ್ ಬಗ್ಗೆ ಹೇಳುತ್ತಿದ್ದಾರೆ ಎಂದು ಅವರು ಸರ್ಕಾರದ ವಿರುದ್ಧ ಚಾಟಿ ಬೀಸಿದ್ದಾರೆ. ಇದನ್ನೂ ಓದಿ: ಕಾಂಬೋಡಿಯಾದಲ್ಲಿ ಅಕ್ರಮ ವಶದಲ್ಲಿರುವ ತೀರ್ಥಹಳ್ಳಿಯ ಸಾಫ್ಟ್‌ವೇರ್ ಇಂಜಿನಿಯರ್; ಬಿಡುಗಡೆಗೆ ಗೃಹ ಸಚಿವ ಶತಪ್ರಯತ್ನLIVE TV
LIVE TV
[brid partner=56869869 player=32851 video=960834 autoplay=true]
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k