ಮಡಿಕೇರಿ: ಮೈಸೂರು, ಕೊಡಗು, ಮಲಬಾರ್ ಪ್ರದೇಶದಲ್ಲಿ ಟಿಪ್ಪು ಸುಲ್ತಾನ್ (Tipu Sultan) ಆಳ್ವಿಕೆಯ ‘ಪ್ರತಿಕೂಲ’ ಪರಿಣಾಮಗಳ ಹಿನ್ನೆಲೆ ಹೊಂದಿರುವ ʻಟಿಪ್ಪು ಸುಲ್ತಾನ್ ದಿ ಸಾಗಾ ಆಫ್ ಮೈಸೂರು ಇಂಟರ್ರೆಗ್ನಮ್ʼ ಪುಸ್ತಕವನ್ನು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ (Yaduveer Wadiyarr) ಅವರು ಬಿಡುಗಡೆಗೊಳಿಸಿದರು.
Advertisement
ಕೊಡಗಿನ ಪೋನ್ನಂಪೇಟೆ ತಾಲ್ಲೂಕಿನ ಗೋಣಿಕೋಪ್ಪದ ಖಾಸಗಿ ಹೋಟೆಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪುಸ್ತಕ ಬಿಡುಗಡೆ ಮಾಡಿದರು. ಬಳಿಕ ಮಾತಾನಾಡಿದ ಅವರು, ಇತಿಹಾಸಕಾರ ವಿಕ್ರಮ್ ಸಂಪತ್ ಅವರು ಬರೆದ ಈ ಪುಸ್ತಕ ದೇಶ-ವಿದೇಶಗಳಲ್ಲಿ ಈಗಾಗಲೇ ಬಿಡುಗಡೆಯಾಗಿದೆ. ಮೈಸೂರು, ಬೆಂಗಳೂರು, ಮಂಗಳೂರಿನಲ್ಲೂ ಬಿಡುಗಡೆಯಾಗಿದೆ. ಆದ್ರೆ ಕೊಡಗಿನಲ್ಲಿ ಈ ಬುಕ್ ಬಿಡುಗಡೆಯಾಗಿರಲ್ಲಿಲ್ಲ. ಲೇಖಕರು ಪುಸ್ತಕ ರಚನೆ ಮಾಡುವ ಸಂದರ್ಭದಲ್ಲಿ ದಾಖಲೆಗಳ ಸಮೇತ ಬರೆದಿದ್ದಾರೆ. ಕೊಡಗಿನಲ್ಲಿ ಟಿಪ್ಪುವಿನಿಂದ ಎಷ್ಟು ದೌರ್ಜನ್ಯಗಳು ನಡೆದಿದೆ. ಆ ಸಂದರ್ಭದಲ್ಲಿ ಟಿಪ್ಪು ವಿರುದ್ಧ ಕೊಡಗಿನ ಜನರು ಯಾವ ರೀತಿಯಲ್ಲಿ ವಿರೋಧ ವ್ಯಕ್ತ ಪಡಿಸಿದ್ರು ಎಲ್ಲವನ್ನೂ ಪುಸ್ತಕದಲ್ಲಿ ಚಿತ್ರಿಸಿದ್ದಾರೆ.
Advertisement
Advertisement
ಟಿಪ್ಪು ದೌರ್ಜನ್ಯದ ಸಂದರ್ಭದಲ್ಲಿ ಕೊಡಗಿನ ಸಂಸ್ಕೃತಿ, ಪರಂಪರೆಯನ್ನು ಕೊಡವರು ಹೇಗೆ ರಕ್ಷಣೆ ಮಾಡಿದರು. ಇಷ್ಟು ಇತಿಹಾಸ ಹೊಂದಿರುವ ಕೊಡುಗಿನಲ್ಲಿ ಪುಸ್ತಕ ಬಿಡುಗಡೆ ಮಾಡಿರುವುದು ಸಂತೋಷದ ವಿಚಾರ. ನಾವು ಕಳೆದು ಹೋದ ಘಟನೆಯನ್ನು ಎಂದಿಗೂ ಮರೆಯಬಾರದು ಅಂತ ಸಲಹೆ ನೀಡಿದರು. ಇದನ್ನೂ ಓದಿ: ರಸ್ತೆಯಲ್ಲಿ ಸಂಚರಿಸೋದಕ್ಕೂ ಸುಂಕ ಕಟ್ಟಬೇಕೆ? – ಟ್ರಾಫಿಕ್ ನಿಯಂತ್ರಣಕ್ಕೆ ಹೊಸ ಸೂತ್ರ – ಏನಿದು ದೆಹಲಿ ಸರ್ಕಾರದ ಪ್ಲ್ಯಾನ್?
Advertisement
ಇನ್ನೂ ಇದೇ ಸಂದರ್ಭದಲ್ಲಿ ಮಾತಾನಾಡಿದ ಇತಿಹಾಸಕಾರ ವಿಕ್ರಮ್ ಸಂಪತ್, ಕೊಡಗು ಜಿಲ್ಲೆಯಲ್ಲಿನ ಜನ ಹೈದರಾಲಿ ಮತ್ತು ಟಿಪ್ಪು ಸುಲ್ತಾನ್ ದೌರ್ಜನ್ಯ ಸಾಕಷ್ಟು ನೋವು ಕಂಡಿದ್ದಾರೆ. ದೇವಟಿ ಪರಂಬುನಲ್ಲಿ ಕೊಡವರ ಹತ್ಯೆ ಘಟನೆ ಹೇಗಾಯ್ತು? ಇನ್ನೂ ಮುಂತಾದ ಪ್ರಕರಣವನ್ನು ಈ ಪುಸ್ತಕದಲ್ಲಿ ಉಲ್ಲೇಖ ಮಾಡಿದ್ದೇನೆ. ಯಾವುದೇ ಒಂದು ರಾಜಕೀಯ ಇಲ್ಲದೇ ಸತ್ಯಾಂಶ ಅನಾವರಣಗೋಳಿಸುವ ಪ್ರಯತ್ನ ಇದಾಗಿದೆ ಎಂದು ನುಡಿದರು. ಇದನ್ನೂ ಓದಿ: ಮಂಡ್ಯದಲ್ಲಿ ಮಹಿಳೆಗೆ 33 ಲಕ್ಷ ಪಂಗನಾಮ – ಐಶ್ವರ್ಯಗೌಡ ವಿರುದ್ಧ ಮತ್ತೊಂದು ಎಫ್‌ಐಆರ್