ಬೆಂಗಳೂರು: ಟಿಪ್ಪು ಜಯಂತಿ ಆಚರಣೆಯನ್ನು ಜಾರಿಗೆ ತಂದಿದ್ದ ಸಿದ್ದರಾಮಯ್ಯನವರನ್ನು ಬಿಜೆಪಿ ನಾಯಕ ಈಶ್ವರಪ್ಪ ಕಾಲೆಳೆದಿದ್ದಾರೆ.
ಸಿದ್ದರಾಮಯ್ಯನವರೇ, ನಿಮಗೆ ಟಿಪ್ಪುನು ಸಹ ಒಂದು ಎಲೆಕ್ಷನ್ ವಿಷಯ ಅಷ್ಟೇ. ಒಂದು ಇಡೀ ದಿನ ಕಾದು ನೋಡಿದೆ ಏನಾದರೂ ಶ್ರದ್ಧಾಂಜಲಿ ಟ್ವೀಟ್ ಮಾಡ್ತೀರೇನೋ ಅಂತ. ಯಥಾ ಪ್ರಕಾರ ಎಲೆಕ್ಷನ್ ಆದ ಮೇಲೆ ಡೋಂಟ್ ಕೇರ್. ಆದರೆ ಕಾಂಗ್ರೆಸ್ ನ ಮನಸ್ಥಿತಿ/ಸಿದ್ಧಾಂತ ಇರುವ ಇಮ್ರಾನ್ ಖಾನ್ ಟ್ವೀಟ್ ನೋಡಿ ಆಶ್ಚರ್ಯ ಆಯ್ತು ಎಂದು ಈಶ್ವರಪ್ಪ ಟ್ವೀಟ್ ಮಾಡಿ ಮಾಜಿ ಸಿಎಂಗೆ ಟಾಂಗ್ ಕೊಟ್ಟಿದ್ದಾರೆ.
Advertisement
ಶನಿವಾರ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಟಿಪ್ಪುವಿಗೆ ಶ್ರದ್ಧಾಂಜಲಿ ಸಲ್ಲಿಸಿ ಟ್ವೀಟ್ ಮಾಡಿದ್ದರು. ಈ ಟ್ವೀಟ್ ಅನ್ನು ರೀ ಟ್ವೀಟ್ ಮಾಡಿ ಸಿದ್ದರಾಮಯ್ಯನವರನ್ನು ಈಶ್ವರಪ್ಪ ಕಾಲೆಳೆದಿದ್ದಾರೆ.
Advertisement
Advertisement
ಕಳೆದ ವಿಧಾನಸಭಾ ಚುನಾವಣೆಯ ಪ್ರಚಾರ ಭಾಷಣದಲ್ಲಿ, ಸಿದ್ದರಾಮಯ್ಯ ಒಬ್ಬ ಅಯೋಗ್ಯ ಮುಖ್ಯಮಂತ್ರಿ. ಸಿಎಂ ನಡವಳಿಕೆಯೇ ಸರಿಯಿಲ್ಲ. ಸಿದ್ದರಾಮಯ್ಯ ಮೈಮೇಲೆ ಟಿಪ್ಪು ರಕ್ತ ಹರಿಯುತ್ತಿದೆ. ಇದೇ ಕಾರಣಕ್ಕೆ ಟಿಪ್ಪು ಜಯಂತಿ ಆಚರಣೆ ಮಾಡಿದ್ರು ಅಂತ ಕಿಡಿಕಾರಿದ್ದರು.
Advertisement
ಟಿಪ್ಪು ಜಯಂತಿಯನ್ನು ಸರ್ಕಾರ ಏಕೆ ಇಷ್ಟು ತೀವ್ರ ವಿರೋಧದ ನಡುವೆ ಏಕೆ ಪ್ರತಿಷ್ಠೆಯಾಗಿ ತೆಗೆದುಕೊಂಡಿದೆಯೋ ಗೊತ್ತಿಲ್ಲ. ಹಾಗೆಯೇ ಟಿಪ್ಪುಗೂ ಸಿದ್ದರಾಮಯ್ಯಗೂ ಅದೇನು ಸಂಬಂಧವೋ ಭಗವಂತನಿಗೆ ಗೊತ್ತು. ಟಿಪ್ಪು ಹಿಡಿದುಕೊಂಡ ಸಿದ್ದರಾಮಯ್ಯ, ಮಲ್ಯ ಹಾಳಾದ್ರು, ಈಗ ಕುಮಾರಸ್ವಾಮಿಯೂ ಹಾಳಾಗುತ್ತಾರೆ ಎಂದು ಕೆಎಸ್ ಈಶ್ವರಪ್ಪ ಈ ಹಿಂದೆ ಹೇಳಿದ್ದರು.
@INCKarnataka @siddaramaiah ನವರೇ, ನಿಮಗೆ ಟಿಪ್ಪುನು ಸಹ ಒಂದು ಎಲೆಕ್ಷನ್ ವಿಷಯ ಅಷ್ಟೇ. ಒಂದು ಇಡೀ ದಿನ ಕಾದು ನೋಡಿದೆ ಏನಾರ ಶ್ರದ್ದಾಂಜಲಿ ಟ್ವೀಟ್ ಮಾಡ್ತೀರೇನೋ ಅಂತ. ಯಥಾ ಪ್ರಕಾರ ಎಲೆಕ್ಷನ್ ಆದ ಮೇಲೆ ಡೋಂಟ್ ಕೇರ್. ಆದರೆ ಕಾಂಗ್ರೆಸ್ ನ ಮನಸ್ಥಿತಿ/ಸಿದ್ಧಾಂತ ಇರುವ ಇಮ್ರಾನ್ ಖಾನ್ ಟ್ವೀಟ್ ನೋಡಿ ಆಶ್ಚರ್ಯ ಆಯ್ತು. @BJP4Karnataka https://t.co/r5PQxzgQbs
— K S Eshwarappa (@ikseshwarappa) May 5, 2019