– ತೆರವು ವೇಳೆ 2 ಕೋಮು ವಾಗ್ವಾದ
ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಹಳಿಯಾಳದಲ್ಲಿ ಟಿಪ್ಪು ಸುಲ್ತಾನ್ ಬ್ಯಾನರ್ ಕಟ್ಟುವ ಸಂಬಂಧ ಎರಡು ಕೋಮಿನ ನಡುವೆ ಮಾತಿನ ಚಕಮಕಿ ನಡೆದು ಉದ್ರಿಕ್ತ ವಾತಾವರಣ ಸೃಷ್ಟಿಯಾದ ಘಟನೆ ನಡೆದಿದೆ.
ಹಳಿಯಾಳ ಪಟ್ಟಣದ ಮೇದಾರಗಲ್ಲಿ ಮತ್ತು ಕುಂಬಾರಗಲ್ಲಿಯ ತಾಲೀಮ್ ಕೂಟ್‌ನಲ್ಲಿ ಅನುಮತಿ ಪಡೆಯದೇ ಟಿಪ್ಪು ಸುಲ್ತಾನ್ ‘ದಿ ಕಿಂಗ್ ಆಫ್ ಟೈಗರ್’ ಎಂದು ಬರೆದ ಬ್ಯಾನರ್ ಅಳವಡಿಸಲಾಗಿತ್ತು. ಇದನ್ನು ಆಕ್ಷೇಪಿಸಿದ ಹಿಂದೂಪರ ಕಾರ್ಯಕರ್ತರು ಪುರಸಭೆ ಅಧಿಕಾರಿಗಳಿಗೆ ಮೌಕಿಕ ದೂರು ನೀಡಿದ್ದರು.
ಸ್ಥಳಕ್ಕೆ ಆಗಮಿಸಿದ ಅಧಿಕಾರಿಗಳು ಬ್ಯಾನರ್ ತೆರವುಗೊಳಿಸಿದರು. ಆದರೆ, ಯುವಕರ ಗುಂಪೊಂದು ಈ ಬ್ಯಾನರ್‌ನನ್ನು ತಮ್ಮ ಕೋಮಿನ ಮನೆಯ ಮುಂದೆ ಹಾಕಿದ್ದು ಎಂದು ಘೋಷಣೆ ಕೂಗಲು ಪ್ರಾರಂಭಿಸಿದರು. ಅನುಮತಿ ಇಲ್ಲದೇ ಹಾಕಿದ್ದಕ್ಕೆ ಮತ್ತೆ ಹಿಂದೂಪರ ಕಾರ್ಯಕರ್ತರು ತಕರಾರು ತೆಗೆದು ಹಿಂದೂಪರ ಘೋಷಣೆ ಕೂಗಿದ್ದಾರೆ.
ಈ ವೇಳೆ ಎರಡು ಗುಂಪುಗಳ ನಡುವೆ ಮಾತಿನ ಚಕಮಕಿ ನಡೆದು ಕೈ ಮಿಲಾಯಿಸುವ ಹಂತ ತಲುಪಿತು. ತಕ್ಷಣ ಹಳಿಯಾಳ ಪೊಲೀಸರು ಎರಡು ಗುಂಪುಗಳನ್ನು ಚದುರಿಸಿದರು.
