ಮಂಗಳೂರು: ಬಿಜೆಪಿಯವರು ರಾಜಕಾರಣ ಮಾಡುತ್ತಿದ್ದು, ಟಿಪ್ಪು ಜಯಂತಿಯನ್ನು ಆಚರಿಸುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದಲ್ಲಿ ಇಂದು ಸಿಎಂ ವಿವಿಧ ಅಭಿವೃದ್ಧಿ ಯೋಜನೆಗಳ ಉದ್ಘಾಟಿಸಿ ಒಟ್ಟು 252.50 ಕೋಟಿ ಮೊತ್ತದ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿದರು. ಈ ಯೋಜನೆಯಲ್ಲಿ ಮಿನಿ ವಿಧಾನಸೌಧ, ಬಹುಗ್ರಾಮ ಕುಡಿಯುವ ನೀರಿನ ಯೋಜನೆ, 100 ಹಾಸಿಗೆಗಳ ಹೊಸ ಆಸ್ಪತ್ರೆ, ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣ ನಿರ್ಮಾಣಕ್ಕೆ ಚಾಲನೆ ನೀಡಿದರು.
Advertisement
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಸಿದ್ದರಾಮಯ್ಯ ಅವರು, ಟಿಪ್ಪು ಜಯಂತಿಯು ರಾಜ್ಯ ಸರ್ಕಾರದ ಕಾರ್ಯಕ್ರಮ. ಟಿಪ್ಪು ಜಯಂತಿಯನ್ನು ಮಾಡಿಯೇ ಮಾಡ್ತೀವಿ. ಇದರಲ್ಲಿಯೂ ಬಿಜೆಪಿಯವರು ರಾಜಕಾರಣ ಮಾಡುತ್ತಿದ್ದಾರೆ. ಶಿಷ್ಟಾಚಾರದ ಪ್ರಕಾರ ಹೆಸರು ಹಾಕ್ತೇವೆ. ಬರುವುದು, ಬಿಡುವುದು ಅವರಿಗೆ ಬಿಟ್ಟಿದ್ದು ಎಂದರು.
Advertisement
ಇದನ್ನೂ ಓದಿ: ಟಿಪ್ಪು ಜಯಂತಿಯನ್ನು ಆಚರಿಸುತ್ತಿರುವುದು ಮುಸ್ಲಿಂ ಮತ ಬ್ಯಾಂಕ್ ಭದ್ರಪಡಿಸಲು: ಪ್ರಮೋದ್ ಮುತಾಲಿಕ್
Advertisement
ಯಡಿಯೂರಪ್ಪ ಕೆಜೆಪಿ ಪಕ್ಷಕಟ್ಟಿದ್ದಾಗ ಟಿಪ್ಪು ಜಯಂತಿ ಮಾಡಿಲ್ವೇ? ಟಿಪ್ಪು ಖಡ್ಗ ಕಿರೀಟ ಕೂಡ ಹಾಕ್ಕೊಂಡಿದ್ದರು. ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆಗೆ ಟಿಪ್ಪು ಇತಿಹಾಸ ಏನು ಗೊತ್ತಿದೆ. ಮೈಸೂರಿನಲ್ಲಿ ಟಿಪ್ಪು ನಡೆಸಿದ ನಾಲ್ಕು ಯುದ್ಧಗಳು ಗೊತ್ತಿದ್ಯಾ? ಟಿಪ್ಪು ಹೇಗೆ ಸತ್ತಾ ಗೊತ್ತಾ ಇವರಿಗೆ. ಟಿಪ್ಪು ಮಕ್ಕಳನ್ನು ಅಡ ಇಟ್ಟಿದ್ದು ಯಾಕೆ ಗೊತ್ತಿದ್ಯಾ ಎಂದು ಸಿದ್ದರಾಮಯ್ಯನವರು ಪ್ರಶ್ನೆಹಾಕಿದರು.
Advertisement
ಇದನ್ನೂ ಓದಿ: ಬಿಎಸ್‍ವೈ ಜೊತೆ ಕೆಜೆಪಿ ಪಕ್ಷ ಸೇರ್ಕೊಂಡು ಶೋಭಾ ಕರಂದ್ಲಾಜೆ ಟಿಪ್ಪು ಜಯಂತಿ ಆಚರಿಸಿದ್ದರು- ರಾಮಲಿಂಗಾರೆಡ್ಡಿ
ಸಚಿವ ಡಿಕೆ ಶಿವಕುಮಾರ್ ವಿರುದ್ಧ ಕಲ್ಲಿದ್ದಲು ಹಗರಣ ಆರೋಪ ದುರುದ್ದೇಶ ಪೂರಕವಾಗಿದೆ. ಬಿಎಸ್‍ವೈ ಆಧಾರ ರಹಿತ ಆರೋಪ ಮಾಡಿದ್ದಾರೆ. ಡಿಕೆಶಿ ಈಗಾಗಲೇ ಸ್ಪಷ್ಟನೆ ಕೊಟ್ಟಿದ್ದಾರೆ. ಬಿಎಸ್‍ವೈ ಚುನಾವಣೆ ದೃಷ್ಟಿಯಿಂದ ಆರೋಪ ಮಾಡಿದ್ದಾರೆ ಎಂದು ಹೇಳಿದರು.
ಇದನ್ನೂ ಓದಿ: ಟಿಪ್ಪು ಜಯಂತಿ ಆಮಂತ್ರಣದಲ್ಲಿ ನನ್ನ ಹೆಸರು ಹಾಕ್ಬೇಡಿ: ಕೇಂದ್ರ ಸಚಿವ ಅನಂತ ಕುಮಾರ್ ಹೆಗಡೆ ಪತ್ರ
ಇದನ್ನೂ ಓದಿ: ಟಿಪ್ಪು ಜಯಂತಿ ವಿರೋಧಿಸಿ ಹೋರಾಟಕ್ಕೆ ಬಿಜೆಪಿ ಪ್ಲಾನ್