ನೆನಪಿನ ಶಕ್ತಿ ಮತ್ತು ಯೋಚನಾ ಸಾಮರ್ಥ್ಯವನ್ನು ಕುಂದಿಸುವ ಕಾಯಿಲೆಯನ್ನೇ ʼಆಲ್‌ಝೈಮರ್ʼ (Alzheimer) ಅಥವಾ ಮರೆಗುಳಿ ಎನ್ನುತ್ತಾರೆ. ಸಾಮಾನ್ಯವಾಗಿ ಈ ರೋಗ ವೃದ್ಧರಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಆಲ್‌ಝೈಮರ್ಸ್ ಕಾಯಿಲೆಯು ಮೆದುಳಿನ ಕೋಶಗಳಲ್ಲಿ ಮತ್ತು ಸುತ್ತಮುತ್ತಲಿನ ಪ್ರೊಟೀನ್‌ಗಳ ಅಸಹಜ ರಚನೆಯಿಂದ ಉಂಟಾಗುತ್ತದೆ.
ಮನೆಯವರನ್ನು ಗುರುತು ಹಿಡಿಯದಿರುವುದು, ಏನೇನೋ ಮಾತಾಡುವುದು. ಎಲ್ಲವೂ ಮರೆತವರಂತೆ ಇರುವುದು ಈ ಕಾಯಿಲೆಯ ಲಕ್ಷಣ. ಅಲ್‌ಝೈಮರ್‌ಗೆ ತುತ್ತಾದವರನ್ನು ಮುತುವರ್ಜಿಯಿಂದ ನೋಡಿಕೊಳ್ಳಬೇಕಾಗುತ್ತದೆ. ರೋಗಿಗಳ ಕಾಳಜಿಯಲ್ಲಿ ಮನೆಯವರ ಪಾತ್ರ ಬಹುಮುಖ್ಯ. ಇದನ್ನೂ ಓದಿ: ಹೃದಯಾಘಾತ – ಒಂದು ತಿಂಗಳ ಮುಂಚೆ ಈ 12 ರೋಗಲಕ್ಷಣಗಳು ಕಂಡುಬಂದ್ರೆ ಇರಲಿ ಎಚ್ಚರ!
Advertisement
Advertisement
ಆಲ್‌ಝೈಮರ್ ರೋಗ ನಿಯಂತ್ರಣಕ್ಕೆ ಕೆಲವೊಂದು ಆರೋಗ್ಯಕರ ಹವ್ಯಾಸಗಳಿವೆ. ಅದನ್ನು ಪಾಲಿಸಿದರೆ ಅಥವಾ ರೋಗಿಗಳು ಪಾಲಿಸುವಂತೆ ಮಾಡಿದರೆ, ಆಲ್‌ಝೈಮರ್ ನಿಯಂತ್ರಣ ಸಾಧ್ಯವಾಗುತ್ತದೆ.
Advertisement
ಧೂಮಪಾನ ನಿಲ್ಲಿಸುವುದು
ಧೂಮಪಾನ ಬಿಡುವುದರಿಂದ ಮೆದುಳಿನ ಆರೋಗ್ಯಕ್ಕೆ ಪ್ರಯೋಜನ ಇದೆ. ಬುದ್ಧಿಮಾಂದ್ಯತೆ, ನಿರ್ದಿಷ್ಟವಾಗಿ ಆಲ್‌ಝೈಮರ್ ಕಾಯಿಲೆಗೆ ತುತ್ತಾಗಲು ಧೂಮಪಾನವೂ ಪ್ರಮುಖ ಕಾರಣವಾಗಿದೆ. ಧೂಮಪಾನ ನಿಲ್ಲಿಸುವುದರಿಂದ ಆಲ್‌ಝೈಮರ್ ನಿಯಂತ್ರಣ ಸಾಧ್ಯವಾಗುತ್ತದೆ. ಅಷ್ಟೇ ಅಲ್ಲದೇ ಹೃದಯರಕ್ತನಾಳದ ಕಾಯಿಲೆಗಳು ಮತ್ತು ಪಾರ್ಶ್ವವಾಯು ಸಂಭವಿಸುವ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ. ಹೃದಯ ಮತ್ತು ಮೆದುಳಿನಲ್ಲಿರುವ ರಕ್ತನಾಳಗಳ ಕಿರಿದಾಗುವಿಕೆಯನ್ನು ಕಡಿಮೆ ಮಾಡುತ್ತದೆ. ಇದನ್ನೂ ಓದಿ: ಮಕ್ಕಳೊಂದಿಗೆ ಜಗಳವಾಡುವ ಮುನ್ನ ಪೋಷಕರು ಈ ಅಂಶಗಳನ್ನು ನೆನಪಿಡಿ..
Advertisement
ಕಡಿಮೆ ಆಲ್ಕೋಹಾಲ್ ಸೇವಿಸಿ
ಮದ್ಯದ ಚಟ ಹೆಚ್ಚಿರುವವರು ಅದಕ್ಕೊಂದು ಮಿತಿಯ ಚೌಕಟ್ಟನ್ನು ಹಾಕಿಕೊಳ್ಳಬೇಕು. ಕಡಿಮೆ ಪ್ರಮಾಣದಲ್ಲಿ ಆಲ್ಕೋಹಾಲ್ ಸೇವಿಸುವುದರಿಂದ ಆಲ್‌ಝೈಮರ್ ಕಾಯಿಲೆ ತಡೆಗಟ್ಟಬಹುದು. ಆರೋಗ್ಯ ಸಮಸ್ಯೆ ವಿರುದ್ಧ ಹೋರಾಡಲು ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿರಬೇಕು. ಅದಕ್ಕೆ ಇತಿಮಿತಿಯಲ್ಲಿ ಮದ್ಯ ಸೇವನೆ ಉತ್ತಮ ಮಾರ್ಗ. ಇದರಿಂದ ನಡವಳಿಕೆ ಮತ್ತು ಯೋಚನೆ ಮಾಡುವ ಶಕ್ತಿಯೂ ಸುಧಾರಿಸುತ್ತದೆ.
ಆರೋಗ್ಯಕರ, ಸಮತೋಲಿತ ಆಹಾರ
ಪ್ರತಿದಿನ ಕನಿಷ್ಠ ಐದು ಭಾಗ ಮಾಡಿದ ಹಣ್ಣು ಮತ್ತು ತರಕಾರಿ, ಧಾನ್ಯ, ಮತ್ತು ಕಡಿಮೆ ಕೊಬ್ಬಿನ ಪದಾರ್ಥ ಆಹಾರಗಳನ್ನು ಸೇವಿಸಿ. ಸ್ಯಾಚುರೇಟೆಡ್ ಕೊಬ್ಬು, ಸಕ್ಕರೆ ಮತ್ತು ಅಡುಗೆಯಲ್ಲಿ ಹೆಚ್ಚಿನ ಉಪ್ಪು ಇರುವ ಆಹಾರ ಸೇವನೆ ಕಡಿಮೆ ಮಾಡಿ. ಈ ಕ್ರಮ ಮೆದುಳನ್ನು ಆರೋಗ್ಯಕರವಾಗಿ ಇಡಲಿದೆ. ಮೆದುಳಿನ ಕ್ಷೀಣತೆ ತಪ್ಪಿಸಲು ಈ ಆಹಾರ ಕ್ರಮ ಸಹಕಾರಿ.
ವ್ಯಾಯಾಮ
ಏರೋಬಿಕ್ ಚಟುವಟಿಕೆ (ಸೈಕ್ಲಿಂಗ್ ಅಥವಾ ವೇಗದ ನಡಿಗೆಯಂತಹ) ಮಾಡುವ ಮೂಲಕ ಪ್ರತಿ ವಾರ ಕನಿಷ್ಠ 150 ನಿಮಿಷಗಳ ವ್ಯಾಯಾಮ ಮಾಡಿ. ಇದರಿಂದ ನೆನಪು, ಯೋಚನೆ ಮತ್ತು ಆಲೋಚನಾ ಸಾಮರ್ಥ್ಯ ಸುಧಾರಿಸುತ್ತದೆ. ಇದನ್ನೂ ಓದಿ: ಪೋಷಕರ ನಡವಳಿಕೆಗಳು ಮಕ್ಕಳ ವ್ಯಕ್ತಿತ್ವದ ಮೇಲೆ ಹೇಗೆ ಪ್ರಭಾವ ಬೀರುತ್ತೆ ಗೊತ್ತಾ?
ನಿಯಮಿತ ಆರೋಗ್ಯ ತಪಾಸಣೆ
ಆಲ್‌ಝೈಮರ್ ರೋಗವನ್ನು ಸಂಪೂರ್ಣವಾಗಿ ಗುಣಪಡಿಸಲು ಸಾಧ್ಯವಿಲ್ಲ. ಆದರೆ, ಉತ್ತಮ ಜೀವನಶೈಲಿ, ಆಹಾರ ಪದ್ಧತಿ ಮತ್ತು ನಿಯಮಿತ ಆರೋಗ್ಯ ತಪಾಸಣೆಯಿಂದ ರೋಗವನ್ನು ನಿಯಂತ್ರಣದಲ್ಲಿಡಬಹುದು. ಆಗಾಗ ಆಸ್ಪತ್ರೆಗೆ ತೆರಳಿ ವೈದ್ಯರ ಸಲಹೆ, ಚಿಕಿತ್ಸೆ ಪಡೆಯುತ್ತಿದ್ದರೆ ಕಾಯಿಲೆಯನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬಹುದು.