ಬಣ್ಣ ಬಣ್ಣದ ಲಿಪ್‍ಸ್ಟಿಕ್‍ಗಳು ತುಟಿಗೆ ರಂಗು ನೀಡೋದಷ್ಟೇ ಅಲ್ಲ ನಿಮ್ಮ ಕಾನ್ಫಿಡೆನ್ಸ್ ಕೂಡ ಹೆಚ್ಚಿಸುತ್ತದೆ. ಆದ್ರೆ ನೇರಳೆ ಬಣ್ಣದ ಲಿಪ್‍ಸ್ಟಿಕ್ ಹಚ್ಚಿದ ಐಶ್ವರ್ಯಾ ರೈ ನೋಡಿ ಜನ ಏನಂದ್ರು ಅಂತ ಮತ್ತೆ ಹೇಳ್ಬೇಕಿಲ್ಲ. ಹೀಗಾಗಿ ನಿಮ್ಮ ಮುಖಕ್ಕೆ ಸರಿಹೊಂದೋ ಬಣ್ಣ ಆರಿಸಿಕೊಳ್ಳೋದು ಮುಖ್ಯ. ಆದ್ರೆ ಅಂಗಡಿಯಲ್ಲಿರೋ ಹಲವಾರು ಬಣ್ಣಗಳ ಲಿಪ್‍ಸ್ಟಿಕ್‍ಗಳಲ್ಲಿ ನಿಮಗೆ ಸರಿಹೊಂದುವ ಬಣ್ಣ ಯಾವುದು ಅನ್ನೋ ಗೊಂದಲದಲ್ಲಿದ್ದೀರಾ? ಡೋಂಟ್ ವರಿ…. ನಿಮ್ಮ ಮುಖದ ಬಣ್ಣಕ್ಕೆ ಹೊಂದಿಕೆಯಾಗೋ ಲಿಪ್‍ಸ್ಟಿಕ್ ಆರಿಸೋದು ಹೇಗೆ ಅನ್ನೋದಕ್ಕೆ ಇಲ್ಲಿದೆ ಟಿಪ್ಸ್.
Advertisement
1. ನೀವು ಮಿಲ್ಕಿ ಬ್ಯೂಟಿಯಾಗಿದ್ರೆ ಈ ಬಣ್ಣಗಳನ್ನ ಆರಿಸಿಕೊಳ್ಳಿ
ನೀವು ಹಾಲಿನಂತೆ ಬೆಳ್ಳಗಿದ್ದರೆ ಆರೆಂಜ್, ಪೀಚ್, ಕೋರಲ್, ಪಿಂಕ್ ಅಥವಾ ಕೆಂಪು ಬಣ್ಣದ ಲಿಪ್‍ಸ್ಟಿಕ್ ಆರಿಸಿಕೊಳ್ಳಿ. ತೀರಾ ಗಾಢ ಬಣ್ಣದ ಲಿಪ್‍ಸ್ಟಿಕ್ ನಿಮ್ಮ ಮುಖಕ್ಕೆ ಚೆನ್ನಾಗಿ ಕಾಣುವುದಿಲ್ಲ. ಹಗಲು ಹೊತ್ತಿನಲ್ಲಿ ನಿಮ್ಮ ತುಟಿಯ ಬಣ್ಣಕ್ಕಿಂತ ಕೊಂಚ ಗಾಢವಾದ ತಿಳಿ ಶೇಡ್‍ನ ಲಿಪ್‍ಸ್ಟಿಕ್ ಹಚ್ಚಿಕೊಳ್ಳಿ. ರಾತ್ರಿಯ ಪಾರ್ಟಿ ಅಥವಾ ಸಮಾರಂಭಕ್ಕಾಗಿ ಕೆಂಪು ಬಣ್ಣದ ಲಿಪ್‍ಸ್ಟಿಕ್ ಬೆಸ್ಟ್ ಚಾಯ್ಸ್.
Advertisement
Advertisement
2. ಗೋಧಿ ಬಣ್ಣದವರಾಗಿದ್ರೆ ಈ ಬಣ್ಣಗಳ ಲಿಪ್‍ಸ್ಟಿಕ್ ಸೂಕ್ತ
ನಿಮ್ಮದು ಗೋಧಿ ಮೈಬಣ್ಣವಾಗಿದ್ರೆ ಲಿಪ್‍ಸ್ಟಿಕ್ ಆರಿಸೋಕೆ ಕಷ್ಟ ಪಡಬೇಕಿಲ್ಲ. ಯಾಕಂದ್ರೆ ಸಾಮಾನ್ಯವಾಗಿ ತಿಳಿ ಹಾಗು ಗಾಢ ಬಣ್ಣಗಳೆರಡೂ ನಿಮ್ಮ ಮುಖಕ್ಕೆ ಹೊಂದುತ್ತದೆ. ಪೀಚ್ ನಿಂದ ಹಿಡಿದು ಕಂದು ಬಣ್ಣದ ವರೆಗೆ ಯಾವುದೇ ಬಣ್ಣ ಆರಿಸಿಕೊಂಡರೂ ನಿಮ್ಮ ಮುಖಕ್ಕೆ ಒಪ್ಪುತ್ತದೆ. ಡೇ ಲುಕ್‍ಗಾಗಿ ಪಿಂಕ್ ಮತ್ತು ನೈಟ್ ಲುಕ್‍ಗಾಗಿ ಕೆಂಪು ಬಣ್ಣ ಸೂಕ್ತ ಆಯ್ಕೆ. ಆದ್ರೆ ನ್ಯೂಡ್ ಮತ್ತು ಮ್ಯಾಟ್ ಲಿಪ್‍ಸ್ಟಿಕ್‍ಗಳು ನಿಮಗೆ ಸರಿಹೊಂದುವುದಿಲ್ಲ. (ನಿಮ್ಮ ಮುಖದ ಬಣ್ಣದಂತೆಯೇ ಕಾಣುವುದು ನ್ಯೂಡ್, ಶೈನಿಂಗ್ ಇಲ್ಲದೆ ತೀರಾ ಒಣಗಿದಂತಿರುವ ಲಿಪ್‍ಸ್ಟಿಕ್‍ಗಳನ್ನ ಮ್ಯಾಟ್ ಲಿಪ್‍ಸ್ಟಿಕ್ ಅಂತಾರೆ)
Advertisement
3. ಎಣ್ಣೆಗೆಂಪು ಸುಂದರಿಯರೇ ಈ ಬಣ್ಣಗಳನ್ನೇ ಬಳಸಿ
ನೀವು ಎಣ್ಣೆಗೆಂಪು ಮೈಬಣ್ಣದವರಾಗಿದ್ರೆ ಬೆರ್ರಿ ಮತ್ತು ಕಂದು ಬಣ್ಣದ ಲಿಪ್‍ಸ್ಟಿಕ್ ಬಳಸಿ. ಕ್ಯಾರಮೆಲ್ ರೆಡ್, ಇಟ್ಟಿಗೆ ಕೆಂಪು ಅಥವಾ ಕಂದು ಮಿಶ್ರಿತ ಕೆಂಪು ಬಣ್ಣ ನಿಮಗೆ ತುಂಬಾ ಚೆನ್ನಾಗಿ ಒಪ್ಪುತ್ತದೆ. ಗಾಢವಾದ ಆರೆಂಜ್ ಮತ್ತು ಗಾಢ ಪಿಂಕ್ ಬಣ್ಣದ ಲಿಪ್‍ಸ್ಟಿಕ್‍ಗಳಿಂದ ದೂರವಿರಿ.
ಸೋ..,ಲಿಪ್‍ಸ್ಟಿಕ್ ಖರೀದಿಸೋವಾಗ ಈ ಟಿಪ್ಸ್‍ಗಳನ್ನ ಮರೀಬೇಡಿ.