ರಾಯಚೂರು: ಬಿಜೆಪಿ (BJP) ಆಡಳಿತದಲ್ಲಿ ಬಸ್, ಟ್ರೈನ್ ಸೇರಿದಂತೆ ಯಾವುದಕ್ಕೂ ಟಿಪ್ಪು (Tippu) ಹೆಸರನ್ನು ಇಡುವುದಿಲ್ಲ. ಟಿಪ್ಪು ಒಬ್ಬ ದೇವಸ್ಥಾನಗಳನ್ನು ನಾಶ ಮಾಡಿದಂತಹ ಧರ್ಮಾಂಧ ಎಂದು ಎಂಎಲ್‌ಸಿ ಎನ್.ರವಿಕುಮಾರ್ (N Ravikumar) ಹೇಳಿದ್ದಾರೆ.
ರಾಯಚೂರಿನಲ್ಲಿ (Raichur) ಮಾತನಾಡಿದ ರವಿಕುಮಾರ್, ಟಿಪ್ಪು ಎಕ್ಸ್‌ಪ್ರೆಸ್ ಬದಲು ರೈಲಿಗೆ ಒಡೆಯರ್ ಎಕ್ಸ್‌ಪ್ರೆಸ್ ಎಂದು ಮರುನಾಮಕರಣ ಮಾಡಿದ ವಿಚಾರವಾಗಿ ಪ್ರತಿಕ್ರಿಯಿಸಿ, ನಮ್ಮ ಆಡಳಿತದ ಅವಧಿಯಲ್ಲಿ ಟಿಪ್ಪು ಹೆಸರು ಯಾವುದಕ್ಕೂ ಬಳಕೆ ಮಾಡುವುದಿಲ್ಲ. ಟಿಪ್ಪು ದಬ್ಬಾಳಿಕೆಯಿಂದ ಮಂಡ್ಯ ಜಿಲ್ಲೆಯ ಕೆಂಪು ಕೋಟೆಯಲ್ಲಿ ಇಂದಿಗೂ ದೀಪಾವಳಿ ಆಚರಣೆ ಮಾಡಲ್ಲ ಎಂದರು.
ಸಿಎಂ ಬಸವರಾಜ ಬೊಮ್ಮಾಯಿ ಮತ್ತು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ರಾಯಚೂರಿನಿಂದ ಸಂಕಲ್ಪ ಯಾತ್ರೆ ಶುರುವಾಗಲಿದೆ. ಜನ ಸಂಕಲ್ಪ ಯಾತ್ರೆ ಗಿಲ್ಲೇಸೂಗೂರು ಗ್ರಾಮದಿಂದ ಶುರುವಾಗಲಿದೆ. ಈ ಯಾತ್ರೆಯಲ್ಲಿ 50 ಸಾವಿರಕ್ಕೂ ಹೆಚ್ಚು ಜನರು ಸೇರಲಿದ್ದಾರೆ ಅಂತ ತಿಳಿಸಿದರು. ಇದನ್ನೂ ಓದಿ: BJPಯಿಂದ ಟಿಪ್ಪು ಪರಂಪರೆ ಅಳಿಸಲು ಸಾಧ್ಯವೇ ಇಲ್ಲ: ಓವೈಸಿ
ಯಡಿಯೂರಪ್ಪ ಹೋದಲ್ಲಿ ಸೋಲಾಗುತ್ತದೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆಗೆ ಪ್ರತಿಕ್ರಿಯಿಸಿದ ರವಿಕುಮಾರ್, ಅವರು ಈ ಬಗ್ಗೆ ಮಾತನಾಡುವ ಅವಶ್ಯಕತೆಯಿಲ್ಲ. ಜನರಿಗೆ ಎಲ್ಲಾ ಗೊತ್ತಿದೆ. ಒಂದು ಸೀಟು ಬರಲ್ಲ ಎನ್ನುವ ಪರಿಸ್ಥಿತಿಯಿಂದ ಇಲ್ಲಿಯವರೆಗೆ ಬಿಜೆಪಿ ಬರಲು ಯಡಿಯೂರಪ್ಪ ಕಾರಣ. ಯತ್ನಾಳ್ ಬಗ್ಗೆ ಕೇಂದ್ರ ನಾಯಕರು ನೋಡಿಕೊಳ್ಳುತ್ತಾರೆ, ಅವರ ಮೇಲೆ ಕ್ರಮ ತೆಗೆದುಕೊಳ್ಳುತ್ತಾರೆ ಎಂದರು.
ಎಸ್‌ಸಿ ಮತ್ತು ಎಸ್‌ಟಿ ಮೀಸಲಾತಿ ಹೆಚ್ಚಳಕ್ಕಾಗಿ ಹಲವು ವರ್ಷಗಳಿಂದ ಹೋರಾಟ ನಡೆದಿತ್ತು. ಯಾವ ಸರ್ಕಾರವೂ ಮಾಡದೇ ಇರುವುದನ್ನು ಬಿಜೆಪಿ ಮಾಡಿ ಬದ್ಧತೆ ತೋರಿದೆ. ಶಾಸಕರನ್ನು ನೋಡಿ ಮೀಸಲಾತಿ ಹೆಚ್ಚಳ ಮಾಡಿಲ್ಲ. ಬಸವಣ್ಣ, ಅಂಬೇಡ್ಕರ್ ವಿಚಾರ ಇಟ್ಟು ನಮ್ಮ ಸಿಎಂ ಮೀಸಲಾತಿ ಹೆಚ್ಚಳ ಮಾಡಿದ್ದಾರೆ. ಮೀಸಲಾತಿ ಹೆಚ್ಚಳದ ಬಳಿಕ ಮೊದಲ ಕಾರ್ಯಕ್ರಮ ಗಿಲ್ಲೇಸೂಗೂರು ಗ್ರಾಮದಲ್ಲಿ ನಡೆಯುತ್ತದೆ. ಈ ವೇಳೆ ಸಿಎಂ ಬೊಮ್ಮಾಯಿಗೆ ಅದ್ಧೂರಿಯಾಗಿ ಸನ್ಮಾನ ಮಾಡುವ ಯೋಜನೆ ಮಾಡಲಾಗಿದೆ ಎಂದು ರವಿಕುಮಾರ್ ಹೇಳಿದರು. ಇದನ್ನೂ ಓದಿ: ಮಿನಿ ಪಾಕಿಸ್ತಾನ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದ ಯುವಕನ ಬಂಧನ