ಬೆಳಗಾವಿ: ಚುನಾವಣೆ ಬಂದಾಗ ರಾಜಕೀಯ ಪಕ್ಷದವರು ಟೋಪಿ, ಖಡ್ಗ ಹಿಡಿದುಕೊಂಡು ಪೋಸ್ ಕೊಡ್ತಾರೆ, ಆದ್ರೇ ಜಯಂತಿ ಆಚರಿಸಿದ್ರೆ ವಿರೋಧಿಸ್ತಾರೆ ಎಂದು ಹೇಳುವ ಮೂಲಕ ಪರೋಕ್ಷವಾಗಿ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಬಿಜೆಪಿಗೆ ಟಾಂಗ್ ಕೊಟ್ಟಿದ್ದಾರೆ.
ಬೆಳಗಾವಿಯಲ್ಲಿ ನಡೆದ ಹಜರತ್ ಟಿಪ್ಪು ಸುಲ್ತಾನ್ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಲಕ್ಷ್ಮಿ ಹೆಬ್ಬಾಳ್ಕರ್, ಮಹಾನ್ ವ್ಯಕ್ತಿಗಳ ಜಯಂತಿಯನ್ನು ಕರ್ನಾಟಕ ಸರ್ಕಾರ ಮಾಡುತ್ತಿದೆ. ಎಲ್ಲ ಮಹಾನ್ ಪುರುಷರನ್ನು ಒಂದು ಸಮಾಜಕ್ಕೆ ಸೀಮಿತಪಡಿಸುವುದು ಬೇಡ, ಎಲ್ಲರೂ ಅವರ ಗುಣಗಳನ್ನು ಪಡೆದುಕೊಳ್ಳಲಿ. ಟಿಪ್ಪು ಸುಲ್ತಾನ್ ರೈತರ ಪರವಾದ ಕಾಳಜಿಯನ್ನು ಹೊಂದಿದ್ದರು. ಹಿಂದೂ ಸಂಸ್ಕೃತಿಯ ಶೃಂಗೇರಿ ಮಠದ ಮೇಲೆ ಆಕ್ರಮಣವಾದಾಗ ಟಿಪ್ಪು ತಮ್ಮ ಸೈನಿಕರನ್ನು ಕಳುಹಿಸಿ ಮಠವನ್ನ ಉಳಿಸಿಕೊಟ್ಟಿದ್ದರು. ಇಂದಿಗೂ ಟಿಪ್ಪು ಅವರ ಹೆಸರಿನಲ್ಲಿ ಅಲ್ಲಿ ನಿತ್ಯವೂ ಪ್ರಾರ್ಥನೆ ನಡೆಯುತ್ತೆ. ಇಂತಹ ಮಹಾನ್ ವ್ಯಕ್ತಿಯ ಜಯಂತಿ ವಿಚಾರದಲ್ಲಿ ಯಾರು ರಾಜಕಾರಣ ಮಾಡಬಾರದು ಎಂದು ಹೇಳಿದ್ದಾರೆ.
Advertisement
ರಾಜಕೀಯ ಪಕ್ಷದ ನಾಯಕರು ಚುನಾವಣೆ ಬಂದಾಗ ಟೋಪಿ, ಖಡ್ಗ ಹಿಡಿದುಕೊಂಡು ಪೋಸ್ ಕೊಡ್ತಾರೆ. ಆದ್ರೆ ಅದೇ ವ್ಯಕ್ತಿಗಳ ಜಯಂತಿಗಳು ಬಂದಾಗ ನಮ್ಮ ವಿರೋಧ ಇದೆ ಅಂತಾ ಹೇಳ್ತಾರೆ, ಇದು ಸರಿಯಲ್ಲ ಎಂದು ಬಿಜೆಪಿ ಗೆ ಪರೋಕ್ಷವಾಗಿ ಲಕ್ಷ್ಮಿ ಅವರು ಟೀಕಿಸಿದ್ದಾರೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews