-ಎಣ್ಣೆ ಕಿಕ್, ರಸ್ತೆಯಲ್ಲೇ ಕವಿಯಾದ
ಗದಗ: ಇಂದು ಮದ್ಯ ಮಾರಾಟಕ್ಕೆ ಅವಕಾಶ ಕಲ್ಪಿಸಿದ್ದಕ್ಕೆ ಮದ್ಯಪ್ರಿಯನೊಬ್ಬ ನಶೆಯಲ್ಲಿ ಹಾಡಿನ ಮೂಲಕ ಸಿಎಂ ಯಡಿಯೂರಪ್ಪನವರಿಗೆ ಧನ್ಯವಾದ ಹೇಳಿದ್ದಾನೆ.
ಜಿಲ್ಲೆಯ ಮುಳಗುಂದ ಪಟ್ಟಣದಲ್ಲಿ ವ್ಯಕ್ತಿಯೋರ್ವ ಮದ್ಯ ಸಿಕ್ಕಿದ್ದೇ ತಡ ಗಟಗಟನೇ ಕುಡಿದು ರಸ್ತೆಯಲ್ಲಿ ಕುಳಿತು ಹಾಡಲು ಶುರು ಮಾಡಿದ್ದಾನೆ. ಕುಡಿದ ಮತ್ತಿನಲ್ಲಿ ಲಾವಣಿ ಪದಗಳ ಮೂಲಕವೇ ಸಿಎಂಗೆ ಧನ್ಯವಾದ ಸಲ್ಲಿಸಿದ್ದಾನೆ. ಕಳೆದ 40 ದಿನಗಳಿಂದ ಶಾಂತವಾಗಿ ಮನೆಯಲ್ಲಿ ಕುಳಿತಿದ್ದ ಮದ್ಯ ಸೇವಕರು ಇಂದು ರಸ್ತೆಯಲ್ಲಿ ತೂರಾಡುತ್ತಿದ್ದಾರೆ.
ಕೆಲವರು ಮದ್ಯ ಸಿಕ್ಕ ಖುಷಿಗೆ ಡ್ಯಾನ್ಸ್ ಮಾಡಿದ್ರೆ, ನಶೆಯಲ್ಲಿ ನಡುರಸ್ತೆಯಲ್ಲಿಯೇ ನಿದ್ರೆಗೆ ಜಾರಿದ್ದಾರೆ. ಮುಳಗುಂದದ ವ್ಯಕ್ತಿ ಹಾಡು ಹೇಳುತ್ತಾ ದಾರಿಹೋಕರು ಕಾಲು ಹಿಡಿದು ನಮಸ್ಕರಿಸಿದ್ದಾನೆ. ಇಷ್ಟು ಸಾಲದು ಎಂಬಂತೆ ಎದ್ದು ನಿಂತು ಲಾವಣಿ ಪದ ಹೇಳುತ್ತಾ ಹೆಜ್ಜೆ ಹಾಕಿದ್ದಾನೆ.
https://www.facebook.com/publictv/videos/634039177325217/