ಮೈಸೂರು: ಟಿಪ್ಪರ್ ಚಾಲಕನ ಅಜಾಗರೂಕತೆಯಿಂದ ಒಂದು ಟ್ರಾನ್ಸ್ ಫಾರ್ಮರ್ ಮತ್ತು 10 ವಿದ್ಯುತ್ ಕಂಬಗಳು ಧರೆಗುರುಳಿ ಸಾಕಷ್ಟು ಪ್ರಮಾಣದಲ್ಲಿ ಹಾನಿಯಾಗಿರೋ ಘಟನೆ ಜಿಲ್ಲೆಯ ಹುಣಸೂರು ಪಟ್ಟಣದಲ್ಲಿ ನಡೆದಿದೆ.
ಟಿಪ್ಪರ್ ಚಾಲಕ ಡೀಸೆಲ್ ತುಂಬಿಸಿ ಟ್ರ್ಯಾಲಿಯನ್ನು ಕೆಳಗಿಳಿಸದ ಈ ಹಿನ್ನೆಲೆಯಲ್ಲಿ ರಸ್ತೆಯಲ್ಲಿ ಸಾಗುವಾಗ ವಿದ್ಯುತ್ ತಂತಿಗೆ ಸಿಲುಕಿ ಈ ಅನಾಹುತವಾಗಿದೆ. ಟಿಪ್ಪರ್‍ಗೆ ವಿದ್ಯುತ್ ತಂತಿ ತಗುಲಿದ ತಕ್ಷಣ ವಿದ್ಯುತ್ ಕಡಿತಗೊಂಡಿದ್ದು, ಅದೃಷ್ಟವಶಾತ್ ಭಾರೀ ಅವಘಡ ತಪ್ಪಿದೆ. ಸ್ಥಳಕ್ಕೆ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ಕಾರ್ಪೊರೇಷನ್ ಲಿಮಿಟೆಡ್(ಸಿಇಎಸ್‍ಸಿ) ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
Advertisement
Advertisement
ಈ ಅವಘಡದಿಂದ ವಿದ್ಯುತ್ ಕಂಬಗಳು ರಸ್ತೆ ಬದಿಯಲ್ಲಿ ಧರೆಗುರುಳಿದೆ. ಕೆಲವು ಕಂಬಗಳು ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ವಾಹನಗಳ ಮೇಲೂ ಬಿದ್ದಿದೆ. ಸದ್ಯ ಟಿಪ್ಪರ್ ಚಾಲಕ ನಾಗನನ್ನು ಹುಣಸೂರು ಪಟ್ಟಣದ ಪೊಲೀಸರು ವಶಕ್ಕೆ ಪಡೆದಿದ್ದಾರೆ.