ಇಂದು ಬೆಳಗ್ಗೆ ಪ್ರಭಾಸ್ (Prabhas) ನಟನೆಯ ಸಲಾರ್ ಸಿನಿಮಾದ ಟೀಸರ್ ರಿಲೀಸ್ ಆಗಿದ್ದು, ಈ ಟೀಸರ್ ನಲ್ಲಿ ಹೆಚ್ಚು ಅಬ್ಬರಿಸಿದ್ದು ಪ್ರಭಾಸ್ ಅಲ್ಲ. ಪುಷ್ಪಕ ವಿಮಾನ (Pushpaka Vimana) ಸಿನಿಮಾದ ಮೂಲಕ ಸಾಕಷ್ಟು ಫೇಮಸ್ ಆಗಿರುವ ಟಿನ್ನು ಆನಂದ್ (Tinnu Anand). ಪುಷ್ಪಕ ವಿಮಾನ ಸಿನಿಮಾದಲ್ಲಿ ಟಿನ್ನುಗೆ ಮಾತೇ ಇರಲಿಲ್ಲ. ಯಾಕೆಂದರೆ ಅದು ಮೂಕಿ ಚಿತ್ರವಾಗಿತ್ತು. ಸಲಾರ್ ಸಿನಿಮಾದ ಟೀಸರ್ ನಲ್ಲಿ ಟಿನ್ನುಗೆ ಮಾತು ಬಿಟ್ಟರೆ ಬೇರೇನೂ ಇಲ್ಲ.
Advertisement
ತಮ್ಮ ಅದ್ಭುತ ಕಂಠ ಮತ್ತು ಧ್ವನಿ ಏರಿಳಿತದಿಂದಾಗಿ ಟಿನ್ನು ಸಲಾರ್ (Salaar) ನಲ್ಲಿ ಹೊಡೆದ ಅಷ್ಟೂ ಡೈಲಾಗ್ ಗಳು ಪ್ರಭಾಸ್ ಅಭಿಮಾನಿಗಳ ಸಂಭ್ರಮಕ್ಕೆ ಕಾರಣವಾಗಿವೆ. ಸಲಾರ್ ಸಿನಿಮಾದ ಹೀರೋ ಅನ್ನು ಅವರು ಪರಿಚಯಿಸಿದ ರೀತಿಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಸಲಾರ್ ಸಿನಿಮಾದ ಕಥೆಯನ್ನು ಅವರ ನಾಲಿಗೆಯಿಂದಲೇ ಕೇಳುವುದು ಚಂದ ಎಂದು ಕಾಮೆಂಟ್ ಮಾಡಿದ್ದಾರೆ. ಈ ಮೂಲಕ ಪ್ರಭಾಸ್ ಅಭಿಮಾನಿಗಳ ಮನ ಗೆದ್ದಿದ್ದಾರೆ ಟಿನ್ನು. ಇದನ್ನೂ ಓದಿ:‘ಸಲಾರ್’ ಚಿತ್ರಕ್ಕೂ ‘ಕೆಜಿಎಫ್ 2’ಗೂ ಇದೆ ನಂಟು: ತಲೆಕೆಡಿಸಿಕೊಂಡ ಫ್ಯಾನ್ಸ್
Advertisement
Advertisement
1987ರಲ್ಲಿ ತೆರೆಕಂಡ ಪುಷ್ಪಕ ವಿಮಾನದಲ್ಲಿ ಕಮಲ್ ಹಾಸನ್ ಜೊತೆ ತೆರೆ ಹಂಚಿಕೊಂಡಿದ್ದರು ಟಿನ್ನು ಆನಂದ್. ಅದೊಂದು ಕಿಲ್ಲರ್ ಪಾತ್ರ. ಆ ಪಾತ್ರವನ್ನು ಎಷ್ಟು ನೀಟಾಗಿ ನಿಭಾಯಿಸಿದ್ದರು ಅಂದರೆ, ಇವತ್ತಿಗೂ ಟಿನ್ನು ಅಂದಾಕ್ಷಣ ಪ್ರೇಕ್ಷಕರ ಮನದಲ್ಲಿ ಮೂಡುವ ಪಾತ್ರ ಅದೇ ಆಗಿರುತ್ತದೆ. ಅಷ್ಟರ ಮಟ್ಟಿಗೆ ನೋಡುಗರನ್ನು ಹಿಡಿದಿಟ್ಟಿದ್ದರು. ನಂತರ ಸಾಕಷ್ಟು ಪಾತ್ರಗಳನ್ನು ಮಾಡಿದ್ದರೂ, ಸಲಾರ್ ಗೆ ಸಿಕ್ಕಷ್ಟು ಪ್ರತಿಕ್ರಿಯೆ ಸಿಕ್ಕೇ ಇರಲಿಲ್ಲ ಎನ್ನಬಹುದು.
Advertisement
ಒಂದು ಕಡೆ ಟಿನ್ನು ಪಾತ್ರದ ಬಗ್ಗೆ ಮೆಚ್ಚುಗೆ ವ್ಯಕ್ತವಾಗುತ್ತಿದ್ದರೆ ಮತ್ತೊಂದು ಕಡೆ ಸಲಾರ್ ಸಿನಿಮಾದ ಟೀಸರ್ ಬಗ್ಗೆ ಹಲವರು ಹಲವು ರೀತಿಯಲ್ಲಿ ವಿಶ್ಲೇಷಣೆ ಮಾಡುತ್ತಿದ್ದಾರೆ. ಟೀಸರ್ ನಲ್ಲಿ ಬಳಕೆಯಾದ ದೃಶ್ಯಗಳಲ್ಲಿ ಕೆಜಿಎಫ್ ಸಿನಿಮಾವನ್ನೂ ಹಲವರು ಹುಡುಕಿದ್ದಾರೆ. ಹಾಗಾಗಿ ಫ್ಯಾನ್ಸ್ ತಲೆಕೆಡಿಸಿಕೊಂಡು ತಮ್ಮದೇ ಆದ ರೀತಿಯಲ್ಲಿ ಕಥೆ ಕಟ್ಟುತ್ತಿದ್ದಾರೆ. ಆ ಕಥೆಗಳು ಕೂಡ ತುಂಬಾ ಸ್ವಾರಸ್ಯಕರವಾಗಿವೆ.
ಬೆಳಗ್ಗೆ ಬಿಡುಗಡೆಯಾದ ಸಲಾರ್ ಟೀಸರ್ ನಲ್ಲಿ ಕೆಜಿಎಫ್ ಸಿನಿಮಾದ ಕೋಲಾರ್ ಗೋಲ್ಡ್ ಫಿಲ್ಡನ್ ಮೂನಿಂಗ್ ಒಳಗಿನ ಸಾಮ್ರಾಜ್ಯವನ್ನು ತರುವ ಪ್ರಯತ್ನ ನಡೆದಿದೆಯಾ ಎನ್ನುವ ಅನುಮಾನ ಮೂಡಿಸಿದೆ. ಕೆಜಿಎಫ್ ಕಥೆಯಲ್ಲಿ ಬರುವ ಬಂಗಾರದ ಕಣಜಗಳ ಗೇಟ್ ಗಳು ಸಲಾರ್ ನಲ್ಲಿ ಎಂಟ್ರಿ ಪಡೆದಿವೆ. ಕೆಲ ನಂಬರ್ ಗಳು ಕೂಡ ಯಥಾವತ್ತಾಗಿ ದಾಖಲಾಗಿವೆ. ಹಾಗಾಗಿ ಕೆಜಿಎಫ್ ಅಧ್ಯಾಯದ ಒಂದಷ್ಟು ಭಾಗವನ್ನು ಸಲಾರ್ ಸಿನಿಮಾದಲ್ಲಿ ಹೇಳಿದ್ದಾರಾ ಎಂದು ಹಲವರು ಪ್ರಶ್ನೆ ಮಾಡಿದ್ದಾರೆ.
Web Stories