ಬೆಂಗಳೂರು: ದೀಪಾವಳಿಗೆ (Deepavali) ಮೊದಲೇ ದೆಹಲಿ ಗ್ಯಾಸ್ ಚೇಂಬರ್ ಆಗಿ ಬದಲಾಗಿದೆ. ದೆಹಲಿಯ ಗಾಳಿ ಗುಣಮಟ್ಟ ಕುಸಿದಿದೆ. ಇದ್ರಿಂದ ಎಚ್ಚೆತ್ತ ಕರ್ನಾಟಕ ಸರ್ಕಾರ, ಸುಪ್ರೀಂ ಕೋರ್ಟ್ ಆದೇಶದ ಅನುಸಾರ ರಾತ್ರಿ 8 ರಿಂದ 10 ಗಂಟೆ ತನಕ ಹಸಿರು ಪಟಾಕಿ ಹೊಡೆಯಬೇಕು ಎಂದು ಎಚ್ಚರಿಕೆ ನೀಡಿದೆ.
Advertisement
ಈ ಸಂಬಂಧ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಿಎಂ, ರಾತ್ರಿ 8 ಗಂಟೆಯಿಂದ 10 ಗಂಟೆ ತನಕ ಪಟಾಕಿ ಹೊಡೆಯಬೇಕು. ಸುಪ್ರೀಂ ಕೋರ್ಟ್ ಆದೇಶದಂತೆ ದೀಪಾವಳಿ ಸಂದರ್ಭದಲ್ಲಿ ಹಸಿರು ಪಟಾಕಿಗೆ ಮಾತ್ರ ಅವಕಾಶವಿದೆ ಎಂದಿದ್ದಾರೆ. ಇದನ್ನೂ ಓದಿ: ಮಾಜಿ ಸಚಿವರಿಗೆ ಕಾಂಗ್ರೆಸ್ ನಾಯಕಿ ಹನಿಟ್ರ್ಯಾಪ್; 20 ಲಕ್ಷಕ್ಕೆ ಬೇಡಿಕೆಯಿಟ್ಟಿದ್ದ ಮಹಿಳೆ ಪೊಲೀಸರಿಗೆ ಲಾಕ್
Advertisement
Advertisement
ಪರಿಸರಕ್ಕೆ ಹಾನಿಯಾಗುವ ಪಟಾಕಿಗಳಿಗೆ ಯಾವುದೇ ಕಾರಣಕ್ಕೂ ಅವಕಾಶ ನೀಡಬಾರದು. ಪಟಾಕಿ ದಾಸ್ತಾನು, ಮಾರಾಟ ಪ್ರಕ್ರಿಯೆಯಲ್ಲಿ ಸುರಕ್ಷತೆ ವಿಷಯದಲ್ಲಿ ಯಾವುದೇ ಲೋಪವಾಗದಂತೆ ನೋಡಿಕೊಳ್ಳಬೇಕು. ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳು ಈ ಕುರಿತು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಸೂಚಿಸಿದ್ದೇನೆ. ಪಟಾಕಿಯಿಂದ ಆರೋಗ್ಯದ ಮೇಲೆ ಪರಿಣಾಮ ಬೀರಬಾರದು ಎಂದು ಸೂಚನೆ ನೀಡಿದ್ದಾರೆ. ಇದನ್ನೂ ಓದಿ: ಜಾರ್ಖಂಡ್ ವಿಧಾನಸಭಾ ಚುನಾವಣೆ ರಾಯಭಾರಿಯಾಗಿ ಲೆಜೆಂಡ್ ಕ್ರಿಕೆಟಿಗ ಎಂ.ಎಸ್ ಧೋನಿ ನೇಮಕ
Advertisement
ಇದೇ ವೇಳೆ ಬೆಂಗಳೂರು ನಗರದ ಮಳೆಹಾನಿ ಕುರಿತು ಮಾತನಾಡಿದ ಸಿಎಂ, ಮಳೆಹಾನಿ ಬಗ್ಗೆ ಪರಿಶೀಲನೆ ಮಾಡಿದ್ದೇವೆ. ಬೆಂಗಳೂರಲ್ಲಿ ಅತಿ ಹೆಚ್ಚು ಮಳೆ ಆಗಿದೆ. ಸುಮಾರು 275 ಮಿಲಿ ಮೀಟರ್ ಮಳೆ, ನೂರು ವರ್ಷಗಳಲ್ಲಿ 3ನೇ ಅತಿ ಹೆಚ್ಚು ಮಳೆಯಾಗಿದೆ. ಪ್ರತಿ ಸಲ ಹೆಚ್ಚು ಮಳೆ ಬಂದಾಗ, ಪ್ರವಾಹ ಬಂದಾಗ ಹಾನಿ ಆಗುತ್ತಿದೆ. ಹಿಂದೆ ಸಿಎಂ ಆಗಿದ್ದಾಗ ರಾಜಕಾಲುವೆಗಳನ್ನ ಒತ್ತುವರಿ ತೆರವಿಗೆ ಸೂಚಿಸಿದ್ದೆ. 450 ಕಿಮೀ ರಾಜಕಾಲುವೆ ಅಭಿವೃದ್ಧಿ ಆಗಿತ್ತು, 173 ಕಿಮೀ ಉಳಿದುಕೊಂಡಿದೆ, ಅಲ್ಲದೇ 80 ಕಿಮೀ ಉಳಿದ ಕಾಲುವೆಗಳನ್ನ ಸರಿಪಡಿಸಬೇಕಿದೆ. ವಿಶ್ವಬ್ಯಾಂಕ್ 7,000 ಕೋಟಿ ರೂ. ಸಾಲ ನೀಡಲು ಒಪ್ಪಿದೆ. 3-4 ತಿಂಗಳಲ್ಲಿ ಅಂತಿಮವಾಗುತ್ತೆ ಎಂದು ಸಿಎಂ ಹೇಳಿದ್ದಾರೆ.