ಬಳ್ಳಾರಿ: ಸಚಿವ ಶ್ರೀರಾಮುಲುರನ್ನು (Sriramulu) ಪೆದ್ದ ಎಂದು ಟೀಕಿಸಿದ್ದ ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ವಿರುದ್ಧ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ವಾಗ್ದಾಳಿ ನಡೆಸಿದ್ರು. ಶ್ರೀರಾಮುಲು ಮುಂದೊಂದು ದಿನ ಸಿಎಂ ಆಗೋ ಕಾಲ ಬರುತ್ತೆ ಎಂದು ಬೊಮ್ಮಾಯಿ ಭವಿಷ್ಯ ನುಡಿದಿದ್ದಾರೆ.
Advertisement
ಎಸ್‍ಸಿ (SC) ಎಸ್‍ಟಿ (ST) ಸಮುದಾಯಕ್ಕೆ ಮೀಸಲಾತಿ ಹೆಚ್ಚಿಸಿದ ಮುಖ್ಯಮಂತ್ರಿಯನ್ನು ಸನ್ಮಾನಿಸುವ ನೆಪದಲ್ಲಿ ಬಳ್ಳಾರಿಯಲ್ಲಿ ಎಸ್‍ಟಿ ವಿರಾಟ್ ಸಮಾವೇಶ ನಡೆಸುವ ಮೂಲಕ ಬಿಜೆಪಿ (BJP) ಶಕ್ತಿ ಪ್ರದರ್ಶನ ನಡೆಸಿದೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಸಮ್ಮುಖದಲ್ಲಿ ರಾಜ್ಯ ಬಿಜೆಪಿ ಚುನಾವಣಾ ರಣಕಹಳೆ ಮೊಳಗಿಸಿದೆ. ಇದನ್ನೂ ಓದಿ: ಕೇಸರಿ, ಕುಂಕುಮ ಕಂಡ್ರೆ ಆಗಲ್ಲ; ಕಾಂಗ್ರೆಸ್‌ನಿಂದಲೇ ಮತಾಂತರಕ್ಕೆ ಕುಮ್ಮಕ್ಕು – ಸಿ.ಟಿ ರವಿ ಕಿಡಿ
Advertisement
ಶ್ರೀ ರಾಮುಲುರನ್ನು ಪೆದ್ದ ಎಂದು ಮೂದಲಿಸಿದ್ದ ಮಹಾ ಬುದ್ದಿವಂತ ಸಿದ್ದರಾಮಯ್ಯ ವಾಲ್ಮೀಕಿ ಸಮುದಾಯಕ್ಕೆ, ಹಾಲುಮತ ಸಮುದಾಯಕ್ಕೆ ಯಾವ ನ್ಯಾಯ ಒದಗಿಸಿದ್ದಾರೆ. ಆರಂಭದಿಂದಲೂ ವಾಲ್ಮೀಕಿ ಹಾಗೂ ಹಾಲುಮತ ಸಮುದಾಯಕ್ಕೆ ನ್ಯಾಯ ಒದಗಿಸಿದ ಏಕೈಕ ಧೀಮಂತ ನಾಯಕ ಶ್ರೀ ಬಿ.ಎಸ್.ಯಡಿಯೂರಪ್ಪನವರು.#BJPNavashaktiSamavesha pic.twitter.com/FQROy4huYR
— Basavaraj S Bommai (@BSBommai) November 20, 2022
Advertisement
ಈ ವೇಳೆ ಮಾತನಾಡಿದ ಬೊಮ್ಮಾಯಿ, ಸಿದ್ದರಾಮಣ್ಣ ಇಲ್ಲಿ ಬಂದು ನೋಡಪ್ಪ. ಎಲ್ಲಾ ಎಸ್‍ಸಿ, ಎಸ್‍ಟಿಯವರು ನಮ್ಮೊಂದಿಗೆ ಇದ್ದಾರೆ. ಇಲ್ಲಿದೆ ನೋಡು ನಿಜವಾದ ಅಹಿಂದ ಎನ್ನುವ ಮೂಲಕ ಸಿದ್ದರಾಮಯ್ಯಗೆ ಟಾಂಗ್ ಕೊಟ್ರು. ನಾವು ಮೀಸಲಾತಿ ಜಾಸ್ತಿ ಮಾಡಿದ್ದೀವಿ. ತಾಕತ್ ಇದ್ರೆ ನಮ್ಮನ್ನು ತಡೆಯಿರಿ ಎನ್ನುತ್ತಾ ತಲೆಗೆ ರುಮಾಲು ಕಟ್ಟುತ್ತಾ ಸಚಿವ ಶ್ರೀರಾಮುಲು ಕಾಂಗ್ರೆಸ್ ವಿರುದ್ಧ ಅಬ್ಬರಿಸಿದ ಪರಿಗೆ ಜನ ಹೋ ಎಂದು ಕೂಗಿದ್ರು. ಶಿಳ್ಳೆಗಳು ಮುಗಿಲುಮುಟ್ಟಿದ್ವು. ಮಾಜಿ ಸಿಎಂ ಬಿಎಸ್‍ವೈ ಮತ್ತು ಜೆಪಿ ನಡ್ಡಾ ನಮ್ಮ ಪಕ್ಷ ಮತ್ತೊಮ್ಮೆ ಅಧಿಕಾರಕ್ಕೆ ಬರುತ್ತೆ. ಕಾಂಗ್ರೆಸ್ ಕನಸು ಈಡೇರಲ್ಲ ಎಂದು ಘೋಷಿಸಿದ್ರು. ಇಂದಿನ ಸಮಾವೇಶದಲ್ಲಿ ಲಕ್ಷಾಂತರ ಕಾರ್ಯಕರ್ತರು ಪಾಲ್ಗೊಂಡಿದ್ದರು. ಇದನ್ನೂ ಓದಿ: ಸಾಮರಸ್ಯಕ್ಕಾಗಿ ತೊಂಬೆಗಳಲ್ಲಿ ದಲಿತ ಯುವಕರಿಗೆ ನೀರು ಕುಡಿಸಿದ ಅಧಿಕಾರಿಗಳು