ವಾಷಿಂಗ್ಟನ್: ಅಕ್ರಮ ವಲಸಿಗ ಅಪರಾಧಿಗಳ (illegal immigrant criminals) ಬಗ್ಗೆ ಮೃದು ಧೋರಣೆ ತೋರುವ ಸಮಯ ನಮ್ಮ ಆಡಳಿಯದಲ್ಲಿ ಮುಗಿದಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಹೇಳಿದ್ದಾರೆ.
ಇತ್ತೀಚೆಗೆ ಡಲ್ಲಾಸ್ ನಗರದಲ್ಲಿ (Dallas City) ನಡೆದ ಕರ್ನಾಟಕ ಮೂಲದ ಚಂದ್ರ ನಾಗಮಯ್ಯಲ್ಲಯ್ಯ ಶಿರಚ್ಛೇದದ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರು ತಮ್ಮ ಸೋಷಿಯಲ್ ಮೀಡಿಯಾ ವೇದಿಕೆ ಟ್ರುತ್ ಸೋಷಿಯಲ್‌ನಲ್ಲಿ ಪ್ರತಿಕ್ರಿಯಿಸಿದ್ದಾರೆ. ಪ್ರಕರಣದ ಆರೋಪಿಯ ಮೇಲೆ ಫಸ್ಟ್ ಗ್ರೇಡ್‌ನ ಕೊಲೆ ಆರೋಪ ಹೊರಿಸಲಾಗುವುದು. ಜೊತೆಗೆ ಕಾನೂನಿನ ಪೂರ್ಣ ಪ್ರಮಾಣದಲ್ಲಿ ವಿಚಾರಣೆಗೆ ಒಳಪಡಿಸಲಾಗುವುದು ಎಂದು ಹೇಳಿದ್ದಾರೆ. ಇದನ್ನೂ ಓದಿ: ಅಮೆರಿಕದಲ್ಲಿ ಪತ್ನಿ, ಮಗನ ಮುಂದೆ ಕರ್ನಾಟಕದ ವ್ಯಕ್ತಿಯ ಶಿರಚ್ಛೇದ – ಮೈ ನಡುಗಿಸುವ ವಿಡಿಯೋ ವೈರಲ್
ಟೆಕ್ಸಾಸ್‌ನ ಡಲ್ಲಾಸ್‌ನಲ್ಲಿ ಚಂದ್ರ ನಾಯಮಲ್ಲಯ್ಯ ಅವರ ಹತ್ಯೆಯ ಕುರಿತಾದ ಭಯಾನಕ ವರದಿಗಳ ಬಗ್ಗೆ ನನಗೆ ತಿಳಿದಿದೆ. ಕ್ಯೂಬಾದ ಅನ್ಯಕೋಮಿನ ವ್ಯಕ್ತಿಯೊಬ್ಬ ನಾಗಮಲ್ಲಯ್ಯ ಅವರ ಪತ್ನಿ ಮತ್ತು ಮಗನ ಮುಂದೆಯೇ ಕ್ರೂರವಾಗಿ ಶಿರಚ್ಛೇದ ಮಾಡಿದ್ದಾನೆ. ಅವನು ನಮ್ಮ ದೇಶದಲ್ಲಿ ಎಂದಿಗೂ ಇರಬಾರದು ಎಂದಿದ್ದಾರೆ. ಇದನ್ನೂ ಓದಿ: 50% ತೆರಿಗೆ ಹಾಕುವುದು ಸುಲಭವಾಗಿರಲಿಲ್ಲ, ಇದರಿಂದಾಗಿಯೇ ಭಾರತದ ಜೊತೆ ಭಿನ್ನಾಭಿಪ್ರಾಯ ಶುರುವಾಯ್ತು: ಟ್ರಂಪ್
ಅಲ್ಲದೇ ಕ್ಯೂಬನ್ ಪ್ರಜೆಯಾದ ದುಷ್ಟನನ್ನ ಕ್ಯೂಬಾ ದೇಶವೇ ತನ್ನಲ್ಲಿ ಇರಿಸಿಕೊಳ್ಳಲು ಬಯಲಿಲ್ಲ. ಹಾಗಾಗಿ ಈ ಹಿಂದೆ ಅಸಮರ್ಥ ಜೋ ಬೈಡನ್ ಅವರ ಅಡಿಯಲ್ಲಿ ನಮ್ಮ ದೇಶಕ್ಕೆ ಬಿಡುಗಡೆ ಮಾಡಿದರು. ಆದ್ರೆ ಈ ಅಕ್ರಮ ವಲಸೆ ಅಪರಾಧಿಗಳ ಬಗ್ಗೆ ಮೃದುವಾಗಿ ವರ್ತಿಸುವ ಸಮಯ ನನ್ನ ಮೃದು ಧೋರಣೆ ಈಗ ಮುಗಿದಿದೆ. ಬಂಧನದಲ್ಲಿರುವ ಈ ಅಪರಾಧಿಗೆ ಕಾನೂನಿನ ಅನ್ವಯ ಪೂರ್ಣ ಪ್ರಮಾಣದಲ್ಲಿ ವಿಚಾರಣೆಗೆ ಒಳಪಡಿಸುತ್ತೇವೆ. ಫಸ್ಟ್ ಗ್ರೇಡ್ ಕೊಲೆ ಆರೋಪದ ಮೇಲೆ ಕಠಿಣ ಶಿಕ್ಷೆ ವಿಧಿಸುವಂತೆ ಮಾಡುವುದಾಗಿಯೂ ಟ್ರಂಪ್ ಭರವಸೆ ನೀಡಿದ್ದಾರೆ.
ಏನಿದು ತಲೆ ತುಂಡಾದ ಪ್ರಕರಣ?
ಟೆಕ್ಸಾಸ್‌ನಲ್ಲಿ ಮೊಟೆಲ್ ಮ್ಯಾನೇಜರ್ ಆಗಿದ್ದ ಚಂದ್ರಮೌಳಿ ಬಾಬ್ ನಾಗಮಲ್ಲಯ್ಯ ಅವರನ್ನ ಕ್ಯೂಬನ್ ಪ್ರಜೆ ಕೊಬೋಸ್ ಮಾರ್ಟಿನೆಜ್ ಎಂಬಾತ ಭೀಕರವಾಗಿ ಹತ್ಯೆಗೈದಿದ್ದ ವಾಷಿಂಗ್‌ಮಿಷನ್ ವಿಚಾರಕ್ಕೆ ನಡೆದ ಗಲಾಟೆಯಲ್ಲಿ ತಲೆ ತುಂಡು ಮಾಡಿ ಬಳಿಕ ಅದನ್ನುಕಸದ ಬುಟ್ಟಿಗೆ ಎಸೆದುಬಂದಿದ್ದ. ಇದು ಸ್ಥಳೀಯರನ್ನೂ ಬೆಚ್ಚಿ ಬೀಳುವಂತೆ ಮಾಡಿತ್ತು. ಇದನ್ನೂ ಓದಿ: ವಲಸೆ ವಿರೋಧಿಸಿ 1 ಲಕ್ಷಕ್ಕೂ ಅಧಿಕ ಜನರಿಂದ ಲಂಡನ್ನಲ್ಲಿ ಮೆರವಣಿಗೆ – ಪ್ರತಿಭಟನೆ ಪೊಲೀಸರ ಮೇಲೆ ಹಲ್ಲೆ