ವೆಲ್ಲಿಂಗ್ಟನ್: ಇಂಗ್ಲೆಂಡ್ (England) ವಿರುದ್ಧ ನಡೆಯುತ್ತಿರುವ 2ನೇ ಟೆಸ್ಟ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡದ ಬೌಲರ್ ಟಿಮ್ ಸೌಥಿ (Tim Southee) ಭರ್ಜರಿ ಸಿಕ್ಸ್ ಬಾರಿಸುವ ಮೂಲಕ ಟೀಂ ಇಂಡಿಯಾ (Team India) ಮಾಜಿ ನಾಯಕ ಎಂ.ಎಸ್ ಧೋನಿ (MS Dhoni) ಅವರ ದಾಖಲೆಯನ್ನ ಸರಿಗಟ್ಟಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಪಂದ್ಯದಲ್ಲಿ ಭಾರತದ ವೇಗಿ ಮೊಹಮ್ಮದ್ ಶಮಿ, ಮೂರು ಭರ್ಜರಿ ಸಿಕ್ಸರ್ ಬಾರಿಸುವ ಮೂಲಕ ವಿರಾಟ್ ಕೊಹ್ಲಿ ಅವರ ಸಿಕ್ಸರ್ ದಾಖಲೆಗಳನ್ನು ಮುರಿದಿದ್ದರು. ಇದೀಗ ನ್ಯೂಜಿಲೆಂಡ್ (New Zealand) ವೇಗಿ ಧೋನಿಯ ಸಿಕ್ಸ್ ದಾಖಲೆಯನ್ನ ಸರಿಗಟ್ಟುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಇದನ್ನೂ ಓದಿ: WPL 2023: `ಕಮಲ’ ಮುಂಬೈ ಇಂಡಿಯನ್ಸ್ ಜೆರ್ಸಿ ಅನಾವರಣ
ಇಂಗ್ಲೆಂಡ್ ತಂಡ 2ನೇ ದಿನದಾಟದಲ್ಲಿ 87.1 ಓವರ್‌ಗಳಿಗೆ 435 ರನ್ ಗಳಿಸಿ ಡಿಕ್ಲೆರ್ ಘೋಷಿಸಿತು. ಬಳಿಕ ಪ್ರಥಮ ಇನಿಂಗ್ಸ್ ಆರಂಭಿಸಿದ ನ್ಯೂಜಿಲೆಂಡ್ 103 ರನ್‌ಗಳಿಗೆ ಪ್ರಮುಖ 3 ವಿಕೆಟ್‌ಗಳನ್ನ ಕಳೆದುಕೊಂಡಿತು. ಈ ವೇಳೆ ಕ್ರೀಸ್‌ಗೆ ಬಂದ ಟಿಮ್ ಸೌಥಿ 2ನೇ ದಿನದಾಟದ ಅಂತ್ಯಕ್ಕೆ 18 ಎಸೆತಗಳಲ್ಲಿ 2 ಭರ್ಜರಿ ಸಿಕ್ಸ್ಗಳೊಂದಿಗೆ 23 ರನ್ ಬಾರಿಸಿ ಮೂರನೇ ದಿನಕ್ಕೆ ಸ್ಟ್ರೈಕ್ ಕಾಯ್ದುಕೊಂಡಿದ್ದಾರೆ. ಇದನ್ನೂ ಓದಿ: ನಾನೊಬ್ಬ ವಿಫಲ ನಾಯಕ – ಕಿಂಗ್ ಕೊಹ್ಲಿ ಭಾವುಕ
Tim Southee has now hit as many Test sixes as MS Dhoni ???? pic.twitter.com/UFt5NokKsn
— Omar Faruque (@OmarFar46196492) February 25, 2023
ಹೌದು, ಈ ಎರಡು ಸಿಕ್ಸರ್‌ಗಳೊಂದಿಗೆ ಸೌಥಿ ಟೆಸ್ಟ್ ಕ್ರಿಕೆಟ್‌ನಲ್ಲಿ 78 ಸಿಕ್ಸರ್‌ಗಳನ್ನು ಪೂರ್ಣಗೊಳಿಸಿದ್ದಾರೆ. ಆ ಮೂಲಕ ರೆಡ್ ಬಾಲ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳನ್ನು ಸಿಡಿಸಿದ ಬ್ಯಾಟ್ಸ್‌ಮ್ಯಾನ್ ಗಳ ಪಟ್ಟಿಯಲ್ಲಿ ಭಾರತ ತಂಡದ ಮಾಜಿ ನಾಯಕ ಎಂ.ಎಸ್ ಧೋನಿ ದಾಖಲೆಯನ್ನ ಸರಿಗಟ್ಟಿದ್ದಾರೆ. ಆದರೆ ಧೋನಿ 144 ಟೆಸ್ಟ್ ಇನ್ನಿಂಗ್ಸ್‌ಗಳಲ್ಲಿ 78 ಸಿಕ್ಸ್‌ಗಳನ್ನ ಸಿಡಿಸಿದ್ದರೆ, ಟಿಮ್ ಸೌಥಿ 131 ಟೆಸ್ಟ್ ಇನ್ನಿಂಗ್ಸ್‌ಗಳಲ್ಲೇ ಈ ಸಾಧನೆ ಮಾಡಿರುವುದು ವಿಶೇಷ.
ಅತ್ಯಧಿಕ ಸಿಕ್ಸರ್ ಸಿಡಿಸಿದ ವೀರರು: ಬೆನ್ ಸ್ಟೋಕ್ಸ್ 109, ಬ್ರೆಂಡನ್ ಮೆಕಲಮ್ 107, ಆಡಮ್ ಗಿಲ್‌ಕ್ರಿಸ್ಟ್ 100, ಕ್ರಿಸ್ ಗೇಲ್ 98, ಜಾಕ್ ಕಾಲಿಸ್ 97, ವೀರೇಂದ್ರ ಸೆಹ್ವಾಗ್ 91, ಬ್ರಿಯಾನ್ ಲಾರಾ 88, ಕ್ರಿಸ್ ಕೈರ್ನ್ಸ್ 87, ವಿವಿಯನ್ ರಿಚರ್ಡ್ಸ್ 84, ಆಂಡ್ರ‍್ಯೂ ಫ್ಲಿಂಟಾಫ್ 82, ಮ್ಯಾಥ್ಯೂ ಹೇಡನ್ 82, ಮಿಸ್ಬಾ-ಉಲ್-ಹಕ್ 81, ಕೆವಿನ್ ಪೀಟರ್ಸನ್ 81, ಟಿಮ್ ಸೌಥಿ 78, ಎಂಎಸ್ ಧೋನಿ 78 ಹಾಗೂ ಏಂಜೆಲೊ ಮ್ಯಾಥ್ಯೂಸ್ 75 ಸಿಕ್ಸ್‌ಗಳನ್ನ ಸಿಡಿಸಿದ್ದಾರೆ. ಭಾನುವಾರ ಸ್ಟ್ರೈಕ್ ಕಾಯ್ದುಕೊಂಡಿರುವ ಸೌಥಿ ಇನ್ನೂ ಹಲವು ದಿಗ್ಗಜರ ದಾಖಲೆಗಳನ್ನ ಮುರಿಯುವ ಸಾಧ್ಯತೆಗಳಿವೆ ಎನ್ನಲಾಗಿದೆ.