ಉಸಿರು ಸಿನಿಮಾಗಾಗಿ ಒಂದಾದ ತಿಲಕ್ & ಪ್ರಿಯಾ

Public TV
3 Min Read
Usiru Cinema

ತ್ತೀಚಿನ ದಿನಗಳಲ್ಲಿ ಸಾಕಷ್ಟು ಜನ ನಿರ್ಮಾಪಕರು, ತಂತ್ರಜ್ಞರು ಸಿನಿಮಾಸಕ್ತಿಯಿಂದ ಕನ್ನಡ ಚಿತ್ರರಂಗಕ್ಕೆ ಬರುತ್ತಿದ್ದಾರೆ. ಅಲ್ಲದೇ ಚಿತ್ರ ನಿರ್ಮಾಣದಲ್ಲಿ ತೊಡಗಿಕೊಂಡಿದ್ದಾರೆ. ಅಂಥವರಲ್ಲಿ ಆರ್‌ಎಸ್‌ಪಿ ಪ್ರೊಡಕ್ಷನ್ಸ್ನ ಲಕ್ಷ್ಮಿ ಹರೀಶ್ ಕೂಡ ಒಬ್ಬರು. ಆರ್‌ಎಸ್‌ಪಿ ಗ್ರೂಪ್ ಆಫ್ ಕಂಪನೀಸ್ ನಡೆಸುತ್ತಿರುವ ಅವರು ತಮ್ಮ ಆರ್‌ಎಸ್‌ಪಿ ಪ್ರೊಡಕ್ಷನ್ ಮೂಲಕ ಸಸ್ಪೆನ್ಸ್, ಥ್ರಿಲ್ಲರ್ ಕಥಾಹಂದರ ಒಳಗೊಂಡ ಉಸಿರು (Usiru) ಎಂಬ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.

Usiru Cinema

ಈಗಾಗಲೇ ಚಿತ್ರದ ಚಿತ್ರೀಕರಣ ಮುಗಿದು, ಪೋಸ್ಟ್ ಪ್ರೊಡಕ್ಷನ್ ಕೊನೇ ಹಂತದಲ್ಲಿದೆ. ನಟ ತಿಲಕ್ (Tilak), ಪ್ರಿಯಾ ಹೆಗ್ಡೆ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಈ ಚಿತ್ರಕ್ಕೆ ಪ್ರಭಾಕರ್ ಕಥೆ, ಚಿತ್ರಕಥೆ ಬರೆದು ಆಕ್ಷನ್ ಕಟ್ ಹೇಳಿದ್ದಾರೆ. ಇತ್ತೀಚೆಗೆ ಈ ಚಿತ್ರದ ಟೀಸರ್‌ನ್ನು ನಟ ಶ್ರೀನಗರ ಕಿಟ್ಟಿ ಹಾಗೂ ರವಿ ಆರ್.ಗರಣಿ ಬಿಡುಗಡೆಗೊಳಿಸಿ ಚಿತ್ರತಂಡಕ್ಕೆ ಶುಭ ಹಾರೈಸಿದರು. ಇದನ್ನೂ ಓದಿ: ‘ಪೆನ್‌ ಡ್ರೈವ್‌’ಗಾಗಿ ಕಿಶನ್ ಜೊತೆ ಜಬರ್ದಸ್ತ್ ಕುಣಿದ ತನಿಷಾ ಕುಪ್ಪಂಡ

ಪೊಲೀಸ್ ಅಧಿಕಾರಿಯೊಬ್ಬ ಆತಂಕಕಾರಿ ವ್ಯಕ್ತಿಯಿಂದ ತನ್ನ ಹೆಂಡತಿಯನ್ನು ಹೇಗೆ ಕಾಪಾಡಿಕೊಳ್ಳುತ್ತಾನೆ ಎಂಬುದನ್ನು ಉಸಿರು ಚಿತ್ರದ ಮೂಲಕ ನಿರ್ದೇಶಕರು ಹೇಳಹೊರಟಿದ್ದಾರೆ. ಬೆಂಗಳೂರು, ಮಡಿಕೇರಿ, ಚಿಕ್ಕಮಗಳೂರು, ಮೂಡಿಗೆರೆ ಸುತ್ತಮುತ್ತ ಚಿತ್ರದ ಶೂಟಿಂಗ್ ನಡೆಸಲಾಗಿದೆ. ಇದನ್ನೂ ಓದಿ: ಟಾಕ್ಸಿಕ್ ನಟಿಗಾಗಿ ಬೆಂಗಳೂರಿನಿಂದ ಮುಂಬೈಗೆ ಲೊಕೇಶನ್ ಶಿಫ್ಟ್ !

ಈ ಸಂದರ್ಭದಲ್ಲಿ ನಿರ್ಮಾಪಕಿ ಲಕ್ಷ್ಮಿ ಹರೀಶ್ ಮಾತನಾಡಿ, ಕೇಳಿದ್ದು ಸುಳ್ಳಾಗಬಹುದು, ನೋಡಿದ್ದು ಸುಳ್ಳಾಗಬಹುದು, ನಿಧಾನಿಸಿ ಯೋಚಿಸಿದಾಗ ನಿಜವು ತಿಳಿವುದು ಎಂಬ ಅಂಶವನ್ನಿಟ್ಟುಕೊಂಡು ಈ ಚಿತ್ರ ಮಾಡಿದ್ದೇವೆ. ಪ್ರಭಾಕರ್ ಅವರು ಈ ಕಥೆಯನ್ನು ನಮಗೆ ಹೇಳಿದಾಗ ಆ ಸ್ಟೋರಿಲೈನ್ ಇಷ್ಟವಾಗಿ ಸಿನಿಮಾ ಪ್ರಾರಂಭಿಸಿದೆವು. ಚಿತ್ರವೀಗ ಕೊನೇ ಹಂತದ ಡಿಐ ಕೆಲಸದಲ್ಲಿದೆ ಎಂದರು. ಇದನ್ನೂ ಓದಿ: ಏನಿಲ್ಲ ಏನಿಲ್ಲ ಅನ್ನುತ್ತಲೇ ಒಂದೇ ಕಾರ್‌ನಲ್ಲಿ ಹೊರಟ ರಶ್ಮಿಕಾ, ದೇವರಕೊಂಡ

Usiru Cinema Team

ನಂತರ ನಿರ್ದೇಶಕ ಪ್ರಭಾಕರ್ ಮಾತನಾಡಿ, ನಿರ್ದೇಶನ ನನ್ನ 12 ವರ್ಷಗಳ ಕನಸು. ಒಂದೆರಡು ತಮಿಳು ಸಿನಿಮಾಗಳಿಗೆ ಸಹನಿರ್ದೇಶಕನಾಗಿ ಕೆಲಸ ಮಾಡಿದ್ದು, ಇದು ನನ್ನ ನಿರ್ದೇಶನದ ಪ್ರಥಮ ಚಿತ್ರ. ಸಸ್ಪೆನ್ಸ್, ಥ್ರಿಲ್ಲರ್ ಕಥಾನಕ ಇರೋ ಚಿತ್ರಕ್ಕೆ ಉಸಿರು ಎಂಬ ಟೈಟಲ್ ಯಾಕಿಟ್ಟಿದ್ದೇವೆ ಅಂತ ಸಿನಿಮಾ ನೋಡಿದಾಗ ತಿಳಿಯುತ್ತೆ. ಒಂದೊಳ್ಳೆ ಟೀಮ್ ಕಟ್ಟಿಕೊಂಡು ದೊಡ್ಡ ಮಟ್ಟದಲ್ಲಿ ಈ ಸಿನಿಮಾ ಮಾಡಿದ್ದೇವೆ. ಚಿತ್ರದಲ್ಲಿ ಎಲ್ಲಾ ರೀತಿಯ ಎಮೋಶನ್ಸ್ ಇದ್ದು, ಚಿತ್ರದ ಪ್ರತಿ ಪಾತ್ರಕ್ಕೂ ಅದರದೇ ಆದ ಐಡೆಂಟಿಟಿ ಇರುತ್ತದೆ. ಯಾವ ಪಾತ್ರವೂ ಹೀಗೆ ಬಂದು ಹೋಗುವುದಲ್ಲ. ಗಂಡನ ಪ್ರೀತಿ, ಸ್ನೇಹಸಂಬಂಧ ಹೀಗೆ ಎಲ್ಲಾ ರೀತಿಯ ಕಂಟೆಂಟ್ ಚಿತ್ರದಲ್ಲಿದ್ದು, ಚಿತ್ರದ ಟ್ಯಾಗ್ ಲೈನ್ 07.08.09. ತಿಲಕ್ ಒಬ್ಬ ಪೊಲೀಸ್ ಅಧಿಕಾರಿಯಾಗಿದ್ದು, ಅವರ ಪತ್ನಿಯ ಪಾತ್ರದಲ್ಲಿ ಪ್ರಿಯಾ ಹೆಗ್ಡೆ ನಟಿಸಿದ್ದಾರೆ ಎಂದು ಹೇಳಿದರು. ಇದನ್ನೂ ಓದಿ: ಅಡ್ವಾನ್ಸ್‌ ಹಣ ವಾಪಸ್‌ ಕೊಡದ ಆರೋಪ – ರಚಿತಾ ರಾಮ್‌ ವಿರುದ್ಧ ಮತ್ತೊಂದು ದೂರು

ಚಿತ್ರದ ನಾಯಕ ತಿಲಕ್ ಶೇಖರ್ ಪ್ರತಿಕ್ರಿಯಿಸಿ, ಚಿತ್ರದಲ್ಲಿ ನಾನೊಬ್ಬ ಇನ್ವೆಸ್ಟಿಗೇಶನ್ ಆಫೀಸರ್. ಈ ಥರದ ಕಾನ್ಸೆಪ್ಟ್ ಎಲ್ಲೂ ಕೇಳಿರಲಿಲ್ಲ. 07.08.09 ಎನ್ನುವ ಕೋಡ್ ವರ್ಡ್ ರೀತಿ ಚಿತ್ರದಲ್ಲಿ ತುಂಬಾ ಇಂಟರೆಸ್ಟಿಂಗ್ ಎಲಿಮೆಂಟ್‌ಗಳಿವೆ ಎಂದರು.

ನಾಯಕಿ ಪ್ರಿಯಾ ಹೆಗ್ಡೆ ಮಾತನಾಡಿ, ಚಿತ್ರದಲ್ಲಿ ನನ್ನ ಪಾತ್ರಕ್ಕೆ ಹಲವಾರು ಶೇಡ್ಸ್ ಇದೆ. ಅದರಲ್ಲಿ ಪತ್ನಿಯ ಪಾತ್ರವೂ ಒಂದು. ನನ್ನ ಪಾತ್ರದಿಂದ ಚಿತ್ರಕಥೆಗೆ ಮೇಜರ್ ಟ್ವಿಸ್ಟ್ ಸಿಗುತ್ತದೆ. ಮಹಿಳಾ ನಿರ್ಮಾಪಕಿಯ ಜೊತೆ ಕೆಲಸ ಮಾಡುತ್ತಿರುವುದು ಖುಷಿಯ ವಿಚಾರ. ಈ ಹಿಂದೆ ನಾನು ಮಾಡಿದ್ದ ತೆಲುಗು ಸಿನಿಮಾ ನೋಡಿದ ನಿರ್ಮಾಪಕರು ನನಗೆ ಕಾಲ್ ಮಾಡಿದ್ದರು. ಸುಮಾರು ಅಡೆತಡೆಗಳನ್ನು ಎದುರಿಸಿ ಸಿನಿಮಾ ಮುಗಿಸಿದ್ದೇವೆ ಎಂದು ಹೇಳಿದರು. ಇದನ್ನೂ ಓದಿ: ʼYou Are The Bestʼ – ಜಿ-7 ಶೃಂಗಸಭೆಯಲ್ಲಿ ಮೆಲೋಡಿ ಮೊಮೆಂಟ್

ಬಳಿಕ ಸಂಗೀತ ನಿರ್ದೇಶಕ ಆರ್.ಎಸ್ ಗಣೇಶ್ ನಾರಾಯಣನ್ ಪ್ರತಿಕ್ರಿಯಿಸಿ, ಹಾರ್ಟ್ಬೀಟ್ ಚಿತ್ರದಿಂದ ಆರಂಭವಾದ ನನ್ನ ಸಿನಿಜರ್ನಿಯ 25ನೇ ವರ್ಷದಲ್ಲಿ ಉಸಿರು ಚಿತ್ರಕ್ಕೆ ಮ್ಯೂಸಿಕ್ ಮಾಡಿದ್ದೇನೆ. ಚಿತ್ರದಲ್ಲಿ ಬೇರೆ ಬೇರೆ ಜಾನರ್‌ನಲ್ಲಿ 5 ಹಾಡುಗಳೂ ತುಂಬಾ ಚೆನ್ನಾಗಿ ಮೂಡಿಬಂದಿವೆ. ಅಭಿ ತುಂಬಾ ಚೆನ್ನಾಗಿ ಲಿರಿಕ್ ಬರೆದಿದ್ದಾರೆ. ಎಲ್ಲ ಪಾತ್ರಗಳಿಗೂ ಒಂದೊಂದು ಥೀಮ್ ಮಾಡಿದ್ದೇವೆ. ಫಾಸ್ಟ್ ಸ್ಕ್ರೀನ್ ಪ್ಲೇ ಚಿತ್ರದಲ್ಲಿದ್ದು, ಎಲ್ಲೂ ಬೋರ್ ಹೊಡೆಸುವುದಿಲ್ಲ ಎಂದರು. ಇದನ್ನೂ ಓದಿ: ಡಿಕೆ ಡಿಕೆ ಅಂತ ಕೂಗೋದಲ್ಲ, ಮುಂದೆಯೂ ನನಗೆ ಅವಕಾಶ ಕೊಡಿ: ಮತ್ತೆ ಸಿಎಂ ಆಸೆ ಬಿಚ್ಚಿಟ್ಟ ಡಿಕೆಶಿ

ಇನ್ನು ಮತ್ತೊಬ್ಬ ನಟ ಸಂತೋಷ್, ನಟಿ ಅಪೂರ್ವ, ಖಳನಟ ಅರುಣ್, ಸಾಹಿತಿ, ಡೈಲಾಗ್ ರೈಟರ್ ಬೈರವರಾಮ ಇವರೆಲ್ಲರೂ ಚಿತ್ರದ ಕುರಿತು ಮಾತನಾಡಿದರು.

Share This Article