ಕಲಬುರಗಿ: ಟ್ವಿಟ್ಟರ್, ಫೇಸ್‍ಬುಕ್‍ಗಿಂತಲೂ ಈಗೇನಿದ್ದರೂ ಟ್ರೋಲ್, ಟಿಕ್‍ಟಾಕ್‍ನದ್ದೇ ಸದ್ದು. ಧಾರವಾಡ, ಕಲಬುರಗಿಯ ಹುಡುಗಿಯರಿಬ್ಬರ ಮಧ್ಯೆ ಟಿಕ್‍ಟಾಕ್ ವಾರ್ ಶುರುರುವಾಗಿದ್ದು, ವಿಕೋಪಕ್ಕೆ ತಿರುಗಿದೆ.
ಇಬ್ಬರು ಯುವತಿಯರಿಬ್ಬರ ಬೈಗಳು ಕೇಳಿದ್ರೆ ನಿಮ್ಮ ಕಿವಿಗಲೇ ಬಿದ್ದು ಹೋಗುತ್ತವೆ. ಇದು ಅಂತಿಂತಾ ಜಗಳವಲ್ಲ ಬದಲಿಗೆ ಟಿಕ್‍ಟಾಕ್ ಜಡೆ ಜಗಳ. ಟಿಕ್‍ಟಾಕ್ ಮೂಲಕವೇ ಕಲಬುರಗಿಯ ಮೂಲದ ಮುಂಜುಳಾ ಪಾಟೀಲ್ ಹಾಗೂ ಇಂಡಿ ಮೂಲದ ಮಾಲಾಶ್ರೀ ಕಂಬಾರ್ ಫ್ರೆಂಡ್ಸ್ ಆಗಿದ್ದರು. ಆದರೆ ಅದೇನಾಯ್ತೊ ಗೊತ್ತಿಲ್ಲ. ಇಬ್ಬರ ಮಧ್ಯೆ ಆರಂಭವಾದ ಜಗಳ ಟಿಕ್‍ಟಾಕ್‍ನಲ್ಲಿ ತಾರಕಕ್ಕೇರಿದೆ. ಈ ಮಧ್ಯೆ ಧಾರವಾಡ ಮೂಲದ ಕ್ವೀನ್ ಮೇಕರ್ ಚೈತ್ರಾ ಎಂಬ ಯುವತಿ ಈ ಜಗಳಕ್ಕೆ ತುಪ್ಪ ಸುರಿದಿದ್ದಾಳೆ. ಮಾಲಾಶ್ರೀ ಅವರನ್ನು ಬೆಂಬಲಿಸಿ ಮಂಜುಳಾ ಪಾಟೀಲ್ ವಿರುದ್ಧ ವೈಯಕ್ತಿಕ ದಾಳಿ ಮಾಡಿದ್ದಾರೆ.
ತಾಳ್ಮೆ ಕಳೆದುಕೊಂಡ ಕಲಬುರಗಿಯ ಮುಂಜಾಳಾ ಸಹ ಟಿಕ್ ಟಾಕ್ ನಲ್ಲಿಯೇ ಅವಾಚ್ಯ ಶಬ್ದಗಳಿಂದ ನಿಂದಿಸಿ ಕ್ವೀನ್ ಚೈತ್ರಾಗೆ ವಾರ್ನ್ ಮಾಡಿದ್ದಾರೆ. ಇನ್ನು ಇಬ್ಬರಿಗೂ ಸಹ ಒಂದುವರೆ ಲಕ್ಷಕ್ಕೂ ಅಧಿಕ ಫಾಲೋವರ್ಸ್ ಇದ್ದು, ಇವರ ಜಗಳ ರಾಜ್ಯಾದ್ಯಂತ ಸದ್ದು ಮಾಡುತ್ತಿದೆ. ಸದ್ಯ ಈ ಬಗ್ಗೆ ಧಾರವಾಡ ವರ್ಸಸ್ ಕಲಬುರಗಿಯ ಮೂರನೇ ಮಹಾಯುದ್ಧ ಅಂತಾನೇ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಆರಂಭವಾಗಿದೆ.
ಇನ್ನು ಇವರಿಬ್ಬರ ನಡುವೆ ಯಾರ ಬೈಗುಳ ಫೇಮಸ್ ಆಯ್ತು? ಯಾರ ವಿಡಿಯೋಗೆ ಜಾಸ್ತಿ ವಿವರ್ಸ್, ಲೈಕ್ ಬರುತ್ತೋ ಅವರೇ ಮೇಲುಗೈ ಅಂತಾ ಬೆಟ್ಟಿಂಗ್ ಕೂಡ ಮಾಡುತ್ತಿದ್ದಾರೆ. ಮನೋರಂಜನೆಗೆಂದು ಇರುವ ಸಾಮಾಜಿಕ ತಾಣವೊಂದು ಜಡೆ ಜಗಳಕ್ಕೆ ಕಾರಣವಾಗಿದೆ. ಇನ್ನು ಇದು ಅದ್ಯಾವ ಅನಾಹುತಕಾರಿ ಮಟ್ಟಕ್ಕೆ ಮುಟ್ಟುತ್ತೋ ಗೊತ್ತಿಲ್ಲ. ಇನ್ನು ಕೆಲವರಿಗೆ ಇವರ ಜಗಳದಿಂದ ಬಿಟ್ಟಿ ಎಂಟರ್ ಟೈನ್‍ಮೆಂಟ್ ಸಿಗ್ತಿರೋದಂತೂ ಸತ್ಯ.