BollywoodCinemaLatestMain Post

ಕೆನಡಾ ಟಿಕ್ ಟಾಕ್ ತಾರೆ ಮೇಘಾ ಠಾಕೂರ್ ನಿಧನ

ಟಿಕ್ ಟಾಕ್ (Tik Tok) ಮೂಲಕ ಪರಿಚಿತರಾಗಿ, ಸೋಷಿಯಲ್ ಮಿಡಿಯಾದಲ್ಲಿ ಸೆನ್ಸೆಷನ್ ಕ್ರಿಯೆಟ್ ಮಾಡಿದ್ದ ಸ್ಟಾರ್ ಮೇಘಾ ಠಾಕೂರ್(Megha Thakur) ನಿಧನರಾಗಿದ್ದಾರೆ. 21ರ ನಟಿ ಮೇಘಾ ಠಾಕೂರ್ ಎಂದೂ ಬಾರದ ಲೋಕಕ್ಕೆ ಹೋಗಿದ್ದಾರೆ. ಕೆನಡಾದ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ.

ಮೇಘಾ ಠಾಕೂರ್ ಟಿಕ್‌ಟಾಕ್‌ನಲ್ಲಿ 9.30  ಲಕ್ಷ  ಹೆಚ್ಚು ಅನುಯಾಯಿಗಳನ್ನು ಹೊಂದಿದ್ದರು. ಇನ್ಸ್ಟಾಗ್ರಾಂ ಖಾತೆಯಲ್ಲಿ 1 ಲಕ್ಷಕ್ಕೂ ಅಧಿಕ ಫಾಲೋವರ್ಸ್ ಹೊಂದಿದ್ದಾರೆ. ತಮ್ಮ ಬಗೆ ಬಗೆಯ ರೀಲ್ಸ್ ಮೂಲಕ ಮೇಘಾ ಸದ್ದು ಮಾಡುತ್ತಿದ್ದರು. ಇದೀಗ ಮಗಳು ಮೇಘಾಳ ಅನಿರೀಕ್ಷಿತ ಸಾವಿನ ಸುದ್ದಿಯನ್ನು ಅವರ ಪೋಷಕರು ನಟಿಯ ಇನ್ಸ್ಟಾಗ್ರಾಂನಲ್ಲಿ ಬಹಿರಂಗಪಡಿಸಿ, ನವೆಂಬರ್ 24ರಂದು ನಿಧನರಾಗಿರುವುದಾಗಿ ಮಾಹಿತಿ ಹಂಚಿಕೊಂಡಿದ್ದಾರೆ.

View this post on Instagram

 

A post shared by Megha (@meghaminnd)

ಭಾರವಾದ ಹೃದಯದಿಂದ ನಾವು ನಮ್ಮ ಜೀವನದ ಬೆಳಕು, ಕಾಳಜಿಯುಳ್ಳ ಮತ್ತು ಸುಂದರ ಮಗಳು ಮೇಘಾ ಠಾಕೂರ್ ನವೆಂಬರ್ 24 ರ ಮುಂಜಾನೆ ಇದ್ದಕ್ಕಿದ್ದಂತೆ ಮತ್ತು ಅನಿರೀಕ್ಷಿತವಾಗಿ ನಿಧನರಾದರು. ಮೇಘಾ ಆತ್ಮವಿಶ್ವಾಸದ ಮತ್ತು ಸ್ವಾತಂತ್ರ ಯುವತಿಯಾಗಿದ್ದಳು. ಅವಳು ತನ್ನ ಅಭಿಮಾನಿಗಳನ್ನು ಪ್ರೀತಿಸುತ್ತಿದ್ದಳು ಮತ್ತು ಅವಳ ಮರಣದ ಬಗ್ಗೆ ನೀವು ತಿಳಿದುಕೊಳ್ಳಬೇಕೆಂದು ನಾವು ಬಹಿರಂಗಪಡಿಸಿದೆವು. ಈ ಸಮಯದಲ್ಲಿ, ನಾವು ಮೇಘಾಗೆ ನಿಮ್ಮ ಪ್ರಾರ್ಥನೆ ಕೋರುತ್ತೇವೆ. ನಿಮ್ಮ ಪ್ರಾರ್ಥನೆ ಅವಳ ಮುಂದಿನ ಪ್ರಯಾಣದಲ್ಲಿ ಅವಳೊಂದಿಗೆ ಇರುತ್ತದೆ ಎಂದು ಅವರ ಪೋಷಕರು ದೀರ್ಘವಾದ ಸಾಲುಗಳನ್ನು ಹಂಚಿಕೊಂಡಿದ್ದಾರೆ. ಈ ಮೂಲಕ ಮಗಳ ಸಾವಿನ ಬಗ್ಗೆ ಪೋಷಕರು ಭಾವುಕರಾಗಿದ್ದಾರೆ.

Live Tv

Leave a Reply

Your email address will not be published. Required fields are marked *

Back to top button