ಇಸ್ಲಾಮಾಬಾದ್: ಕಾಡ್ಗಿಚ್ಚಿಗೆ ಪಾಕಿಸ್ತಾನದ ಟಿಕ್‍ಟಾಕ್ ಸ್ಟಾರ್ ಪೋಸ್ ನೀಡಿ ವೀಡಿಯೋ ಮಾಡಿದ್ದಾರೆ. ಆದರೆ ಇದೀಗ ಈ ವೀಡಿಯೋವು ಸಾಮಾಜಿಕ ಜಾಲತಾಣದಲ್ಲಿ ಭಾರೀ ಟೀಕೆ ವ್ಯಕ್ತವಾಗುತ್ತಿದೆ.
ಹುಮೈರಾ ಅಸ್ಗರ್ ಪಾಕಿಸ್ತಾನದ ಟಿಕ್‍ಟಾಕ್ ಸ್ಟಾರ್. ಅವರು ಪೋಸ್ಟ್ ಮಾಡಿದ ವೀಡಿಯೋದಲ್ಲಿ ನಾನು ಎಲ್ಲಿದ್ದರೂ ಬೆಂಕಿ ಸ್ಫೋಟಗೊಳ್ಳುತ್ತದೆ ಎಂದು ಬರೆದುಕೊಂಡಿದ್ದಾರೆ. ವೀಡಿಯೋದಲ್ಲಿ ಬೆಂಕಿಯಿಂದ ಉರಿಯುತ್ತಿರುವ ಬೆಟ್ಟದ ಮುಂದೆ ಬಿಳಿ ಬಣ್ಣದ ಗೌನ್‍ನಲ್ಲಿ ನಡೆದುಕೊಂಡು ಬರುತ್ತಿದ್ದಾರೆ.
Advertisement
This tiktoker from Pakistan has set fire to the forest for 15 sec video.
Government should make sure that culprits are punished and the tiktoker along with the brand should be penalised. #Pakistan #TikTok pic.twitter.com/76ad77ULdJ
— Discover Pakistan ???????? | پاکستان (@PakistanNature) May 17, 2022
ಈ ವೀಡಿಯೋ ಇದೀಗ ಭಾರೀ ಟೀಕೆ ವ್ಯಕ್ತವಾಗಿದ್ದರಿಂದ ಹುಮೈರಾ ತನ್ನ ತಂಡವು ಬಿಡುಗಡೆ ಮಾಡಿದ ವೀಡಿಯೋದಲ್ಲಿರುವ ಬೆಂಕಿಯಲ್ಲಿ ತಾವು ಹಚ್ಚಿಲ್ಲ. ಜೊತೆಗೆ ವೀಡಿಯೋ ಮಾಡುವುದರಿಂದ ಯಾವುದೇ ಹಾನಿಯಾಗಿಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ. ಇದನ್ನೂ ಓದಿ: ಸಿಎಂ ಮನೆಗೆ ಮುತ್ತಿಗೆ ಹಾಕಲು ಹೊರಟಿದ್ದ ರೈತರು ಪೊಲೀಸರ ವಶಕ್ಕೆ
Advertisement
Advertisement
ಆದರೂ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರ ಕೆಂಗಣ್ಣಿಗೆ ಇವರು ಗುರಿಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಆ ವೀಡಿಯೋವನ್ನು ತೆಗೆದು ಹಾಕಿದ್ದಾರೆ. ಈ ವೀಡಿಯೋಕ್ಕೆ ಸಾಮಾಜಿಕ ಜಾಲತಾಣದಲ್ಲಿ ಟೀಕೆ ವ್ಯಕ್ತವಾಗಿದ್ದು, ಇದು ಕ್ರಿಮಿನಲ್ ನಡುವಳಿಕೆ ಎಂದು ಬರೆದಿದ್ದಾರೆ.
Advertisement
Incase police is having hard time figuring out who this is, here is a screenshot of her Instagram! pic.twitter.com/XFpXsnnPb7
— Discover Pakistan ???????? | پاکستان (@PakistanNature) May 17, 2022
ಮತ್ತೊಬ್ಬರು ಕಾಮೆಂಟ್ ಮಾಡಿ, ಅಧಿಕಾರಿಗಳು ಏನನ್ನೂ ಮಾಡದಿದ್ದರೆ, ಅವರನ್ನು ಸಾಮಾಜಿಕ ಮಾಧ್ಯಮ ಪ್ಲಾಟ್‍ಫಾರ್ಮ್‍ಗಳಲ್ಲಿ ನಿಬರ್ಂಧಿಸಬಹುದು ಎಂದು ಹಲವಾರು ಬಳಕೆದಾರರು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಉಪ್ಪಿನ ಕಾರ್ಖಾನೆಯಲ್ಲಿ ಗೋಡೆ ಕುಸಿತ- 12 ಕಾರ್ಮಿಕರ ದುರ್ಮರಣ
ಬೆಂಕಿಯನ್ನು ನಂದಿಸಲು ಪ್ರಯತ್ನಿಸಬೇಕೆ ಹೊರತು, ಗ್ಲಾಮರ್ ಆಗಿ ನಡೆದುಕೊಂಡು ಬರುವುದಲ್ಲ ಎಂದು ಪರಿಸರ ಕಾರ್ಯಕರ್ತೆ ಮತ್ತು ಇಸ್ಲಾಮಾಬಾದ್ ವನ್ಯಜೀವಿ ನಿರ್ವಹಣಾ ಮಂಡಳಿಯ ಅಧ್ಯಕ್ಷೆ ರಿನಾ ಸಯೀದ್ ಖಾನ್ ಸತ್ತಿ ಕಿಡಿಕಾರಿದರು.