ನವದೆಹಲಿ: ತಿಹಾರ್ ಜೈಲಿನ (Tihar Jail) ಆಡಳಿತ ಮಂಡಳಿಯ 50 ನೌಕರರ ಬಯೋಮೆಟ್ರಿಕ್ ತಾಳೆಯಾಗದ ಕಾರಣ ವಜಾಗೊಳಿಸಲು ನೋಟಿಸ್ ನೀಡಲಾಗಿದೆ. ಇವರ ನೇಮಕಾತಿ ವೇಳೆ ಬೇರೆ ಯಾರಾದರೂ ಪರೀಕ್ಷೆ ಬರೆದಿರಬಹುದು ಎಂದು ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ.
50 ನೌಕರರಲ್ಲಿ, 39 ವಾರ್ಡನ್‍ಗಳು, 9 ಸಹಾಯಕ ಸೂಪರಿಂಟೆಂಡೆಂಟ್ ಮತ್ತು ಇಬ್ಬರು ನರ್ಸ್‍ಗಳು ಸೇರಿದ್ದಾರೆ. ಇವರ ನೇಮಕಾತಿಗೆ ದೆಹಲಿ ಅಧೀನ ಸೇವೆಗಳ ಆಯ್ಕೆ ಮಂಡಳಿಯ (ಡಿಎಸ್‍ಎಸ್‍ಬಿ) ನಿರ್ದೇಶನದಂತೆ ಪರೀಕ್ಷೆಗಳನ್ನು ನಡೆಸಲಾಗಿತ್ತು. ಈ ಮೂರು ಹುದ್ದೆಗಳಿಗೆ ಸುಮಾರು 450 ಜನರನ್ನು ನೇಮಿಸಿಕೊಳ್ಳಲಾಗಿತ್ತು. ಇದನ್ನೂ ಓದಿ: ಛತ್ತೀಸ್‌ಗಢದ ದಾಂತೇವಾಡದಲ್ಲಿ ಬಾಂಬ್ ಬ್ಲಾಸ್ಟ್ – ಇಬ್ಬರು ಅರೆಸೇನಾಪಡೆ ಯೋಧರಿಗೆ ಗಾಯ
Advertisement
Advertisement
ಈಗ 450 ಉದ್ಯೋಗಿಗಳಲ್ಲಿ 50 ಮಂದಿಯ ಬಯೋಮೆಟ್ರಿಕ್ ಗುರುತು ಹೊಂದಿಕೆಯಾಗುತ್ತಿಲ್ಲ. ಈ ಕಾರಣದಿಂದಾಗಿ ಅವರನ್ನು ವಜಾಗೊಳಿಸುವ ಸೂಚನೆ ನೀಡಲಾಗಿದೆ. ಈ ಎಲ್ಲಾ ಉದ್ಯೋಗಿಗಳು ಎರಡು ವರ್ಷಗಳ ಕಾಲ ಪರೀಕ್ಷಾ ಅವಧಿಯಲ್ಲಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Advertisement
Advertisement
ನೋಟಿಸ್ ಪಡೆದವರು ಒಂದು ತಿಂಗಳೊಳಗೆ ಉತ್ತರಿಸಬೇಕು. ಈ ಬಗ್ಗೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿ ತಿಳಿಸಿದ್ದಾರೆ. ಇದನ್ನೂ ಓದಿ: ರಾಮ ಮಂದಿರ ಲೋಕಾರ್ಪಣೆ – ಗಣ್ಯರ ಜೊತೆ ಸಾಮಾನ್ಯ ಜನರಿಗೆ ಆಹ್ವಾನ – ಆಹ್ವಾನ ಪತ್ರಿಕೆಯಲ್ಲಿ ಏನಿದೆ?