ನವದೆಹಲಿ: ಅಧಿಕಾರಿಗಳ ಕಣ್ಣುತಪ್ಪಿಸಲು ಕೈದಿ ಮೊಬೈಲ್ ನುಂಗಿರುವ ಘಟನೆ ದೆಹಲಿಯ ತಿಹಾರ್( Tihar Jail) ಜೈಲಿನಲ್ಲಿ ನಡೆದಿದೆ.
ಕೈದಿ ಅಕ್ರಮವಾಗಿ ಮೊಬೈಲ್ ಬಳಕೆ ಮಾಡುತ್ತಿದ್ದನು. ಜನವರಿ 5ರಂದು ಜೈಲು ನಂಬರ್ 1ಕ್ಕೆ ಪೊಲೀಸ್ ಅಧಿಕಾರಿಗಳು ಮೊಬೈಲ್ ಪರಿಶೀಲನೆಗೆ ಬಂದಾಗ ಹೆದರಿ ಬೇರೆ ದಾರಿ ಕಾಣದೆ ಮೊಬೈಲ್ ನುಂಗಿದ್ದಾನೆ. ಇದನ್ನೂ ಓದಿ: ಪ್ರಧಾನ ಮಂತ್ರಿ ಭದ್ರತಾ ಸಿದ್ಧತೆ ಹೇಗಿರುತ್ತೆ ಗೊತ್ತಾ?
ಈ ಕುರಿತಾಗಿ ಮಾತನಾಡಿರುವ ಡೈರೆಕ್ಟರ್ ಜನರಲ್ ಸಂದೀಪ್ ಗೋಯೆಲ್, ಆತನನನ್ನು ಡಿಡಿಯು(Deen Dayal Upadhyay Hospital) ಆಸ್ಪತ್ರೆಗೆ ದಾಖಲಿಸಲಾಗಿದೆ. ಆತ ಆರೋಗ್ಯವಾಗಿದ್ದಾನೆ, ಆದರೆ ಮೊಬೈಲ್ ಫೋನ್ ಇನ್ನು ಹೊಟ್ಟೆಯಲ್ಲಿಯೇ ಇದೆ ಎಂದು ಜೈಲು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಪ್ರಧಾನಿ ಕಾರು ಸಿಲುಕಿದ್ದ ಸ್ಥಳದಲ್ಲಿ ಬಿಜೆಪಿ ಕಾರ್ಯಕರ್ತರ ದಂಡು – ವೀಡಿಯೋ ವೈರಲ್
ತಿಹಾರ್ ಜೈಲಿನಲ್ಲಿ ಶೀಘ್ರದಲ್ಲೇ ಎರಡು ಎಕ್ಸ್-ರೇ ಆಧಾರಿತ ಮಾನವ ದೇಹ ಸ್ಕ್ಯಾನರ್‌ಗಳನ್ನು(X-ray based human body scanners) ಅಳವಡಿಸಲು ನಿರ್ಧರಿಸಲಾಗಿದೆ. ಆಗ ಜೈಲು ಆವರಣದೊಳಗೆ ಅಕ್ರಮ ವಸ್ತುಗಳು ಮತ್ತು ಗ್ಯಾಜೆಟ್‌ಗಳು ಒಳನುಸುಳುವಿಕೆಯನ್ನು ತಡೆಯಲುಈ ಕ್ರಮವನ್ನು ವಹಿಸಲಾಗಿದೆ. ಮೊಬೈಲ್ ಬಳಕೆಯನ್ನು ತಡೆಯಲು ಹೊಸ ತಂತ್ರಜ್ಞಾನ ಮತ್ತು ಸಿಗ್ನಲ್ ನಿರ್ಬಂಧಿಸುವ ಟವರ್‌ಗಳನ್ನು ಹಾಕಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.