ಬೆಂಗಳೂರು: ಕೊಲೆ ಆರೋಪಿ ನಟ ದರ್ಶನ್‌ಗೆ (Darshan) ಮಧ್ಯಂತರ ಜಾಮೀನು ಸಿಕ್ಕಿದ್ರೂ ನೆಮ್ಮದಿಯಿಂದ ಇರವುದಕ್ಕೆ ಸಾಧ್ಯವಾದಂತೆ ಕಾಣುತ್ತಿಲ್ಲ. ಕಾರಣ ದರ್ಶನ್ ಮೇಲೆ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ. ದರ್ಶನ್‌ನ ಪ್ರತಿಯೊಂದು ಚಲನವಲನದ ಮೇಲೆ ಪೊಲೀಸರು (Bengaluru RR Nagar Police) ತೀವ್ರ ನಿಗಾ ವಹಿಸಿದ್ದಾರೆ ಎಂದು ಉನ್ನತ ಮೂಲಗಳಿಂದ ತಿಳಿದುಬಂದಿದೆ.
ಸದ್ಯ ಬೆಂಗಳೂರಿನ ಹೊಸಕೆರೆಹಳ್ಳಿ ನಿವಾಸದಲ್ಲಿ ಬೀಡುಬಿಟ್ಟಿರುವ ನಟ ದರ್ಶನ್ ಇಂದು ಮಗ ವಿನೀಶ್ ಹುಟ್ಟುಹಬ್ಬ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದು, ನಾಳೆ (ಅ.31) ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ. ಇದನ್ನೂ ಓದಿ: ಹೊಸ ಬಟ್ಟೆ ಧರಿಸಿ ಜೈಲಿಂದ ಹೊರಬಂದ ದರ್ಶನ್; ಬಳ್ಳಾರಿ ಜೈಲಿನ ಹೊರಗೆ ‘ಅಭಿಮಾನದ ಹೊಳೆ’
ದರ್ಶನ್ ಬೀಡುಬಿಟ್ಟಿರುವ ಆರ್.ಆರ್ ನಗರದ ನಿವಾಸದ ಬಳಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಮುನ್ನೆಚ್ಚರಿಕೆ ವಹಿಸಿದ್ದಾರೆ. ದರ್ಶನ್ ಮನೆ ಸಂಪರ್ಕಿಸುವ ಎರಡೂ ಕಡೆಯ ರಸ್ತೆಗಳಲ್ಲಿ ಬ್ಯಾರಿಕೇಡ್ ವ್ಯವಸ್ಥೆ ಮಾಡಲಾಗಿದೆ. ಜೊತೆಗೆ ಮನೆಯ ಬಳಿ ದರ್ಶನ್ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸೇರುವ ಸಾಧ್ಯತೆ ಇರುವುದರಿಂದ ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. ಆರ್.ಆರ್ ನಗರ ದರ್ಶನ್ ಮನೆ ಬಳಿ 2 ಕೆಎಸ್‌ಆರ್‌ಪಿ ತುಕಡಿ, ಆರ್.ಆರ್ ನಗರ ಪೊಲೀಸರು ಸೇರಿದಂತೆ 55ಕ್ಕೂ ಹೆಚ್ಚು ಪೊಲೀಸರನ್ನ ಭದ್ರತೆಗೆ ನಿಯೋಜಿಸಲಾಗಿದೆ.
ಪೊಲೀಸರ ಹದ್ದಿನ ಕಣ್ಣು:
ಕೊಲೆ ಆರೋಪಿ ದರ್ಶನ್ ಮೇಲೆ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ. ಮಧ್ಯಂತರ ಜಾಮೀನು ನೀಡಿರುವ ಹೈಕೋರ್ಟ್, ಹತ್ತು ಹಲವು ಷರತ್ತುಗಳನ್ನ ವಿಧಿಸಿ ಮಧ್ಯಂತರ ಜಾಮೀನು ನೀಡಲಾಗಿದೆ. ಹಾಗಾಗಿ ಆರೋಪಿ ದರ್ಶನ್‌ಗೆ ಕೋರ್ಟ್ ವಿಧಿಸಿರುವ ಒಂದೇ ಒಂದು ಷರತ್ತು ಉಲ್ಲಂಘನೆ ಮಾಡಿದರೂ ಅಥವಾ ಮಾಡುತ್ತಿದ್ದಾರೆ ಅನ್ನೋದು ಗೋತ್ತಾದರೂ ಕೂಡಲೆ ಪೊಲೀಸರು ಕೋರ್ಟ್ ಗಮನಕ್ಕೆ ತಂದು ದರ್ಶನ್‌ಗೆ ಕೊಟ್ಟಿರುವಂತಹ ಮಧ್ಯಂತರ ಜಾಮೀನು ರದ್ದು ಮಾಡಿಸಿ ಜೈಲಿಗೆ ಕಳಿಸಿ ಕೊಡುವ ಸಾಧ್ಯತೆಯಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಈ ನಡುವೆ ದರ್ಶನ್ ಚಿಕಿತ್ಸೆ ಹೊರತು ಪಡಿಸಿದಂತೆ ಸಾಕ್ಷಿದಾರರ ಮೇಲೆ ಒತ್ತಡ ಹಾಕುವ ಪ್ರಯತ್ನ ಮಾಡಿದ್ರೆ ಸಂಕಷ್ಟದಲ್ಲಿ ತಗಲಾಕಿಕೊಳ್ಳೊದು ಪಕ್ಕಾ. ಆದ್ದರಿಂದ ದರ್ಶನ್ ಚಿಕಿತ್ಸೆಗಷ್ಟೇ ಸಿಮಿತವಾಗಿದ್ದುಕೊಂಡು ಹೋದರೆ 45 ದಿನ ಮಧ್ಯಂತರ ಜಾಮೀನು ಅವದಿಯ ಒಳಗೆ ಚಿಕಿತ್ಸೆ ಮುಗಿಸಿಕೊಳ್ಳಬಹುದು ಇಲ್ಲದೇ ಹೊದ್ರೆ ಮತ್ತೆ ಬಳ್ಳಾರಿ ಜೈಲೇ ಗತಿಯಾಗುವುದು ಖಚಿತವಾಗಿದೆ. ಇದನ್ನೂ ಓದಿ: Darshan Case File | ಜೂನ್ 8 ರಿಂದ ಅ.30ರ ವರೆಗೆ ಏನೆಲ್ಲಾ ಆಯ್ತು?