ಬೆಂಗಳೂರು: ಇಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ರಾಜ್ಯದ 27ನೇ ಮುಖ್ಯಮಂತ್ರಿಯಾಗಿ ರಾಜಭವನದಲ್ಲಿ ಇಂದು ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ಇಂದು ಬೆಳಗ್ಗೆ ಸುಮಾರು 9 ಗಂಟೆಗೆ ರಾಜಭನದಲ್ಲಿ ಬಿಎಸ್‍ವೈ ಪ್ರಮಾಣ ವಚನ ಸ್ವೀಕಾರಮಾಡಲಿದ್ದು, ಇದಕ್ಕಾಗಿ ರಾಜಭವನದಲ್ಲಿ ಸಲಕ ಸಿದ್ಧತೆ ಕೂಡ ನಡೆದಿದೆ. ಯಡಿಯೂರಪ್ಪ ಪ್ರಮಾಣ ವಚನ ಸ್ವೀಕಾರದ ಪ್ರಯುಕ್ತ ವೀರಗಾಸೆ ನೃತ್ಯ ಮತ್ತು ಇತರೆ ಸಾಂಸ್ಕೃತಿಕ ಕಲಾಪ್ರಕಾರಗಳ ವೈಭವ ಏರ್ಪಟ್ಟಿದ್ದು, ರಾಜಭವನದ ಬಳಿ ಒಂದು ರೀತಿ ಸಂಭ್ರಮದ ವಾತಾವರಣ ನಿರ್ಮಾಣವಾಗಿದೆ.
Advertisement
Advertisement
ಇತ್ತ ಇನ್ನೊಂದು ಕಡೆ ಮುಂಜಾಗೃತ ಕ್ರಮವಾಗಿ ರಾಜಭವನದಲ್ಲಿ 16 ಸಾವಿರ ಪೊಲೀಸ್ ಭದ್ರತೆಯನ್ನು ನಿಯೋಜನೆ ಮಾಡಲಾಗಿದೆ. ರಾಜಭವನದ ಸುಮಾರು 500 ಮೀಟರ್ ದೂರದಿಂದಲೂ ಪೊಲೀಸರು ಬ್ಯಾರಿಕೇಡ್ ಹಾಕಿದ್ದು, ರಾಜಭವನದ ಸುತ್ತಮುತ್ತಾ ಪೊಲೀಸ್ ಭದ್ರತೆ ಆಯೋಜಿಸಲಾಗಿದೆ.
Advertisement
ಯಡಿಯೂರಪ್ಪ ಮನೆಯಿಂದ ಸುಮಾರು 8.30 ಕ್ಕೆ ಹೊರಡಲಿದ್ದು, ಬಿಎಸ್‍ವೈ ಜೊತೆ ಸುಮಾರು 500-1000 ಶಾಸಕರನ್ನು ರಾಜಭವನದ ಒಳಗೆ ಬಿಡುವ ಸಾಧ್ಯತೆ ಇದೆ. ಯಡಿಯೂರಪ್ಪ ಜೊತೆಗೆ 4 ಮಂದಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಶ್ರೀರಾಮುಲು, ಗೋವಿಂದ ಕಾರಜೋಳ, ಈಶ್ವರಪ್ಪ, ಆರ್.ಅಶೋಕ್ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ.
Advertisement
ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರು ಕೂಡ ರಾಜಭವನದ ಬಳಿ ಬಂದು ಪ್ರತಿಭಟನೆ ಮಾಡುವ ಸಾಧ್ಯತೆ ಇರುವ ಕಾರಣ ಪೊಲೀಸರು ಎಲ್ಲದಕ್ಕೂ ಸಿದ್ಧರಾಗಿದ್ದಾರೆ.